ಡಿ ಅಂಡ್ ಸಿಯಿಂದ ತೊಂದರೆಯೇ?

ಡಿ ಅಂಡ್ ಸಿಯಿಂದ ತೊಂದರೆಯೇ?

1. ನನಗೆ 47 ವರ್ಷ. ಕಳೆದೊಂದು ವರ್ಷದಿಂದ ಮುಟ್ಟಾದಾಗ ಅತಿಯಾದ ರಕ್ತಸ್ರಾವ ಇರುತ್ತದೆ. ಅಲ್ಲದೇ ಇದು ಏಳೆಂಟು ದಿನಗಳವರೆಗೆ ಮುಂದುವರಿಯುತ್ತದೆ. ವೈದ್ಯರು ಸ್ಕ್ಯಾನಿಂಗ್ ಮಾಡಿ ಗರ್ಭಕೋಶ ಸ್ವಲ್ಪ ದೊಡ್ಡದಿದೆ, ಡಿ ಆಂಡ್ ಸಿ/ ಬಯಾಪ್ಸಿ ಮಾಡಿಸಿ ಎಂದು ಹೇಳಿ ತುಂಬಾ ದಿನಗಳಾಗಿವೆ.

ನನಗೆ ಈ ಬಗ್ಗೆ ಭಯ ಇರುವ ಕಾರಣ ವೈದ್ಯರು ಹೇಳಿದ ಯಾವ ಪರೀಕ್ಷೆಯನ್ನೂ ಮಾಡಿಸಿಲ್ಲ. ಆದರೆ ನನಗೆ ತುಂಬಾ ಸುಸ್ತಾಗುತ್ತದೆ. ಏನು ಮಾಡಲಿ? ಡಿ ಆಂಡ್ ಸಿ ಮಾಡಿಸುವುದು ಅರ್ಬಾಷನ್‌ಗಾಗಿ ಎಂದು ಕೇಳಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡಿ

ಪಾರ್ವತಿ, ಶಿರಾ

ಪಾರ್ವತಿಯವರೇ, ನೀವು ಚಿಕಿತ್ಸೆ ಪಡೆಯುತ್ತಿರುವ ತಜ್ಞರ ಬಳಿ ಶೀಘ್ರದಲ್ಲೇ ಮುಟ್ಟಿನ ಮುನ್ನಾದಿನಗಳಲ್ಲಿ ಅಥವಾ ಮುಟ್ಟಾದ ದಿನವೇ ಹೋಗಿ ಬಯಾಪ್ಸಿ ಅಥವಾ ಡಿ ಆಂಡ್ ಸಿ ಮಾಡಿಕೊಳ್ಳಿ. ಈ ಬಗ್ಗೆ ಹೆದರಿಕೆ ಬೇಡ. ಡಿ ಆಂಡ್ ಸಿ ಎಂದರೆ ಗರ್ಭದ್ವಾರವನ್ನು ಹಿಗ್ಗಿಸಿ (ಡಯಲೇಟೇಷನ್) ಗರ್ಭಾಶಯದ ಒಳಪದರವನ್ನು (ಎಂಡೋಮೆಟ್ರಿಯಂ) ಕೆರೆದು ತೆಗೆಯುವುದು. ಈ ಗರ್ಭಕೋಶದ ಒಳಪದರ ಪ್ರತಿ ಮಹಿಳೆಯರ ರಕ್ತಕ್ಕೆ ಸೇರುವ ಬೇರೆ ಬೇರೆ ರಸದೂತಗಳಿಗೆ ಸ್ಪಂದಿಸುತ್ತಾ, ಪ್ರತಿತಿಂಗಳು ಭ್ರೂಣದ ಆಗಮನಕ್ಕಾಗಿ ಕಾಯುತ್ತಾ ಗರ್ಭಕೋಶ ತನ್ನ ಸಿದ್ಧತೆ ನಡೆಸಿರುತ್ತದೆ. ಗರ್ಭಧಾರಣೆಯಾಗದಿದ್ದಾಗ ಪ್ರತಿತಿಂಗಳು ರಕ್ತಸ್ರಾವದ ರೂಪದಲ್ಲಿ ಹೊರಬರುತ್ತದೆ. ನೀವು ಸೂಕ್ತ ತಜ್ಞರಲ್ಲಿ ಸುಸಜ್ಜಿತ ವ್ಯವಸ್ಥೆಯಲ್ಲಿ, ಸೋಂಕು ರಹಿತ ವಾತಾವರಣದಲ್ಲಿ ಡಿ ಆಂಡ್ ಸಿ ಮಾಡಿಸಿಕೊಂಡರೆ ಏನೂ ತೊಂದರೆಯಾಗುವುದಿಲ್ಲ. ಗರ್ಭಪಾತ ವಾದಾಗಲೂ ಡಿ ಆಂಡ್ ಸಿ ಮಾಡಿದಾಗ ಕೆಲವು ಗರ್ಭದ ತುಣುಕುಗಳು ಹಾಗೇ ಉಳಿದಿದ್ದನ್ನು ಪೂರ್ಣವಾಗಿ ಕೆರೆದು ತೆಗೆಯುತ್ತಾರೆ. ಆದರೆ ನಿಮಗೆ ಈಗ ಮಾಡಲಿರುವ ಡಿ ಆಂಡ್ ಸಿಯಲ್ಲಿ ಗರ್ಭಕೋಶದ ಒಳಪದರವನ್ನೇ ತೆಗೆದು ಅದನ್ನು ತಜ್ಞರು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಹಾರ್ಮೋನುಗಳಿಂದ ಈ ಒಳಪದರದಲ್ಲಾಗುವ ಬದಲಾವಣೆಗಳು ತಜ್ಞರಿಗೆ ಪರೋಕ್ಷವಾಗಿ ತಿಳಿದುಬರುತ್ತದೆ. ಇದರಿಂದ ಮುಂದಿನ ಚಿಕಿತ್ಸೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವೈದ್ಯರಿಗೆ ಸಹಾಯವಾಗುತ್ತದೆ. ಹಾಗಾಗಿ ಭಯಪಡದೆ ಬೇಗನೇ ಪರೀಕ್ಷಿಸಿಕೊಳ್ಳಿ. ಬಯಾಪ್ಸಿ ಮಾಡಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಹಣ್ಣು ತಿಂದ್ರೆ ಬೇಗ ಇಳಿಯುತ್ತೆ ನಿಮ್ಮ ತೂಕ

Tue Dec 21 , 2021
ಈಗ ಎಲ್ಲರಿಗೂ ತೂಕ ಇಳಿಕೆ ಮಾಡುವುದೇ ಚಿಂತೆ. ಏನೇ ತಿಂದರೂ ಇದರಲ್ಲಿ ಎಷ್ಟು ಕ್ಯಾಲೋರಿ ಇದೆ, ಎಷ್ಟು ಪ್ರೋಟಿನ್ ಇದೆ ಎಂದು ಅಳೆದು ತೂಗಿ ತಿನ್ನುತ್ತಾರೆ. ಅಂತವರು ಪೈನಾಪಲ್ ಹಣ್ಣನ್ನು ತಿಂದರೆ ಬೇಗನೆ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಪೈನಾಪಲ್ ಹಣ್ಣನ್ನು ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ. ಪೈನಾಪಲ್ ತಿನ್ನುವುದರಿಂದ ಇದು ನಮ್ಮ ದೇಹದಲ್ಲಿನ ಬೇಡದ ಕೊಬ್ಬನ್ನು ನಿವಾರಿಸುತ್ತದೆ. ಹಾಗೇ ಜೀರ್ಣಕ್ರೀಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ […]

Advertisement

Wordpress Social Share Plugin powered by Ultimatelysocial