90 ಎಲೆಕ್ಟ್ರಿಕ್ ಬಸ್​ಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ, ಎಲ್ಲೆಲ್ಲಿ ಸಂಚಾರ? ಟಿಕೆಟ್​ ದರ ಎಷ್ಟು?

ಬಿಎಂಟಿಸಿ(BMTC)ಯ ಬಹು ವರ್ಷಗಳ ಕನಸಿನ ಯೋಜನೆ ಇಂದು ಸಾಕಾರಗೊಂಡಿದೆ. ದೇಶದಲ್ಲೇ ಮೊದಲ BS6 ಇಂಜಿನ್ ಡೀಸೆಲ್ ಬಸ್​ಗಳಿಗೂ ಇಂದು ಚಾಲನೆ ಸಿಕ್ಕಿದೆ. ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ಅವರು ಸ್ಮಾರ್ಟ್ ಸಿಟಿ ಯೋಜನೆ(Smart City Plan) ಅಡಿಯಲ್ಲಿ 90 ಮಿನಿ ಎಲೆಕ್ಟ್ರಿಕ್ ಬಸ್​​ಗಳಿಗೆ ವಿಧಾನಸೌಧದ ಮುಂದೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು(Sriramulu) ಬಸ್​​ನಲ್ಲಿ ಪ್ರಯಾಣ ಮಾಡುವ ಮೂಲಕ ಚಾಲನೆ ನೀಡಿದರು. ಬಿಎಸ್ 6 ಡೀಸೆಲ್ ಬಸ್(Diesel Bus)​​ಗಳನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪರಿಚಯ ಮಾಡಲಾಗಿದೆ. ಪರಿಸರ ಮಾಲಿನ್ಯ ಕಡಿಮೆ ಇರುವ, ಅತಿ ಕಡಿಮೆ‌ ಹೊಗೆ ಹೊರಸೂಸುವ ಬಸ್​ಗಳಾಗಿವೆ. ಈ ಬಸ್​​ನಲ್ಲಿ 33 ಆಸನಗಳ ವ್ಯವಸ್ಥೆ ಇದೆ.

ಈ ಹಿಂದೆ ಸರ್ಕಾರ ಬಜೆಟ್ ನಲ್ಲಿ ನೀಡಿದ್ದ ಅನುದಾನದಲ್ಲಿ 535 BS6 ಡೀಸೆಲ್ ಬಸ್ ಖರೀದಿ ಮಾಡಲಾಗಿದೆ. ಈಗಾಗಲೇ 40 ಎಲೆಕ್ಟ್ರಿಕ್, 150 BS6 ಡೀಸೆಲ್ ಬಸ್ಸುಗಳು ಬಿಎಂಟಿಸಿ ಸಂಸ್ಥೆ ಸೇರಿವೆ. ಫೆಬ್ರವರಿ ವೇಳೆಗೆ ಉಳಿದ ಎಲ್ಲಾ ಹೊಸ ಬಸ್ಸುಗಳು ತನ್ನ ಸಂಚಾರ ಆರಂಭಿಸಲಿವೆ.

ಇಂದಿನಿಂದ 90 ಎಲೆಕ್ಟ್ರಿಕ್ ಬಸ್​ ಕಾರ್ಯಾಚರಣೆ

90 ಎಲೆಕ್ಟ್ರಿಕ್ ಹಾಗೂ 265 ಬಿಎಸ್ 6 ಬಸ್ ಇಂದಿನಿಂದ ಕಾರ್ಯಾರಂಭ ಮಾಡಲಿವೆ. ಒಂದೂವರೆ ಗಂಟೆ ಜಾರ್ಜ್ ಮಾಡಿದರೆ 180 ಕಿ.ಮೀ. ಓಡಾಟ ನಡೆಸಲಿವೆ. ಧ್ವನಿವರ್ದಕ, ಸಿಸಿಟಿವಿ ಬಸ್ ವ್ಯವಸ್ಥೆ ಇದೆ. ಸಂಚಾರ ಸಮಸ್ಯೆಗೆ ಕಡಿವಾಣ ಹಾಕಲು ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಫೀಡರ್ ಸೇರಿದಂತೆ ಬೇರೆಡೆಯೂ ಬಸ್ ಸಂಚಾರ ಮಾಡಲಿದೆ. ಕೆಂಗೇರಿ, ಯಶವಂತಪುರ, ಕೆ ಆರ್ ಪುರಂ ಘಟಕದಲ್ಲಿ ಬಸ್ ಕಾರ್ಯಾಚರಣೆ ಇರುತ್ತದೆ. ಪರಿಸರ ಮಾಲಿನ್ಯ ರಹಿತ ಎಲೆಕ್ಟ್ರಿಕ್ ಬಸ್ ಇದಾಗಿದೆ.

ದೇಶದಲ್ಲಿ ಸಬ್ಸಿಡಿಗಳ ಆಧಾರದ ಮೇಲೆ ಸಾರಿಗೆ ಸಂಸ್ಥೆ ನಡೆಸಲು ಕಷ್ಟ

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಇಂದು ವಿದ್ಯುತ್ ಚಾಲಿತ & BS 6 ಬಸ್ಸುಗಳಿಗೆ ಚಾಲನೆ ನೀಡಲಾಗಿದೆ. ಟ್ರಾನ್ಸ್ ಪೋರ್ಟ್ ಇಲಾಖೆ ಸರ್ಕಾರ ಜೀವನಾಡಿ ಇದ್ದ ಹಾಗೆ. ದೇಶಗಳಲ್ಲಿ ಜನಸಾಮಾನ್ಯರು ಸಂಚಾರ ಮಾಡಲು ಇರುವ ದೊಡ್ದ ವ್ಯವಸ್ಥೆ ಸಾರಿಗೆ ವ್ಯವಸ್ಥೆ. ಭಾರತಲ್ಲೂ ಹಲವು ಬದಲಾವಣೆಯೊಂದಿಗೆ ಸಾರಿಗೆ ಮುಂದೆ ಹೋಗುತ್ತಿದೆ. ದೇಶದಲ್ಲಿ ಸಬ್ಸಿಡಿಗಳ ಆಧಾರದ ಮೇಲೆ ಸಾರಿಗೆ ಸಂಸ್ಥೆ ನಡೆಸಲು ಕಷ್ಟವಿದೆ. ರಾಜ್ಯದಲ್ಲಿ ಸಾರಿಗೆ ಸಂಸ್ಥೆ ಆರ್ಥಿಕ ಸ್ವಾವಲಂಬನೆ ಆಗಬೇಕು. ರಾಜ್ಯಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಉತ್ತಮ ಟೆಕ್ನಾಲಜಿ ಒಳಗೊಂಡ ಬಸ್​​ಗಳು

ಸಾರಿಗೆ ಇಲಾಖೆ ಸರ್ಕಾರದ ಜೀವನಾಡಿ. ಹಲವಾರು ಬದಲಾವಣೆಯೊಂದಿಗೆ ಸಾರಿಗೆ ಸಂಸ್ಥೆ ಮುಂದುವರೆಯುತ್ತಿದೆ. ನಮ್ಮ ಸಾರಿಗೆ ಸಂಸ್ಥೆ ಮುಂದೆ ಬರಬೇಕು ಎಂಬುದು ನಮ್ಮ ಆಶಯ. ಸಬ್ಸಿಡಿ ಆಧಾರದಲ್ಲಿ ಸಾರಿಗೆ ಸಂಸ್ಥೆ ನಡೆಸಲು ಸಾಧ್ಯವಿಲ್ಲ. ಪುನಶ್ಚೇತನ ಮಾಡಲು ಶ್ರೀನಿವಾಸ ಮೂರ್ತಿಯವರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿದ್ದೆವು. ಒಂದು ಹೊಸ ಸ್ವರೂಪವನ್ನು ಸಾರಿಗೆ ಸಂಸ್ಥೆಗೆ ಕೊಡುತ್ತೇವೆ. BS 6 ಬಸ್ ಗಳನ್ನು ಅಳಡಿಸುತ್ತಿರುವುದು ಸಂತೋಷ ಸಂಗತಿ. ಇವು ಉತ್ತಮ ಟೆಕ್ನಾಲಜಿ ಒಳಗೊಂಡ ಬಸ್ಸುಗಳು ಎಂದು ಹೇಳಿದರು.

ರಾಮುಲು ಡೈನಾಮಿಕ್ ಸಚಿವರು

ವಿದ್ಯುತ್ ಚಾಲಿತ ಬಸ್​​ಗಳು ವಾಯು ಮಾಲಿನ್ಯವನ್ನು ತಡೆಗಟ್ಟುವ ಕೆಲಸ ಮಾಡುತ್ತದೆ. ಇವುಗಳಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆಯಾಗುತ್ತದೆ. ನಾವು ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಬಹುದು. ಸರ್ಕಾರದಿಂದ ಅನುದಾನ ಕೇಳುವುದು ಬಹಳ ಸುಲಭ. ಆದ್ರೆ ಹೆಚ್ಚಿನ ಸೋರಿಕೆ ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿದೆ. ಸಾರಿಗೆ ಸಂಸ್ಥೆ ಲಾಭದಾಯಕದ ಕಡೆ ಗಮನ ಕೊಡಬೇಕು. ಹೊಸ ಹೊಸ ಸಾರಿಗೆ ಮಾರುಕಟ್ಟೆಯನ್ನು ಮಾಡುವ ಕೆಲಸ ಮಾಡುತ್ತೇವೆ. ಪ್ರೈವೇಟ್ ಕಂಪನಿಗಳು ಲಾಭ ಮಾಡುತ್ತಿದ್ದಾರೆ, ನಾವು ಯಾಕೆ ಮಾಡಲು ಸಾಧ್ಯವಿಲ್ಲ. ರಾಮುಲು ಡೈನಾಮಿಕ್ ಸಚಿವರಿದ್ದಾರೆ, ಅವರ ನೇತೃತ್ವದಲ್ಲಿ ಕೆಲಸ ಮಾಡಬೇಕು ಎಂದರು.
ವಿಶ್ವದಲ್ಲಿ ಸಂಚಾರ ವ್ಯವಸ್ಥೆ ನಿಯಮ ಪಾಲನೆ ಮಾಡಬೇಕು. ಪರಿಸರ ವ್ಯವಸ್ಥೆ ನಾಶವಾಗದಂತೆ ಸಂಚಾರ ವ್ಯವಸ್ಥೆ ಇರಬೇಕು. ಸರ್ಕಾರ & ಖಾಸಗಿಯಾಗಿ ಇಬ್ಬರು ರೂಲ್ಸ್ ಪಾಲನೆ ಮಾಡಬೇಕು ಎಂದರು.

ಸಿಎಂಗೆ ಅಭಿನಂದನೆ ಸಲ್ಲಿಸಿದ ಶ್ರೀರಾಮುಲು

ಇದೇ ವೇಳೆ, ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಇಂದು ಇಡೀ ರಾಜ್ಯದ ಮಟ್ಟಕ್ಕೆ ಬಹಳ ವಿಶೇಷವಾದ ದಿನ. ರಾಜ್ಯದಲ್ಲಿ ಇತಿಹಾಸ ಸೃಷ್ಟಿ ಮಾಡುವ ದಿನ. ದೇಶದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಪರಿಸರವನ್ನು ಉಳಿಸುವ ಕೆಲಸವನ್ನು ಅನೇಕ ಸಂಘ ಸಂಸ್ಥೆಗಳು ಮಾಡುತ್ತಿದೆ. ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ವಿದ್ಯುತ್ ಚಾಲಿತ ಮತ್ತು BS 6 ಬಸ್ಸುಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದಕ್ಕೆ ಅನುದಾನ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಈ ವಾರ ತೆರೆಗೆ "ಹುಟ್ಟುಹಬ್ಬದ ಶುಭಾಶಯಗಳು"

Mon Dec 27 , 2021
ಕ್ರಿಸ್ಟಲ್ ಪಾರ್ಕ್‌ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಿಸಿರುವ “ಹುಟ್ಟುಹಬ್ಬದ ಶುಭಾಶಯಗಳು” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾಗರಾಜ್ ಬೆತ್ತುರ್ ನಿರ್ದೇಶನದ ಈ ಚಿತ್ರದ ನಾಯಕನಾಗಿ ದಿಗಂತ್ ಅಭಿನಯಿಸಿದ್ದಾರೆ. ಕವಿತಾಗೌಡ ಈ ಚಿತ್ರದ ನಾಯಕಿ. ಚೇತನ್ ಗಂಧರ್ವ, ಮಡೆನೂರು ಮನು, ಶರಣ್ಯ ಶೆಟ್ಟಿ, ಸೂರಜ್, ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಸನ್ನ ಕಥೆ, ಚಿತ್ರಕಥೆ ಬರೆದಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಆನಂದ್ ರಾಜ್ […]

Advertisement

Wordpress Social Share Plugin powered by Ultimatelysocial