ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪ, ಆತಂಕದಲ್ಲೇ ಕಾಲ ಕಳೆಯುತ್ತಿರುವ ಜನರು!

 

ತಡರಾತ್ರಿ 1.15 ಗಂಟೆಗೆ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದೆ.

ಚೆಂಬು ಗ್ರಾಮದಿಂದ 5.2 ಕಿಲೋ ಮೀಟರ್ ವಾಯುವ್ಯ ಭಾಗದಲ್ಲಿ ಭೂಕಂಪನ ಸಂಭವಿಸಿದೆ.ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದ ಹಿನ್ನೆಲೆ ಜನರು ಭಯದಿಂದ ಜಾಗರಣೆ ಮಾಡುವಂತಾಗಿತ್ತು. ಪದೇ ಪದೇ ಭೂಮಿ ಕಂಪನ ಆಗುತ್ತಿರುವ ಹಿನ್ನೆಲೆ ಚೆಂಬು, ಪೆರಾಜೆ ಸುತ್ತಮುತ್ತಲ ಜನರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)ಒಂದೇ ವಾರದಲ್ಲಿ ಕೊಡಗು ವ್ಯಾಪ್ತಿಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಪದೇ ಪದೇ ಭೂಮಿ ಕಂಪನ ಹಿನ್ನೆಲೆ ಸ್ಥಳಕ್ಕೆ ತಜ್ಞರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)ರಾತ್ರಿ ಭೂಕಂಪನವಾಗಿರುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಸಲ್ಲಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 1.8 ದಾಖಲಾಗಿದೆ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)ತಡರಾತ್ರಿ ಸಂಭವಿಸಿದ ಭೂಕಂಪನದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೊಡಗು ಜಿಲ್ಲೆ ಝೋನ್-3ರಲ್ಲಿ ಬರುತ್ತದೆ. ಸುಮಾರು 30 ಕಿಲೋ ಮೀಟರ್ ವರೆಗೂ ಭೂ ಕಂಪಿಸಿದ ಅನುಭವ ಬರುತ್ತದೆ. (ಸಾಂದರ್ಭಿಕ ಚಿತ್ರ)ಭೂಕಂಪನದ ತೀವ್ರತೆ ಕಡಿಮೆ. ಆದ್ದರಿಂದ ಜನರು ಆತಂಕ ಪಡಬೇಕಿಲ್ಲ. ಭೂಮಿಯಲ್ಲಿ ಬಿರುಕು ಸೇರಿದಂತೆ ಇನ್ನುಳಿದಂತೆ ಅಪಾಯವುಂಟಾದ್ರೆ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ 08272-221077, 221099 ಸಂಖ್ಯೆ ಕರೆ ಮಾಡಲು ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೆಹ್ಲೋಟ್ ಸರ್ಕಾರವು ರಾಜಸ್ಥಾನವನ್ನು ಹೈ ಅಲರ್ಟ್‌ನಲ್ಲಿ ಇರಿಸಿತು, ಸಿಆರ್‌ಪಿಸಿ ಸೆಕ್ಷನ್ 144

Fri Jul 1 , 2022
ಪ್ರವಾದಿ ವಿರುದ್ಧ ಬಿಜೆಪಿಯ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯನ್ನು ಹಂಚಿಕೊಂಡ ಆರೋಪದಲ್ಲಿ ಜೂನ್ 28 ರಂದು ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಉದಯ‌ಪುರ ಟೈಲರ್ ಕನ್ಹಯ್ಯಾ ಲಾಲ್‌ರನ್ನು ಹತ್ಯೆ ಮಾಡಿದ ನಂತರ ರಾಜಸ್ಥಾನದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ರಾಜ್ಯ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಘಟನೆಯ ನಂತರ ಪರಿಸ್ಥಿತಿ ನಿಯಂತ್ರಿಸಲು ಗೆಹ್ಲೋಟ್ ಸರ್ಕಾರವು ರಾಜಸ್ಥಾನವನ್ನು ಹೈ ಅಲರ್ಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial