ಇಲಿಗಳನ್ನು ಮನೆಯಿಂದ ಹೊರಗೆ ಓಡಿಸಲು ಇಲ್ಲಿದೆ ಸುಲಭ ಮಾರ್ಗ

ಇಲಿಗಳನ್ನು ಮನೆಯಿಂದ ಹೊರಗೆ ಓಡಿಸಲು ಇಲ್ಲಿದೆ ಸುಲಭ ಮಾರ್ಗ

 

ಅನೇಕರು ಮನೆಯಲ್ಲಿ ಇಲಿಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಾರೆ. ಇಲಿಗಳು ಮನೆಯಲ್ಲಿ ಸಂಗ್ರಹಿಸಿಟ್ಟ ಕಾಳು, ಧಾನ್ಯ, ಬಟ್ಟೆ ಹಾಳು ಮಾಡುತ್ತವೆ. ಅಷ್ಟೆ ಏಕೆ ವಾಷಿಂಗ್‌ ಮಷಿನ್‌, ಕಾರ್‌ ಹೀಗೆ ಎಲೆಕ್ಟ್ರಾನಿಕ್‌ ವಸ್ತುಗಳಿಗೂ ಹಾನಿ ಮಾಡುತ್ತವೆ. ಹಾಗಾಗಿ ಇಲಿಗಳನ್ನು ಓಡಿಸಲು ಔಷಧಿಗಳನ್ನು ಬಳಸುತ್ತಾರೆ.

ಇದರಿಂದ ಇಲಿಗಳು ಸತ್ತು ಮನೆಯ ತುಂಬಾ ವಾಸನೆ ಹರಡಬಹುದು. ಹಾಗಾಗಿ ಈ ಮನೆಮದ್ದುಗಳನ್ನು ಬಳಸಿ.

ಪುದೀನಾ : ಇದರ ವಾಸನೆ ಇಲಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಪುದೀನಾ ಎಲೆ ಅಥವಾ ಹೂಗಳನ್ನು ತಂದು ಇಲಿಗಳ ಬಿಲದ ಬಳಿ ಇಡಿ. ಇದರ ವಾಸನೆಗೆ ಇಲಿಗಳು ಓಡಿ ಹೋಗುತ್ತವೆ.

ಲವಂಗದ ಎಲೆ : ಮಸಾಲೆಗೆ ಬಳಸುವ ಈ ವಸ್ತು ಇಲಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇವುಗಳ ವಾಸನೆ ಇಲಿಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಇದರ ವಾಸನೆ ಅವು ಓಡಿಹೋಗುತ್ತವೆ.

ಕೆಂಪು ಮೆಣಸಿನ ಕಾಯಿ : ಕೆಂಪು ಮೆಣಸಿನ ಕಾಯಿ ಇಲಿಗಳನ್ನು ಓಡಿಸಲು ತುಂಬಾ ಸಹಕಾರಿಯಾಗಿವೆ. ಹಾಗಾಗಿ ಇಲಿಗಳು ಇರುವ ಕಡೆ ಕೆಂಪು ಮೆಣಸಿನ ಪುಡಿಯನ್ನು ಚೆಲ್ಲಿ. ಇದರಿಂದ ಇಲಿಗಳು ಮನೆಯಿಂದ ಓಡಿ ಹೋಗುತ್ತವೆ.

ಈರುಳ್ಳಿ : ಇಲಿಗಳನ್ನು ಓಡಿಸಲು ಇದು ನೈಸರ್ಗಿಕವಾದ ಮಾರ್ಗವಾಗಿದೆ. ಈರುಳ್ಳಿ ವಾಸನೆ ಇಲಿಗಳಿಗೆ ಇಷ್ಟವಾಗುವುದಿಲ್ಲ ಹಾಗಾಗಿ ಇಲಿಗಳು ಬರುವ ಕಡೆ ಈರುಳ್ಳಿಯನ್ನು ಕತ್ತರಿಸಿ ಇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರೋಹಿತ್‌ ವೇಗದ ಟಿ20 ಶತಕಕ್ಕೆ ಇಂದಿಗೆ 4 ವರ್ಷ: ಇನ್ನೂ ಯಾರಿಂದಲೂ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

Wed Dec 22 , 2021
ಟೀಂ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಮಾಡಿದ ಅದ್ಭುತ ದಾಖಲೆಗೆ ಇಂದಿಗೆ ನಾಲ್ಕು ವರ್ಷಗಳೇ ಕಳೆದಿವೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಲಿಮಿಟೆಡ್ ಓವರ್ ಕ್ರಿಕೆಟ್‌ಗೆ ನಾಯಕನಾಗಿ ಆಯ್ಕೆಗೊಂಡ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಮಿಸ್ ಆಗಿದ್ದಾರೆ. ಆದ್ರೆ ಹರಿಣಗಳ ವಿರುದ್ಧ ಏಕದಿನ ಸರಣಿಗೆ ಮರಳುವ ಸಾಧ್ಯತೆಯಿದೆ. ಇಂದಿಗೆ ನಾಲ್ಕು ವರ್ಷಗಳ ಹಿಂದೆ ಸರಿಯಾಗಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಅಬ್ಬರದ ಆಟವಾಡುವ ಮೂಲಕ […]

Advertisement

Wordpress Social Share Plugin powered by Ultimatelysocial