ವಿಜಯ್ ಡ್ರೀಮ್‌ ಪ್ರಾಜೆಕ್ಟ್ ‘ಭೀಮ’ನಿಗೆ ಮುಹೂರ್ತ!

 

“ದುನಿಯಾ’ ವಿಜಯ್‌ ನಟನೆ, ನಿರ್ದೇಶನದ “ಭೀಮ’ ಚಿತ್ರಕ್ಕೆ ಮುಹೂರ್ತ ನಡೆದಿದೆ. ನಗರದ ಬಂಡಿಮಾಕಾಳಮ್ಮ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್‌, ನಾಗಿ ಸೇರಿದಂತೆ ಚಿತ್ರರಂಗದ ಅನೇಕರು ಆಗಮಿಸಿ, ಚಿತ್ರಕ್ಕೆ ಶುಭಕೋರಿದರು.

ಚಿತ್ರದ ಬಗ್ಗೆ ಮಾತನಾಡುವ ವಿಜಯ್‌, “ಸಲಗ ನಂತರ ಭೀಮ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯುವ ಹಾಗೂ ಉತ್ಸಾಹಿ ನಿರ್ಮಾಪಕರಾದ ಜಗದೀಶ್‌ ಹಾಗೂ ಕೃಷ್ಣ ಸಾರ್ಥಕ್‌ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾನು ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಸಿದ್ದಪಡಿಸಿಕೊಂಡಿದ್ದೀನಿ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಬಹಳ ದಿನಗಳ ಚರ್ಚೆ ನಡೆದ ನಂತರ ಭೀಮ ಎಂಬ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೀವಿ. ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನೀಡಲಿದ್ದಾರೆ. ನಿರ್ದೇಶನದ ಜೊತೆಗೆ ನಾನು ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದೀನಿ. “ಜಯಮ್ಮನ ಮಗ’ ಚಿತ್ರದಲ್ಲಿ ನನ್ನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಲ್ಯಾಣಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ಲ್ಯಾಕ್‌ ಡ್ರ್ಯಾಗನ್‌ ಮಂಜು ಅವರು ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ’ ಎಂದು ವಿವರ ನೀಡಿದರು.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ನಟಿ ಕಲ್ಯಾಣಿ ಮಾತನಾಡಿ, “ಜಯಮ್ಮನ ಮಗ’ ಚಿತ್ರದಲ್ಲಿ ನನಗೆ ತಾಯಿಯ ಪಾತ್ರ ನೀಡಿದ್ದರು. ಈ ಚಿತ್ರದಲ್ಲೂ ನಾನು ಅವರ ತಾಯಿ. ಆ ಚಿತ್ರದಲ್ಲಿ ಸೌಮ್ಯ ಸ್ವಭಾವದ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಸ್ವಲ್ಪ ರೌದ್ರ ಸ್ವಭಾವದವಳು’ ಎಂದರು.

ಸಿನಿಮಾ ಆರಂಭವಾದ ಬಗ್ಗೆ ನಿರ್ಮಾಪಕ ಕೃಷ್ಣ ಸಾರ್ಥಕ್‌ ಮಾತನಾಡಿದರು. “ಭೀಮ’ ಶೀರ್ಷಿಕೆ ನೀಡಿದ್ದ ನಟಿ ಮಾಲಾಶ್ರೀ ಅವರಿಗೆ ನಿರ್ಮಾಪಕ ಜಗದೀಶ್‌ ಧನ್ಯವಾದ ತಿಳಿಸಿದರು. ಚಿತ್ರಕ್ಕೆ ಮಾಸ್ತಿ ಸಂಭಾಷಣೆ, ಚರಣ್‌ ರಾಜ್‌ ಸಂಗೀತವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠ್ಯಕ್ರಮದಲ್ಲಿ ರಾಮಾಯಣ-ಭಗವದ್ಗೀತೆ ಅಳವಡಿಸುವ ಮಾತಿಲ್ಲ.

Thu Apr 21 , 2022
ತುಮಕೂರು, ಏ.21- ಪಠ್ಯಕ್ರಮದಲ್ಲಿ ರಾಮಾಯಣ-ಭಗವದ್ಗೀತೆ ಅಳವಡಿಸುವ ಮಾತಿಲ್ಲ. ಅದರ ಬದಲಾಗಿ ನೈತಿಕ ಶಿಕ್ಷಣ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ಕೋರಾದಲ್ಲಿ ಸರ್ವಮಂಗಳ ನಾಗಯ್ಯ ಅವರ ಸ್ಮರಣಾರ್ಥ ಮಮತಾ ಹರ್ಷ ದಂಪತಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಎಂದರೆ ಮನುಷ್ಯನ ಜೀವನಕ್ಕೆ ಅಗತ್ಯವಿರುವ ಎಲ್ಲವನ್ನೂ ಕಲಿಸುವುದು ಎಂದರ್ಥ ಎಂದರು. […]

Advertisement

Wordpress Social Share Plugin powered by Ultimatelysocial