ಬುಲೆಟ್‌ ಲುಕ್‌ ನಲ್ಲೂ ಬಂದಿದೆ ಎಲೆಕ್ಟ್ರಿಕ್‌ ಬೈಕ್‌!

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಓಲಾ, ಓಕಿನಾವಾ ಸೇರಿದಂತೆ ಅನೇಕ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಟ್‌ ಕೇಕ್‌ ನಂತೆ ಮಾರಾಟವಾಗುತ್ತಿವೆ. ಇದರ ಜೊತೆಜೊತೆಗೆ ಎಲೆಕ್ಟ್ರಿಕ್‌ ಬೈಕ್‌ಗಳು ಕೂಡ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಾ ಇವೆ.ಆದ್ರೆ ಸ್ಪ್ಲೆಂಡರ್ ಮತ್ತು ರಾಯಲ್ ಎನ್‌ಫೀಲ್ಡ್ ಬುಲೆಟ್‌ನಂತಹ ಬೈಕ್‌ಗಳ ಎಲೆಕ್ಟ್ರಿಕ್ ಬೈಕ್‌ಗಳಿಗಾಗಿ ಜನರು ಕಾಯುತ್ತಿದ್ದಾರೆ.ಬಿಹಾರದ ಕಂಪನಿಯೊಂದು ಬುಲೆಟ್‌ನಂಥದ್ದೇ ಎಲೆಕ್ಟ್ರಿಕ್ ಆವೃತ್ತಿಗಳನ್ನು ತಯಾರಿಸಿ ತನ್ನ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುತ್ತಿದೆ. ಈ ವೆಬ್‌ಸೈಟ್‌ನಲ್ಲಿ ಎಲೆಕ್ಟ್ರಿಕ್ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಹಲವು ಆಯ್ಕೆಗಳಿವೆ. ಇಲ್ಲಿ ನೀವು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಸಹ ಖರೀದಿಸಬಹುದು. ಸಿಲ್ವೆಲೈನ್ ಹೆಸರಿನ ಈ ಕಂಪನಿ ರಾಯಲ್ ಎನ್‌ಫೀಲ್ಡ್ ಬುಲೆಟ್‌ನಂತೆ ಕಾಣುವ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಅದಕ್ಕೆ ಲವ್ ಪ್ಲಸ್ ಎಂದು ಹೆಸರಿಡಲಾಗಿದೆ.ವಿಶೇಷವೆಂದರೆ ಕೇವಲ 2000 ರೂಪಾಯಿಗೆ ಈ ಬೈಕ್‌ ಅನ್ನು ಬುಕ್‌ ಮಾಡಬಹುದು. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 120 ಕಿಲೋಮೀಟರ್. ಕಂಪನಿಯ ಪ್ರಕಾರ ಇದು ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಮೀವರೆಗೆ ಓಡಬಹುದು. ಬೈಕಿನ ಬೆಲೆ 1,51,999 ರೂಪಾಯಿ. ಹೀರೋ ಕಂಪನಿಯ ಜನಪ್ರಿಯ ಬೈಕ್ ಪ್ಯಾಶನ್ ಪ್ರೊ ಎಲೆಕ್ಟ್ರಿಕ್ ಆವೃತ್ತಿಯೂ ಲಭ್ಯವಿದೆ. ಅದಕ್ಕೆ ಅಗ್ನಿ ಪ್ಲಸ್ ಎಂದು ಹೆಸರಿಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಗಡಿ ವಿಚಾರದ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ.

Wed Dec 21 , 2022
ಗಡಿ ವಿಚಾರದ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ಗಡಿ ವಿಚಾರ ಕೋರ್ಟಿನಲ್ಲಿರುವಾಗ ಮಹಾರಾಷ್ಟ್ರ ಪದೆ ಪದೆ ಕ್ಯಾತೆ ತೆಗೆಯುತ್ತಿದೆ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಗಡಿ ವಿಚಾರದಲ್ಲಿ ಯಾವುದೇ ರೀತಿಯ ಕಾಂಪ್ರಾಮೈಸ್ ಗೆ ನಮ್ಮ ಸರಕಾರ ತಯಾರಿಲ್ಲ ಕರ್ನಾಟಕದ ಒಂದಿಂಚು ಜಾಗವನ್ನು ಯಾರಿಗೂ ಬಿಟ್ಟುಕೊಡುವ ಮಾತೇ ಇಲ್ಲ ಈ ಕುರಿತು ಉಭಯ ಸದನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial