ಗುಜರಾತ್‍ನಲ್ಲಿ ಇಂದು ಮುಂಜಾನೆ 3.8 ತೀವ್ರತೆಯ ಭೂಕಂಪ

ಹಮದಾಬಾದ್,ಫೆ.11- ಗುಜರಾತ್‍ನ ಸೂರತ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 3.8ತೀವ್ರತೆಯ ಕಂಪನ ದಾಖಲಾಗಿದೆ ಎಂದು ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆ (ಐ.ಸ್‍.ಆರ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂರತ್‍ನ ಪಶ್ಚಿಮ ನೈಋತ್ಯ (ಡಬ್ಲ್ಯುಎಸ್‍ಡಬ್ಲ್ಯು) 27 ಕಿಲೋಮೀಟರ್‍ಗಳಷ್ಟು ಅದರ ಕೇಂದ್ರಬಿಂದು 12:52 ಕ್ಕೆ ದಾಖಲಾಗಿದೆ. ಜಿಲ್ಲೆಯ ಹಾಜಿರಾದಿಂದ ಅರಬ್ಬಿ ಸಮುದ್ರದಲ್ಲಿನ ಭೂಕಂಪನದ ಕೇಂದ್ರಬಿಂದು 5.2 ಕಿಲೋಮೀಟರ್ ಆಳದಲ್ಲಿದೆ ಎಂದು ತಿಳಿಸಿದ್ದಾರೆ.

ಕಂಪನದಿಂದ ಯಾವುದೇ ಆಸ್ತಿ ಅಥವಾ ಜೀವ ಹಾನಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಭೂಕಂಪದ ಅಪಾಯವನ್ನು ಹೆಚ್ಚು ಎದುರಿಸುತ್ತಿದೆ. ಈ ಮೊದಲು 1819, 1845, 1847, 1848, 1864, 1903, 1938, 1956 ಮತ್ತು 2001 ರಲ್ಲಿ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. 2001 ರಲ್ಲಿ ಕಚ್ ನಡೆದ ಭೂಕಂಪನ ಕಳೆದ ಎರಡು ಶತಮಾನಗಳಲ್ಲಿ ಭಾರತದಲ್ಲಿ ಸಂಭವಿಸಿದ ಮೂರನೇ ಅತಿದೊಡ್ಡ ಮತ್ತು ಎರಡನೇ ಅತ್ಯಂತ ವಿನಾಶಕಾರಿ ಭೂಕಂಪವಾಗಿತ್ತು. ಅದರಲ್ಲಿ 13,800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1.67 ಲಕ್ಷ ಮಂದಿ ಗಾಯಗೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಜಪ್ತಿ !

Sat Feb 11 , 2023
ಪ್ರಧಾನಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಸಿಕ್ಕ ಸ್ಫೋಟಕಗಳು ! ಜೈಪುರ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ 12 ರಂದು ರಾಜಸ್ಥಾನದ ದೌಸಾ ಜಿಲ್ಲೆಯ ಪ್ರವಾಸಕ್ಕೆ ಹೋಗುವವರಿದ್ದಾರೆ. ಈ ಪ್ರವಾಸದ ಮೊದಲು ಈ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಪ್ರಧಾನಮಂತ್ರಿಗಳ ಪ್ರವಾಸದ ಮೊದಲು ಭದ್ರತೆಯ ಸಿದ್ಧತೆಯ ಪರಿಶೀಲನೆ ನಡೆಸಲು ಪೊಲೀಸರು ಗಸ್ತು ಮಾಡುತ್ತಿದ್ದರು. ಆ ಸಮಯದಲ್ಲಿ ಜಿಲ್ಲೆಯ ಖಾನ ಬಾಂಕಾರಿ ಮಾರ್ಗದ ಹತ್ತಿರ ರಾಜೇಶ ಮೀಣಾ ಇವರ ವಾಹನದ ಪರಿಶೀಲನೆ ನಡೆಸುತ್ತಿರುವಾಗ […]

Advertisement

Wordpress Social Share Plugin powered by Ultimatelysocial