ದೇಗುಲಗಳ ನಗರಿ ಉಜ್ಜಯನಿಯಲ್ಲಿ ಕೇವಲ 10 ನಿಮಿಷದಲ್ಲಿ ಬೆಳಗಿದ 11.71 ಲಕ್ಷ ದೀಪಗಳು.! ಗಿನ್ನಿಸ್‌ ದಾಖಲೆಗೆ ಪಾತ್ರವಾಯ್ತು ʼಅರ್ಪಣಂ ಮಹೋತ್ಸವʼ

ಮಹಾಶಿವರಾತ್ರಿಯ ಅಂಗವಾಗಿ ಮಧ್ಯಪ್ರದೇಶದ ದೇಗುಲಗಳ ಪಟ್ಟಣವಾದ ಉಜ್ಜಯಿನಿಯಲ್ಲಿ ಶಿವಜ್ಯೋತಿ ಅರ್ಪಣಂ ಮಹೋತ್ಸವದ ಅಂಗವಾಗಿ ಬರೋಬ್ಬರಿ 11.71 ಲಕ್ಷ ಮಣ್ಣಿನ ದೀಪಗಳನ್ನು ಕೇವಲ 10 ನಿಮಿಷಗಳಲ್ಲಿ ಬೆಳಗುವ ಮೂಲಕ ಗಿನ್ನೆಸ್​ ದಾಖಲೆಯನ್ನು ನಿರ್ಮಿಸಲಾಗಿದೆ.ಗಿನ್ನೆಸ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ನ ಐವರು ಸದಸ್ಯರ ನಿಯೋಗವು ಈ ಬೃಹತ್​ ಪ್ರಯತ್ನವನ್ನು ಪರಿಶೀಲನೆ ಮಾಡಿದ ಬಳಿಕ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ರಿಗೆ ವಿಶ್ವ ದಾಖಲೆಯ ನಿರ್ಮಿಸಿದ ಬಗ್ಗೆ ಪ್ರಮಾಣ ಪತ್ರವನ್ನು ನೀಡಿದೆ.

ಗಿನ್ನೆಸ್​ ದಾಖಲೆ ನಡೆಯುವ ಸ್ಥಳದಲ್ಲಿ ಐದು ಡ್ರೋನ್​ ಕ್ಯಾಮರಾಗಳನ್ನು ನಿಯೋಜಿಸಲಾಗಿತ್ತು.

ಪತ್ನಿ ಸಾಧನಾ ಸಿಂಗ್​ ಜೊತೆ ಸೇರಿ 11 ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆಯ ಕಾರ್ಯಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ ಸಿಂಗ್ ಚೌಹಾಣ್​ ಚಾಲನೆಯನ್ನು ನೀಡಿದರು. ಇದಾದ ಬಳಿಕ ಸಾವಿರಾರು ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 7554 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿವೆ!

Wed Mar 2 , 2022
ಬುಧವಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,554 ಹೊಸ ಕರೋನವೈರಸ್ ಸೋಂಕುಗಳು ದಾಖಲಾಗಿವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿಯ ಪ್ರಕಾರ ಒಟ್ಟು COVID-19 ಪ್ರಕರಣಗಳ ಸಂಖ್ಯೆಯನ್ನು 4,29,38,599 ಕ್ಕೆ ತೆಗೆದುಕೊಂಡಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 85,680 ಕ್ಕೆ ಇಳಿದಿದೆ. ಭಾರತದಲ್ಲಿ 223 ಹೊಸ ಸಾವುಗಳು ಸಂಭವಿಸಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,14,246 ಕ್ಕೆ ತಲುಪಿದೆ. ಪಿಟಿಐ ವರದಿಯ ಪ್ರಕಾರ, ದೈನಂದಿನ COVID-19 ಪ್ರಕರಣಗಳು ಸತತ […]

Advertisement

Wordpress Social Share Plugin powered by Ultimatelysocial