ರೋಹಿತ್‌ ವೇಗದ ಟಿ20 ಶತಕಕ್ಕೆ ಇಂದಿಗೆ 4 ವರ್ಷ: ಇನ್ನೂ ಯಾರಿಂದಲೂ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

ರೋಹಿತ್‌ ವೇಗದ ಟಿ20 ಶತಕಕ್ಕೆ ಇಂದಿಗೆ 4 ವರ್ಷ: ಇನ್ನೂ ಯಾರಿಂದಲೂ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

ಟೀಂ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಮಾಡಿದ ಅದ್ಭುತ ದಾಖಲೆಗೆ ಇಂದಿಗೆ ನಾಲ್ಕು ವರ್ಷಗಳೇ ಕಳೆದಿವೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಲಿಮಿಟೆಡ್ ಓವರ್ ಕ್ರಿಕೆಟ್‌ಗೆ ನಾಯಕನಾಗಿ ಆಯ್ಕೆಗೊಂಡ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಮಿಸ್ ಆಗಿದ್ದಾರೆ.

ಆದ್ರೆ ಹರಿಣಗಳ ವಿರುದ್ಧ ಏಕದಿನ ಸರಣಿಗೆ ಮರಳುವ ಸಾಧ್ಯತೆಯಿದೆ.

ಇಂದಿಗೆ ನಾಲ್ಕು ವರ್ಷಗಳ ಹಿಂದೆ ಸರಿಯಾಗಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಅಬ್ಬರದ ಆಟವಾಡುವ ಮೂಲಕ ಅದ್ಭುತ ದಾಖಲೆಯನ್ನೇ ನಿರ್ಮಿಸಿದ್ರು. ಕೇವಲ 35 ಎಸೆತಗಳಲ್ಲಿ ಮೂರಂಕಿ ಗಡಿ ದಾಟಿದ ರೋಹಿತ್ ಶರ್ಮಾ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 10 ಅತ್ಯಮೋಘ ಸಿಕ್ಸರ್‌ಗಳಿದ್ದವು.

ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ರು. ಚಾಣಾಕ್ಯ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದ ರೋಹಿತ್ ಟಿ20 ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದ್ರು.

118 ರನ್‌ಗಳ ಕಲೆಹಾಕಿದ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಸಿಡಿಸುವ ಮೊದಲು, ಇದೇ ಮೊತ್ತಕ್ಕೆ ಸರಿಯಾಗಿ ದಕ್ಷಿಣ ಆಫ್ರಿಕಾ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ ್ ಡೇವಿಡ್ ಮಿಲ್ಲರ್ ಕೂಡ ಬಾಂಗ್ಲಾದೇಶದ ವಿರುದ್ಧ 35 ಎಸೆತಗಳಲ್ಲಿ ವೇಗದ ಶತಕ ಸಿಡಿಸಿದ್ರು. ಆದ್ರೆ ರೋಹಿತ್ ಕೂಡ ಅದೇ ಎಸೆತಗಳಲ್ಲಿ ಶತಕ ದಾಖಲಿಸಿ ಮಿಲ್ಲರ್ ದಾಖಲೆ ಸರಿಗಟ್ಟಿದ್ರು.

ರೋಹಿತ್‌ರ ಅಮೋಘ ಆಟದ ನೆರವಿನಿಂದ ಟೀಂ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ ಬರೋಬ್ಬರಿ 260 ರನ್ ಕಲೆಹಾಕಿತು. ಇದೇ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಕೂಡ ಸ್ಫೋಟಕ ಆಟವಾಡಿ 49 ಎಸೆತಗಳಲ್ಲಿ 89 ರನ್‌ ಸಿಡಿಸಿ ಮಿಂಚಿದ್ರು.

ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಟೀಮ ಇಂಡಿಯಾ ಲಿಮಿಟೆಡ್ ಓವರ್ ಕ್ಯಾಪ್ಟರ್ ರೋಹಿತ್‌ರ ಆ ಭರ್ಜರಿ ಇನ್ನಿಂಗ್ಸ್ ಹೇಗಿತ್ತು ಅನ್ನೋದನ್ನು ಈ ಕೆಳಗಿನ ವೀಡಿಯೋದಲ್ಲಿ ನೋಡಿ

ಭಾರತದ ನೀಡಿದ ಬೆಟ್ಟದಂತಹ ಗುರಿ ಬೆನ್ನತ್ತಿದ ಶ್ರೀಲಂಕಾ 172ರನ್‌ಗಳಿಗೆ ಆಲೌಟ್ ಆಗಿದೆ. ಯುಜವೇಂದ್ರ ಚಹಾ ನಾಲ್ಕು ವಿಕೆಟ್ ಕಬಳಿಸಿದ್ರೆ, ಕುಲ್‌ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದ್ರು.

ಇತ್ತೀಚೆಗಷ್ಟೇ ರೋಹಿತ್ ಶರ್ಮಾರನ್ನ ಬಿಸಿಸಿಐ ಟೀಂ ಇಂಡಿಯಾದ ಲಿಮಿಟೆಡ್ ಓವರ್ ಕ್ಯಾಪ್ಟರ್ ಆಗಿ ನೇಮಿಸಿದ್ದು, ವಿರಾಟ್ ಕೊಹ್ಲಿಯನ್ನ ನಾಯಕತ್ವದಿಂದ ವಜಾಗೊಳಿಸಿತು. ಆದ್ರೂ ಕೊಹ್ಲಿ ಕುರಿತು ರೋಹಿತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

“ಆ ಐದು ವರ್ಷಗಳಲ್ಲಿ ಅವರು ಅವರು ಹಿಂತಿರುಗಿ ನೋಡದಂತಹ ಪರಿಸ್ಥಿತಿಗೆ ತಂಡವನ್ನು ಮುನ್ನಡೆಸಿದರು, ನಾವು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅವರು ಎಲ್ಲರನ್ನೂ ಮುನ್ನಡೆಸಿದರು. ಪ್ರತಿ ಪಂದ್ಯವನ್ನು ಗೆಲ್ಲಲು ಸ್ಪಷ್ಟವಾದ ಧೈರ್ಯ ಮತ್ತು ದೃಢಸಂಕಲ್ಪವಿತ್ತು. ಆ ಮೂಲಕ ಇಡೀ ತಂಡಕ್ಕೆ ಸಂದೇಶ ನೀಡಿದರು” ಎಂದು ರೋಹಿತ್ ಹೇಳಿದರು.

ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದು, ರೋಹಿತ್ ಬದಲಿಗೆ ಕೆ.ಎಲ್ ರಾಹುಲ್‌ರನ್ನ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಸೀದಿಗಳಲ್ಲಿ ಧ್ವನಿವರ್ಧಕ- ವಕ್ಫ್‌ ಮಂಡಳಿಗಿಲ್ಲ ಅಧಿಕಾರ

Wed Dec 22 , 2021
ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕ ಬಳಸದಂತೆ ಇದಾಗಲೇ ಹೈಕೋರ್ಟ್‌ ಕೂಡ ನಿರ್ದೇಶನ ನೀಡಿದೆ. ಇದರ ಹೊರತಾಗಿಯೂ ಹಲವೆಡೆಗಳಲ್ಲಿ ಧ್ವನಿವರ್ಧಕ ಬಳಸುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಸೀದಿಗಳಲ್ಲಿರುವ ಧ್ವನಿ ವರ್ಧಕ ತೆರವುಗೊಳಿಸುವ ಕುರಿತು ಪೊಲೀಸ್ ಮಹಾ ನಿರ್ದೇಶಕರು ಕೆಲ ತಿಂಗಳ ಹಿಂದಷ್ಟೇ ಸುತ್ತೋಲೆ ಹೊರಡಿಸಿದ್ದರು. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ನವೆಂಬರ್ 2ರಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಸುತ್ತೋಲೆ ರವಾನೆಯಾಗಿದೆ. ರಾಜ್ಯದ ಎಲ್ಲಾ ಪೊಲೀಸ್ […]

Advertisement

Wordpress Social Share Plugin powered by Ultimatelysocial