ಎಲೆಕ್ಟ್ರಿಕ್ ವಾಹನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಸ್ಟೇಷನ್ ಆರಂಭ.

 ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲು ಸರ್ಕಾರ ನೂತನ ನೀತಿ ಜಾರಿಗೆ ಮುಂದಾಗಿದೆ. ರಾಜ್ಯಾದ್ಯಂತ ನಗರ ಪಟ್ಟಣಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯಾದ್ಯಂತ ಹೆದ್ದಾರಿಗಳಲ್ಲಿ, ಎರಡನೇ ಮತ್ತು ಮೂರನೇ ಸ್ತರದ ನಗರ, ಪಟ್ಟಣಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಇದಕ್ಕಾಗಿ ನೂತನ ನೀತಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡುವ ಸಾಧ್ಯತೆ ಇದೆ.

ವಿದ್ಯುತ್ ಸರಬರಾಜು ಕಂಪನಿಗಳನ್ನು ನೋಡಲ್ ಏಜೆನ್ಸಿಗಳಾಗಿ ಆಯ್ಕೆ ಮಾಡಲಾಗುವುದು. ಹೆದ್ದಾರಿಗೆ ಹೊಂದಿಕೊಂಡ ಎಲ್ಲ ಸಣ್ಣಪುಟ್ಟ ಪಟ್ಟಣ ನಗರಗಳಲ್ಲಿಯೂ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಆರಂಭದಲ್ಲಿ 1,200 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಹೆದ್ದಾರಿ ಟೋಲ್ ಗಳ ಎರಡು ಬದಿಗಳಲ್ಲಿ, ಆರ್‌ಟಿಓ ಕಚೇರಿ, ರೈಲು ನಿಲ್ದಾಣ, ಎಸ್ಕಾಂ ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಾಗುವುದು. ಪಟ್ಟಣ ಪ್ರದೇಶದಲ್ಲಿ ಜಾಗ ಹೊಂದಿದವರು ವಿದ್ಯುತ್ ಸರಬರಾಜು ಕಂಪನಿಗಳ ಸಹಾಯ ಯೋಗದಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಬಹುದು. ಗುಣಮಟ್ಟದ, ನಿರಂತರ ವಿದ್ಯುತ್ ಸಂಪರ್ಕ, ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಮೂಲ ಸೌಕರ್ಯಗಳನ್ನು ಎಸ್ಕಾಂ ಕಲ್ಪಿಸಲಿದ್ದು, ಎಸ್ಕಾಂ ಮತ್ತು ಜಾಗದ ಮಾಲೀಕರ ನಡುವೆ ಲಾಭ ಹಂಚಿಕೆಯಾಗಲಿದೆ. ಇಂತಹ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲು ವಿನಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಯಿಂದ ತತ್ತರಿಸಿರುವ ಜನತೆಗೆ ಶಾಕ್ : ಇಂದಿನಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಮಧಿಗಿರಿಯಲ್ಲಿ ಸಂಪಲ್ಲಿ ಬಿದ್ದು ಬಾಲಕನ ಸಾವು ಸಾವು ಪ್ರಕರಣ.

Mon Dec 5 , 2022
ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದ ವೇಳೆಯಲ್ಲಿ ವೈದ್ಯರು ಇರದ ಹಿನ್ನೆಲೆಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆಮೊದಲು ಏನಾಗಿದೆ ಅಂತ ತಿಳಿದುಕೊಳ್ಳಬೇಕುಕೊರಟಗೆರೆಯಲ್ಲಿ ಆ ಮಗು ಬೆಳಗ್ಗೆ 4.15ಕ್ಕೆ ಸಂಪಿನಲ್ಲಿ ಬಿದ್ದಿದೆಆಗಲೇ ಆ ಬಾಲಕನಿಗೆ ಉಸಿರಾಟದ ತೊಂದರೆ ಇದೆ5 ಗಂಟೆಗೆ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ರುವಿಶೇಷ ನಿರ್ದೇಶಕರನ್ನು ಕಳಿಸಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆಆರೋಗ್ಯ ವ್ಯವಸ್ಥೆ ಮೇಲೆ ಮಾತಾಡೋದು ಸುಲಭಆದ್ರೆ ವ್ಯವಸ್ಥೆ ಮೇಲೆ ವಿಶ್ವಾಸ ಮೂಡಿಸುವುದು ಕಷ್ಟಜವಾಬ್ದಾರಿ ಸ್ಥಾನದಲದಲ್ಲಿರೋರು ಜವಾಬ್ದಾರಿಯಾಗಿ ಮಾತಾಡಬೇಕುಎಲ್ಲದಕ್ಕೂ ರಾಜಕೀಯದ ಬಣ್ಣ […]

Advertisement

Wordpress Social Share Plugin powered by Ultimatelysocial