VIPRO:ಶೇ.8.5 GDP ನಿರೀಕ್ಷೆ,ಸೆನ್ಸೆಕ್ಸ್ 800 ಅಂಕ ಏರಿಕೆ;

 2023ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ.8ರಿಂದ 8.5ರ ನಿರೀಕ್ಷೆಯಲ್ಲಿರುವುದಾಗಿ ಕೇಂದ್ರ ಸರ್ಕಾರ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿರುವುದು ಹಾಗೂ ಫೆ.1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಸೋಮವಾರ (ಜನವರಿ 31) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 813.94 ಅಂಕಗಳಷ್ಟು ಏರಿಕೆಯಾಗಿದ್ದು, 58,014.17 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 237.80 ಅಂಕ ಏರಿಕೆಯೊಂದಿಗೆ 17,339.80 ಅಂಕಗಳ ಮಟ್ಟಕ್ಕೆ ತಲುಪಿದೆ.

ಟೆಕ್ ಮಹೀಂದ್ರ, ಟಾಟಾ ಮೋಟಾರ್ಸ್, ವಿಪ್ರೋ, ಬಿಪಿಸಿಎಲ್ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ಲಾಭಗಳಿಸಿದೆ.

ಮತ್ತೊಂದೆಡೆ ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯುಪಿಎಲ್, ಕೋಲ್ ಇಂಡಿಯಾ ಮತ್ತು ಎಚ್ ಯುಎಲ್ ಷೇರು ನಷ್ಟ ಕಂಡಿದೆ.

ಇಂದು ಮಧ್ಯಾಹ್ನ 12.30ರ ಹೊತ್ತಿಗೆ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 1,015 ಅಂಕಗಳಷ್ಟು ಏರಿಕೆಯಾಗಿದ್ದು, 58,215 ಅಂಕಗಳಲ್ಲಿ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 300 ಅಂಕ ಏರಿಕೆಯೊಂದಿಗೆ 17,402 ಅಂಕಗಳ ಮಟ್ಟ ತಲುಪಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

UNION BUDGET:ಸಂಸತ್ತಿನಲ್ಲಿ ಬಜೆಟ್​ ಅಧಿವೇಶನ ಆರಂಭ;

Mon Jan 31 , 2022
ಸಂಸತ್ತಿನಲ್ಲಿ ಬಜೆಟ್​ ಅಧಿವೇಶನ ಆರಂಭವಾಗಿದೆ. ಬಜೆಟ್​ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಆರ್ಥಿಕ ಸಮೀಕ್ಷೆಯ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ. 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು 8-8.5 ಪ್ರತಿಶತದಷ್ಟು ಬೆಳವಣಿಗೆ ಕಾಣಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದಾಗಿದೆ. ಜಿಡಿಪಿ ಬೆಳವಣಿಗೆ ಕೂಡ 9.2 ಪ್ರತಿಶತದವರೆಗೆ ವಿಸ್ತರಿಸಿದೆ ಎಂದು ಅವರು ಹೇಳಿದ್ರು.2022ನೇ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯ ವಿವರ ಇಲ್ಲಿದೆ ನೋಡಿ : ಆರ್ಥಿಕ ಸಮೀಕ್ಷೆಯ ಪ್ರಕಾರ […]

Advertisement

Wordpress Social Share Plugin powered by Ultimatelysocial