ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅಭಿಮತ .

ವಿಷ್ಣು ಸಹಸ್ರನಾಮ ಪಠಣದಿಂದ ವಿವಿಧ ರೋಗ, ಬಂಧನ, ಭಯ, ಆಪತ್ತು’ ಎಂಬ ವಿಘ್ನಗಳಿಂದ ದೂರವಾಗಬಹುದು ಎಂದು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹೇಳಿದರು. ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್‌ ಮೈಸೂರು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಮಾತ್ಮನ ಒಂದೇ ತತ್ವದ ಕಡೆ ನಮ್ಮನ್ನೂ ತೆಗೆದುಕೊಂಡು ಹೋಗುವುದಿದ್ದರೆ ಅದು ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ ಪಠಣ ಮಾತ್ರ ಎಂದರು. ಗ್ಲೋಬಲ್’ ವಿಷ್ಣು ಸಹಸ್ರನಾಮ
ಸತ್ಸಂಗ್ ಫೆಡರೇಷನ್ ಪ್ರಪಂಚದ ನಾನಾ ರಾಷ್ಟ್ರಗಳಲ್ಲಿ ಹಾಗೂ ಭಾರತದ ಉದ್ದಗಲಕ್ಕೂ ವಿಷ್ಣು ಸಹಸ್ರನಾಮದ ಪ್ರಸರಣಕ್ಕಾಗಿಯೇ ಮೀಸಲಾದ ಸಂಸ್ಥೆಯಾಗಿದೆ. ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಅವರ ಸೇವೆ ಅಪಾರ ಎಂದರು.

ಡಾ.ಭಾಷ್ಯಂ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ್‌ ಸಂಸ್ಥೆಯ ಸಂಸ್ಥಾಪಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ವಿಶ್ವ ವಿಪತ್ರಯೀ ಪರಿಷತ್ ಅಧ್ಯಕ್ಷ ಎಸ್.ರಘುನಾಥ್, ಸಂಸ್ಥೆಯ ಮೈಸೂರು ವಿಭಾಗದ ಸಂಚಾಲಕ ರಮಾಕಾಂತ ಶೆಣೈ, ಎಚ್‌.ಕೆ.ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ವಿ.ಭರದ್ವಾಜ್‌, ಡಾ.ಜಗನ್ನಾಥ್ ಶೆಣೈ, ಮಂಗಳಾ ಭಾಸ್ಕರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಲತಾ ಬಾಲಕೃಷ್ಣ, ಶೇಷಾದ್ರಿ, ಸುಚಿಂದ್ರ, ಚಕ್ರಪಾಣಿ, ಇತರರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ: ಇಂಥಾ ಕಾಲದಲ್ಲಿ ಲಕ್ಷಾಂತರ ರೂಪಾಯಿ ಕೈಗೆ ಸಿಕ್ಕರೂ ಮರಳಿ ಕೊಡುವವರು ಯಾರಾದರೂ ಇರ್ತಾರಾ ?

Sat Feb 11 , 2023
100-200 ರೂಪಾಯಿಗಳಿಗೆ ಕೊಲೆ ನಡೆಯುವ ಕಾಲ ಇದು. ಇಂಥಾ ಕಾಲದಲ್ಲಿ ಲಕ್ಷಾಂತರ ರೂಪಾಯಿ ಕೈಗೆ ಸಿಕ್ಕರೂ ಮರಳಿ ಕೊಡುವವರು ಯಾರಾದರೂ ಇರ್ತಾರಾ ? ಚಾನ್ಸೇ ಇಲ್ಲ ಅಂತ ಹೇಳೋದಕ್ಕೆನೇ ಹೋಗ್ಬೇಡಿ. ಅಂಥವರೂ ನಮ್ಮ ನಿಮ್ಮ ನಡುವೆ ಇದ್ದಾರೆ. ಆಗಾಗ ಅವರ ಸುದ್ದಿಗಳು ಮಾಧ್ಯಮದಲ್ಲಿ ಕೇಳಿ ಬರ್ತಾನೆ ಇವೆ. ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ಇ- ರಿಕ್ಷಾ ಚಾಲಕರೊಬ್ಬರಿಗೆ 25 ಲಕ್ಷ ರೂಪಾಯಿ ಇರುವ ಬ್ಯಾಗೊಂದು ಸಿಕ್ಕಿದ್ದು. ಅವರು ಅದನ್ನ ನೇರವಾಗಿ ಪೊಲೀಸರಿಗೆ ತಂದು […]

Advertisement

Wordpress Social Share Plugin powered by Ultimatelysocial