ಡಿ.ಕೆ. ಶಿವಕುಮಾರ್​ಗೆ ಬ್ರೇಕ್ ಹಾಕಲು ದೆಹಲಿಯಲ್ಲಿ ಯತ್ನ: ಹೈಕಮಾಂಡ್​ಗೆ ದೂರಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರು

ಡಿ.ಕೆ. ಶಿವಕುಮಾರ್​ಗೆ ಬ್ರೇಕ್ ಹಾಕಲು ದೆಹಲಿಯಲ್ಲಿ ಯತ್ನ: ಹೈಕಮಾಂಡ್​ಗೆ ದೂರಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರು

ಚುನಾವಣೆ ವರ್ಷ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ನಾಯಕತ್ವದ ಪೈಪೋಟಿ ತೀವ್ರಗೊಂಡಿದ್ದು, ಈ ಬೆಳವಣಿಗೆ ಪಕ್ಷದ ಹೈಕಮಾಂಡ್​ಗೆ ಕಸಿವಿಸಿ ತಂದಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆಗಳು ರಾಜಕೀಯ ನಾಯಕರ ಇಮೇಜ್ ಹೆಚ್ಚಿಸಿದ ಉದಾಹರಣೆ ಇದೆ.

ಇದೇ ಹಾದಿಯಲ್ಲಿ ಚುನಾವಣೆಗೆ ಮುನ್ನ ನಾಯಕತ್ವ ಚಹರೆ ಕಟ್ಟಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಸಂಘಟಿಸಿದ್ದಾರೆ. ಇದು ಸಿದ್ದರಾಮಯ್ಯ ಆಪ್ತ ಶಾಸಕರಿಗೆ ಸಹ್ಯವೆನಿಸಿಲ್ಲ. ಹಳೇ ಮೈಸೂರು ಭಾಗವನ್ನು ಗಮನದಲ್ಲಿಟ್ಟುಕೊಂಡು ಶಿವಕುಮಾರ್ ಪಾದಯಾತ್ರೆಗೆ ವೇಳಾಪಟ್ಟಿ ಸಿದ್ಧಮಾಡಿಕೊಂಡು ಪೂರ್ವಭಾವಿ ಸಿದ್ಧತಾ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಆಪ್ತ ಶಾಸಕರು ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ದೂರು ನೀಡಿದ್ದರು. ಈ ದೂರನ್ನು ಮುಂದಿಟ್ಟುಕೊಂಡು ಎಲ್ಲರೆದುರು ಇರಿಸುಮುರಿಸಾಗುವಂತೆ ಡಿಕೆಶಿಗೆ ಸಿದ್ದರಾಮಯ್ಯ ಬಿಸಿಮುಟ್ಟಿಸಿದ್ದರು. ತಮ್ಮ ಜಿಲ್ಲೆಗಳಲ್ಲಿ ತಮ್ಮ ಗಮನಕ್ಕೆ ತೆಗೆದುಕೊಳ್ಳದೇ ಸಭೆ ನಡೆಸುವಂತಿಲ್ಲ ಎಂದು ತಾಕೀತು ಮಾಡಿದ್ದರು. ಇದರ ಭಾಗವಾಗಿಯೇ ಸಿದ್ದರಾಮಯ್ಯರನ್ನು ಮೀರಿ ಬೆಳೆಯುವ ಡಿಕೆಶಿ ಪ್ರಯತ್ನದ ವಿರುದ್ಧ ಕೆಲ ಶಾಸಕರು ಹೈಕಮಾಂಡ್ ಮಟ್ಟದಲ್ಲಿ ದೂರು ನೀಡಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ದೆಹಲಿಗೆ ತೆಳಿದ್ದ ಶಾಸಕರೊಬ್ಬರು ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದು, ಈ ವೇಳೆ ‘ಡಿಕೆಶಿಯನ್ನು ನಿಯಂತ್ರಿಸಿ’ ಎಂಬರ್ಥದಲ್ಲಿ ಮನವಿ ಮಾಡಿ, ಪ್ರತಿಪಕ್ಷ ನಾಯಕರು ಬೇಸರಗೊಂಡಿದ್ದಾರೆಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆಂದು ಗೊತ್ತಾಗಿದೆ. ವಾರದ ಹಿಂದಷ್ಟೇ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಾಯಕರ ನಡುವೆ ಶೀತಲ ಸಮರ ನಡೆದಿತ್ತು. ಇದಕ್ಕೆ ಪಕ್ಷದ ಹಲವು ಶಾಸಕರು, ನಾಯಕರು ಸಾಕ್ಷಿಯಾಗಿದ್ದರು. ಇಬ್ಬರು ನಾಯಕರು ಅಕ್ಕಪಕ್ಕ ಕುಳಿತಿದ್ದರು ಎಲ್ಲರೆದುರು ಮುಖಕೊಟ್ಟು ಮಾತನಾಡದೇ ಪದಗಳ ವಿನಿಮಯ ಮಾಡಿಕೊಂಡಿರುವುದು, ಜತೆಗೆ ಡಿಕೆಶಿಗೆ ಫರ್ವನು ರೀತಿ ಸೂಚನೆ ನೀಡಿದ್ದು ಪಕ್ಷದಲ್ಲಿ ಬಹು ರ್ಚಚಿತ ವಿಷಯವಾಗಿದೆ. ಇದರ ಮುಂದುವರಿದ ಭಾಗವಾಗಿ ದೆಹಲಿಯಲ್ಲಿ ಸಿದ್ದರಾಮಯ್ಯ ಆಪ್ತ ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಟ್ಟದಲ್ಲಿ ದೂರಿತ್ತಿದ್ದಾರೆಂದು ಗೊತ್ತಾಗಿದೆ. ಡಿಕೆಶಿ ಜತೆಗೆ ಗುರುತಿಸಿಕೊಂಡ ಶಾಸಕರೊಬ್ಬರು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿ, ರಾಜಕೀಯ ಪಕ್ಷಗಳಲ್ಲಿ ನಾಯಕತ್ವಕ್ಕೆ ಪೈಪೋಟಿ ನಡೆಯುವುದು ಸಹಜ ಮತ್ತು ಸಾಮಾನ್ಯ. ದೆಹಲಿಯಲ್ಲಿ ದೂರು ಕೊಟ್ಟ ವಿಚಾರ ಗಮನಕ್ಕೆ ಬಂದಿಲ್ಲ. ಆದರೆ, ಹಿರಿಯ ನಾಯಕರೆನಿಸಿಕೊಂಡವರ ಆಪ್ತ ಶಾಸಕರು ಪಕ್ಷದ ಅಧ್ಯಕ್ಷರ ವಿರುದ್ಧದ ನಡವಳಿಕೆ ಸರಿಕಾಣಲಿಲ್ಲ. ಸೂಕ್ತ ವೇದಿಕೆಯಲ್ಲಿ ಇದನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತದೆ ಎಂದರಲ್ಲದೇ, ಇಂತಹ ಬೆಳವಣಿಗೆ ಕಂದಕ ಹೆಚ್ಚಾಗಲು ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು. ಪಕ್ಷದ ಅಧ್ಯಕ್ಷರ ವಿರುದ್ಧ ದೆಹಲಿಯಲ್ಲಿ ನಮ್ಮವರೇ ಕೆಲವರು ಚಾಡಿ ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಇಂತಹ ದೂರಿಗೆ ಸ್ಪಂದಿಸುವುದಿಲ್ಲ ಎಂದು ನಂಬಿದ್ದೇವೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಿಯು ಕಾಲೇಜುಗಳಲ್ಲಿ 'ಸೂರ್ಯ ನಮಸ್ಕಾರ': ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ

Mon Dec 27 , 2021
ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ. 1ರಿಂದ ಫೆ. 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಅಲ್ಲದೆ, ಜ 26ರಂದು ‘ಸಂಗೀತ ದೊಂದಿಗೆ ಸೂರ್ಯ ನಮಸ್ಕಾರ’ (ಮ್ಯೂಸಿಕಲ್‌ ಪರ್ಫಾರ್ಮೆನ್ಸ್‌ ಆನ್‌ ಸೂರ್ಯ ನಮಸ್ಕಾರ) ಆಯೋಜಿಸ ಬೇಕು ಎಂದೂ ತಿಳಿಸಿದೆ. 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ […]

Advertisement

Wordpress Social Share Plugin powered by Ultimatelysocial