ಭಾರತದಲ್ಲಿ ಬಗೆ ಬಗೆಯ, ರುಚಿ ರುಚಿಯ ಆಹಾರದ ಸವಿ ಸವಿಯಬಹುದು.

ಭಾರತದಲ್ಲಿ ಬಗೆ ಬಗೆಯ, ರುಚಿ ರುಚಿಯ ಆಹಾರದ ಸವಿ ಸವಿಯಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದ ಆಹಾರಗಳ ಪಟ್ಟಿಯಲ್ಲಿ ಇಡ್ಲಿ, ಸಾಂಬಾರ್, ದೋಸೆ, ರಸಂ ಹೀಗೆ ಅನೇಕ ಆಹಾರಗಳನ್ನು ನಾವು ನೋಡ್ಬಹುದು. ದಕ್ಷಿಣ ಭಾರತದ ಅಡುಗೆಯ ರುಚಿ ಭಿನ್ನವಾಗಿರುತ್ತದೆ.ಹಾಗೆಯೇ ಈ ಅಡುಗೆಗಳು ನಮ್ಮ ತೂಕ ಇಳಿಸಲು ನೆರವಾಗುತ್ತವೆ. ಹೌದು, ದಕ್ಷಿಣ ಭಾರತದ ಅಡುಗೆಗಳಲ್ಲಿ ಕ್ಯಾಲೋರಿ ಕಡಿಮೆಯಿದ್ದು, ಅವು ತೂಕ ಇಳಿಸಲು ನೆರವಾಗುತ್ತವೆ.ತೂಕ ಇಳಿಸಬೇಕೆನ್ನುವವರು ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಚ್ಚನೆ ನೀರಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯಬೇಕು. ಇದು ತೂಕ ಇಳಿಸಲು ನೆರವಾಗುತ್ತದೆ.ಹಾಗೆಯೇ ಎಂದಿಗೂ ಬೆಳಗಿನ ಉಪಹಾರವನ್ನು ಬಿಡಬಾರದು. ಅದು ಇಡೀ ದಿನ ಶಕ್ತಿ ನೀಡುತ್ತದೆ. ಬೆಳಗಿನ ಉಪಹಾರಕ್ಕೆ ದಕ್ಷಿಣ ಭಾರತದ ಆಹಾರ ಹೇಳಿ ಮಾಡಿಸಿದಂತಿದೆ. ನೀವು ಇಡ್ಲಿ, ಸಾಂಬಾರ್, ಪೊಂಗಲ್, ತೆಂಗಿನಕಾಯಿ ಚಟ್ನಿ, ದೋಸೆ ಇವುಗಳಲ್ಲಿ ಯಾವುದನ್ನಾದ್ರೂ ಸೇವನೆ ಮಾಡಬಹುದು.ಮಧ್ಯಾಹ್ನದ ಊಟಕ್ಕೆ ಮಧ್ಯಾಹ್ನದ ರಾಗಿ ಮುದ್ದೆ ಬೆಸ್ಟ್, ಎರಡು ರಾಗಿ ಮುದ್ದೆ ಜೊತೆ ಕರಿ, ಮಜ್ಜಿಗೆ, ಸಾಂಬಾರು, ಅನ್ನ ಸೇವಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಬೇಕು ಎನ್ನುವವರು ಗ್ರೀನ್ ಟೀ ಸೇವನೆ ಮಾಡಬಹುದು. ಇಲ್ಲವೆ ಬ್ಲಾಕ್ ಕಾಫಿ ಸೇವಿಸಬಹುದು. ಇದ್ರ ಜೊತೆ ಮಲ್ಟಿಗ್ರೇನ್ ಬಿಸ್ಕತ್ ಹಾಗೂ ಪಿಸ್ತಾ ತಿನ್ನಬಹುದು.ತಜ್ಞರ ಪ್ರಕಾರ, ರಾತ್ರಿ ಭೋಜನವು ಹಗುರವಾಗಿರಬೇಕು. ಪಾಲಕ್ ದಾಲ್, ಮೊಸರು, ತರಕಾರಿ ಕರಿ, ಬ್ರೌನ್ ರೈಸ್, ಮೊಳಕೆ ಸಲಾಡ್, ಕೇರಳ ಶೈಲಿಯ ಮೀನುಗಳನ್ನು ಸಹ ಸೇವಿಸಬಹುದು. ಇದಲ್ಲದೆ ಮಲಗುವ ಮುನ್ನ ಒಂದು ಕಪ್ ಹಾಲಿಗೆ ಅರಿಶಿನ ಬೆರೆಸಿ ಕುಡಿದರೆ ಒಳ್ಳೆಯದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಅಮ್ಮಾ ಭಯವಾಗ್ತಿದೆ, ಬೇಗ ಬಾ.ಎಲ್ಲಾ ಸೇರಿ ಸಾಯಿಸ್ತಾರೆ' ಎಂದು ಕರೆ ಮಾಡಿದ್ದ ಮರುಕ್ಷಣವೇ ಶವವಾದ ಮಹಿಳೆ!

Thu Feb 10 , 2022
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ವರದಕ್ಷಿಣೆಗಾಗಿ ಮಹಿಳೆಯೊಬ್ಬರು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ನಡೆದಿದೆ.30 ವರ್ಷದ ರೇಖಾ ಎಂಬುವವರು ಕೊಲೆಯಾಗಿದ್ದು, ಗಂಡನ ಮನೆಯವರೆಲ್ಲಾ ಸೇರಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ತುಮಕೂರು ತುಮಕೂರು ಜಿಲ್ಲೆಯ ದಿಬ್ಬೂರು ಗ್ರಾಮದ ರೇಖಾ ಅವರನ್ನು 12 ವರ್ಷಗಳ ಹಿಂದೆ ದಾಬಸ್‌ಪೇಟೆಯ ಗಿರೀಶ್ ಜತೆ ಮದುವೆ ಮಾಡಿಕೊಡಲಾಗಿದೆ. ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಪ್ರತಿನಿತ್ಯ ರೇಖಾರಿಗೆ ಕಿರುಕುಳ ನೀಡಲಾಗುತ್ತಿತ್ತು. ಮಾನಸಿಕವಾಗಿ […]

Advertisement

Wordpress Social Share Plugin powered by Ultimatelysocial