ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಪರಿಣಾಮಕಾರಿ ಮನೆ ಮದ್ದುಗಳು

ಮೊಡವೆ ಸಮಸ್ಯೆ ತುಂಬಾ ಸಾಮಾನ್ಯ. ಯುವಕ-ಯುವತಿಯರಲ್ಲಿ ಮುಖದ ಮೇಲೆ, ಬೆನ್ನು, ಕತ್ತಿನ ಮೇಲೆ ಮೊಡವೆಗಳೇಳುತ್ತವೆ. ಇದು ಸಾಮಾನ್ಯ ಸಮಸ್ಯೆಯಾದರೂ ನಮ್ಮ ಅಂದವನ್ನೇ ಹಾಳು ಮಾಡಿಬಿಡುತ್ತದೆ. ಹಾಗಾಗಿ ಮೊಡವೆಯಿಂದ ಮುಕ್ತಿ ಪಡೆಯಬೇಕೆಂಬುದು ಬಹುತೇಕ ಎಲ್ಲರ ಆಸೆ. ಕೆಲವರಿಗೆ ಬೇಗನೆ ಮೊಡವೆಗಳು ಮಾಯವಾಗಿ ಮುಖ ಕಾಂತಿಯನ್ನು ಮರಳಿ ಪಡೆದರೆ, ಇನ್ನು ಕೆಲವರಿಗೆ ವರ್ಷಗಟ್ಟಲೇ ಮೊಡವೆ ಕಿರಿಕಿರಿ ಹುಟ್ಟಿಸುತ್ತದೆ.

ಎಷ್ಟೇ ಔಷಧ ತೆಗೆದುಕೊಂಡ್ರೂ ಬಗೆಬಗೆಯ ಕ್ರೀಮ್‌ ಬಳಸಿದ್ರೂ ಮೊಡವೆ ಏಳುತ್ತಲೇ ಇರುತ್ತದೆ. ಹಾಗಾಗಿ ಅಂಥವರು ಪರಿಣಾಮಕಾರಿ ಮನೆಮದ್ದುಗಳನ್ನು ಅನುಸರಿಸಬೇಕು.

ಜೀರ್ಣಾಂಗ ವ್ಯವಸ್ಥೆ ಕೆಟ್ಟು ಹೋಗಿದ್ದರೆ ಅದರಿಂದಲೂ ಮೊಡವೆಗಳಾಗುತ್ತವೆ. ಅಂತಹ ಸಂದರ್ಭದಲ್ಲಿ ನೀವು ಶ್ರೀಗಂಧವನ್ನು ಬಳಸಬಹುದು. ಮೊಡವೆಗಳಿಂದ ತೊಂದರೆಗೊಳಗಾಗಿರುವವರು ಶ್ರೀಗಂಧದ ಪುಡಿಯನ್ನು ಬಳಸಬೇಕು. ಇದರಿಂದ ತುಂಬಾ ಹಳೆಯ ಕೆಲಗಳು ಕೂಡ ಅಳಿಸಿ ಹೋಗುತ್ತವೆ. ಆದರೆ ಅದನ್ನು ಬಳಸುವ ಸರಿಯಾದ ವಿಧಾನವನ್ನು ನೀವು ತಿಳಿದಿರಬೇಕು. ಒಂದು ಚಮಚ ಶ್ರೀಗಂಧದ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಬೇಕು. ನಂತರ ಸ್ವಲ್ಪ ನಿಂಬೆ ರಸವನ್ನು ಹಾಕಬೇಕು. ಈ ಮಿಶ್ರಣವನ್ನು ಮೊಡವೆಗಳು, ಕಲೆಗಳ ಮೇಲೆ ಹಚ್ಚಿಕೊಳ್ಳಿ. ಪೇಸ್ಟ್ ಒಣಗುವವರೆಗೆ ಹಾಗೇ ಬಿಡಿ. ನಂತರ ಮುಖವನ್ನು ಚೆನ್ನಾಗಿ ತೊಳೆಯಿರಿ. ದಿನ ಬಿಟ್ಟು ದಿನ ಇದನ್ನು ಹಚ್ಚುತ್ತಾ ಬಂದರೆ ಮೊಡವೆ ಕಲೆ ಗಣನೀಯವಾಗಿ ಕಡಿಮೆಯಾಗುತ್ತದೆ.

ತೆಂಗಿನ ಎಣ್ಣೆ ಕೂಡ ಮೊಡವೆ ತೊಡೆದು ಹಾಕಲು ಸಹಕಾರಿ. ತೆಂಗಿನ ಎಣ್ಣೆಯಲ್ಲಿ ವಿಟಮಿನ್-ಇ ಹೇರಳವಾಗಿದೆ. ಚರ್ಮವನ್ನು ಆರೋಗ್ಯಕರವಾಗಿಡಲು ಈ ಎಣ್ಣೆಯನ್ನು ಬಳಸಿ. ಉಗುರು ಬೆಚ್ಚನೆಯ ನೀರು ಮತ್ತು ಎಣ್ಣೆಯನ್ನು ತೆಗೆದುಕೊಂಡು ಮೊಡವೆಗಳ ಮೇಲೆ ಉಜ್ಜಿಕೊಳ್ಳಿ. ಪ್ರತಿದಿನ ಈ ರೀತಿ ಮಾಡುತ್ತ ಬಂದರೆ ಕೆಲವೇ ದಿನಗಳಲ್ಲಿ ಮೊಡವೆಗಳು ಕಡಿಮೆಯಾಗುತ್ತವೆ. ಆಪಲ್ ಸೈಡರ್‌ ವಿನೆಗರ್‌ ಕೂಡ ಮೊಡವೆಗೆ ಮದ್ದು. ಒಂದು ಚಮಚ ವಿನೆಗರ್ ತೆಗೆದುಕೊಳ್ಳಬೇಕು. ಇದಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಹತ್ತಿಯ ಸಹಾಯದಿಂದ ಮೊಡವೆಗಳ ಮೇಲೆ ಹಚ್ಚಿ. ಈ ಪೇಸ್ಟ್ ಅನ್ನು ಮುಖದ ಮೇಲೆ 10 ರಿಂದ 15 ನಿಮಿಷಗಳ ಕಾಲ ಇರಿಸಿ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಮತ್ತು ಕಲೆಗಳು ಮಾಯವಾಗುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್ ಕಾಯ್ದೆ ವಾಪಸ್‌ ಪಡೆಯಲು ಪ್ರಾಂತ ರೈತ ಸಂಘ

Wed Jan 11 , 2023
ರಾಜ್ಯದ ರೈತರಿಗೆ ಮಾರಕವಾದ ವಿದ್ಯುತ್ ಕಾಯ್ದೆ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಯು.ಬಸವರಾಜ ಆಗ್ರಹಿಸಿದರು. ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ವಿದ್ಯುತ್ ಕಾಯ್ದೆ ಯಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ತುಂಬಾ ತೊಂದರೆ ಉಂಟಾಗಿದೆ. ಖಾಸಗಿ ಕಂಪನಿಗಳು ವಿದ್ಯುತ್ ಉತ್ಪಾದನೆ ಮತ್ತು ಮಾರಾಟ ಮಾಡುವ ಪದ್ದತಿ ಮುಂದೆ ಬರುತ್ತದೆ. ಇದರಿಂದ ವಿದ್ಯುತ್ […]

Advertisement

Wordpress Social Share Plugin powered by Ultimatelysocial