ದೀಪಿಕಾ ಪಡುಕೋಣೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಜ್ಯೂನಿಯರ್ ಎನ್‍ಟಿಆರ್ ಜೊತೆ ನಟಿಸಲು ಆಸೆಯನ್ನು ವ್ಯಕ್ತಪಡಿಸಿದರು.

ಮುಂಬೈ : ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಜ್ಯೂನಿಯರ್ ಎನ್‍ಟಿಆರ್ ಜೊತೆ ನಟಿಸಲು ಆಸೆಯನ್ನು ವ್ಯಕ್ತಪಡಿಸಿದರು. ದೀಪಿಕಾ ಪಡುಕೋಣೆ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಕೆಲಸ ಮಾಡಲು ಬಯಸುವ ನಟರು ಮತ್ತು ನಿರ್ದೇಶಕರ ಪಟ್ಟಿಯನ್ನು ಬಹಿರಂಗಪಡಿಸಿದ್ದಾರೆ.ತಾನು ಜ್ಯೂನಿಯರ್ ಎನ್‌ಟಿಆರ್‌ನೊಂದಿಗೆ ನಟಿಸಲು ಇಷ್ಟ ಪಡುತ್ತೇನೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಜೊತೆಯೂ ನಟಿಸಲು ಇಷ್ಟ ಎಂದು ತಿಳಿಸಿದರು. ನಾನು ಎಲ್ಲರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ.ಆದರೆ ನಾನು ಜೂನಿಯರ್ ಎನ್‍ಟಿಆರ್ ಮತ್ತು ಅಲ್ಲು ಅರ್ಜುನ್ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲಿಯೂ ನಾನು ಜೂನಿಯರ್ ಎನ್‍ಟಿಆರ್ ಅವರೊಂದಿಗೆ ನಟಿಸಲು ಇಷ್ಟಪಡುತ್ತೇನೆ. ಆದ ವ್ಯಕ್ತಿತ್ವ ನನಗೆ ಇಷ್ಟವಾಯ್ತು ಎಂದು ಹೊಗಳಿದರು. ನಿರ್ದೇಶಕರ ಬಗ್ಗೆ ಮಾತನಾಡಿದ ಅವರು, ‘ಯೇ ಜವಾನಿ ಹೈ ದೀವಾನಿ’ ಸಿನಿಮಾದ ನಿರ್ದೇಶಕ ‘ಅಯಾನ್ ಮುಖರ್ಜಿ’ ಅವರೊಂದಿಗೆ ಮತ್ತೆ ಕೆಲಸ ಮಾಡಲು ಬಯಸುತ್ತೇನೆ. ಅದೇ ರೀತಿ ನಾನು ರಾಜಮೌಳಿ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಮಲ್ ಹಾಸನ್, ಸ್ವರಾ ಭಾಸ್ಕರ್ ಮತ್ತು ಇತರ ಸೆಲೆಬ್ರಿಟಿಗಳು ಹಿಜಾಬ್ ನಿಷೇಧದ ಬಗ್ಗೆ ಪ್ರತಿಕ್ರಿಯೇ;

Sat Feb 12 , 2022
ಫೆಬ್ರವರಿ 5 ರಂದು ಕರ್ನಾಟಕ ಸರ್ಕಾರವು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಅನ್ನು ಕಡ್ಡಾಯಗೊಳಿಸಿ “ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ” ಬಟ್ಟೆಗಳನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ ನಂತರ ನಡೆಯುತ್ತಿರುವ ಹಿಜಾಬ್ ವಿವಾದವು ಭುಗಿಲೆದ್ದಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial