ಡಿ.ಕೆ. ಶಿವಕುಮಾರ್:40 ವರ್ಷದ ರಾಜಕೀಯ ಜೀವನದಲ್ಲಿ ಇಂದು ದುಃಖದ ದಿನ;

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಶಿವಮೊಗ್ಗದ ಕಾಲೇಜೊಂದರಲ್ಲಿ ಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಹಾರಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಕೆಳಗಿಳಿಸಿದ್ದು ನೋಡಿ ಸಹಿಸಲಾಗಲಿಲ್ಲ. ಇದು ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಅತಿ ದುಃಖದ ದಿನವಾಗಿದೆ ಎಂದರು.

ದೇಶ ಕಟ್ಟಲು ಐಕ್ಯತೆಗಾಗಿ ಹಲವರು ಪ್ರಾಣ ಕೊಟ್ಟಿದ್ದಾರೆ. ಆದರೆ ಇಲ್ಲಿ ಮಕ್ಕಳಲ್ಲಿ ಮತೀಯ ವಿಷಬೀಜ ಬಿತ್ತುವ ಕೆಲಸ ನಡೆಸಲಾಗುತ್ತಿದೆ. ರಾಷ್ಟ್ರಧ್ವಜ ಇಳಿಸಿರುವುದಕ್ಕೆ ಯಾರು ಉತ್ತರ ಕೊಡುತ್ತಾರೆ ? ಎಂದು ಪ್ರಶ್ನಿಸಿದ್ದಾರೆ.

ಕಾಲೇಜುಗಳಲ್ಲಿ ಹಲವೆಡೆ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆಯುತ್ತಿದೆ. ಒಂದು ವಾರದ ಮಟ್ಟಿಗಾದರೂ ಶಾಲೆಗಳಿಗೆ ರಜೆ ಘೋಷಣೆ ಮಾಡಬೇಕು. ಕಾಲೇಜು ಬಂದ್ ಮಾಡದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತೆ. ಇಂತದ್ದಕ್ಕೆಲ್ಲ ಸಿಎಂ ಬಸವರಾಜ್ ಬೊಮ್ಮಾಯಿ ಅವಕಾಶ ನೀಡಬಾರದು. ತಕ್ಷಣ ನಡೆಯುತ್ತಿರುವ ಘಟನೆಗಳನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾನು ಮೊಂಡಲ್ ಕುರಿತು ಲತಾ ಮಂಗೇಶ್ಕರ್ ಅವರ ವಿಮರ್ಶಾತ್ಮಕ ಕಾಮೆಂಟ್: ಅನುಕರಣೆ ವಿಶ್ವಾಸಾರ್ಹವಲ್ಲ, ಮೂಲವಾಗಿರಿ [ಥ್ರೋಬ್ಯಾಕ್]

Tue Feb 8 , 2022
    ಲತಾ ಮಂಗೇಶ್ಕರ್ ಅವರನ್ನು ತಲೆ ಎತ್ತಿ ನೋಡದ ಗಾಯಕಿ ದೇಶದಲ್ಲಿಯೇ ಇಲ್ಲ. ಅನೇಕರು ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಹಾಡುವುದರ ಮೂಲಕ ಜೀವನ ನಡೆಸಿದರೆ, ಹಲವರು ಅವರಿಂದ ಹೆಚ್ಚು ಸ್ಫೂರ್ತಿ ಪಡೆದಿದ್ದಾರೆ. ಮತ್ತು ಅಂತಹ ಗಾಯಕಿ ರಾನು ಮೊಂಡಲ್. ರೈಲ್ವೇ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಗೀತೆಯಾದ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡನ್ನು ಯಾರಾದರೂ ರೆಕಾರ್ಡ್ ಮಾಡಿದಾಗ ರಾನು ಮೊಂಡಲ್ ಖ್ಯಾತಿಯನ್ನು ಗಳಿಸಿದರು. ಲತಾ ಮಂಗೇಶ್ಕರ್ […]

Advertisement

Wordpress Social Share Plugin powered by Ultimatelysocial