ಎಗ್‌ ಬಿರಿಯಾನಿ…

 

ಬೇಕಾಗುವ ಪದಾರ್ಥಗಳು

  • ಕೊಬ್ಬಂಬರಿ ಸೊಪ್ಪು- ಸ್ವಲ್ಪ
  • ಮೊಸರು ಅಥವಾ ತೆಂಗಿನ ಹಾಲು – ಅರ್ಧಬಟ್ಟಲು
  • ದನಿಯಾ ಪುಡಿ- 1 ಚಮಚ
  • ಖಾರದ ಪುಡಿ- 1 ಚಮಚ
  • ಬಿರಿಯಾನಿ ಮಸಾಲೆ ಪುಡಿ- ಅರ್ಧ ಚಮಚ
  • ಅರಿಶಿಣದ ಪುಡಿ- ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ
  • ತುಪ್ಪ- ಎರಡು ಚಮಚ
  • ಸೋನಾ ಮಸೂರಿ ಅಕ್ಕಿ- ಅರ್ಧ ಕೆಜಿ
  • ಮೊಟ್ಟೆ- ಬೇಯಿಸಿದ್ದು 5
  • ಚಕ್ಕೆ, ಲವಂಗ- ಸ್ವಲ್ಪ
  • ಏಲಕ್ಕಿ-5-6
  • ಪಲಾವ್ ಎಲೆ, ಕಲ್ಲು ಹೂ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಹಸಿಮೆಣಸಿನ ಕಾಯಿ- ಉದ್ದಕ್ಕೆ ಕತ್ತರಿಸಿದ್ದು 6
  • ಈರುಳ್ಳಿ- 2 (ಸಣ್ಣಗೆ ಕತ್ತರಿಸಿದ್ದು)
  • ಟೊಮೆಟೋ- 2 (ಸಣ್ಣಗೆ ಕತ್ತರಿಸಿದ್ದು)

ಮಾಡುವ ವಿಧಾನ…

1̤ ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ ಕಾಯಿಸಿಕೊಳ್ಳಬೇಕು ನಂತರ ಅದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಕೆಂಪಗೆ ಮಾಡಿಕೊಳ್ಳಬೇಕು.

2̤ ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.

3̤ ನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಂಡು ಬಳಿಕ ಮೊಸರು ಅಥವಾ ತೆಂಗಿನ ಹಾಲು ಹಾಕಿ 5-10 ನಿಮಿಷ ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು  ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ದವಿರುತ್ತದೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನುದಾನದ ವಿಚಾರದಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ.

Sat Jan 8 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial