ಎಲಿಜಬೆತ್ ಟೇಲರ್ ಇಪ್ಪತ್ತನೆಯ ಶತಮಾನದ ಮಹಾನ್ ನಟಿ.

 

ಇಪ್ಪತ್ತನೆಯ ಶತಮಾನದ ಮಹಾನ್ ನಟಿ, ಹಾಲಿವುಡ್ಡಿನ ದಂತ ಕಥೆ ಎಂದೇ ಖ್ಯಾತರಾಗಿದ್ದ ಲಿಜ್ ಟೇಲರ್ ಅಥವಾ ಎಲಿಜಬೆತ್ ಟೇಲರ್ ಅವರು 1932 ವರ್ಷದ ಫೆಬ್ರವರಿ 27 ರಂದು ಲಂಡನ್ನಿನಲ್ಲಿ ಜನಿಸಿದರು.
ಅವರು ನಿಧನರಾದ ಸಂದರ್ಭದಲ್ಲಿ “ಇಡೀ ಜೀವನವನ್ನು ಸಂತೋಷದಿಂದ, ಪರಿಪೂರ್ಣವಾಗಿ ಆನಂದಿಸಿದ್ದ ಟೇಲರ್, ಹಾಸ್ಯಜೀವಿಯಾಗಿ, ಪ್ರೀತಿ ನೀಡುವ ತಾಯಿಯಾಗಿ ನಮ್ಮೆಲ್ಲರನ್ನೂ ನೋಡಿಕೊಂಡಿದ್ದರು” ಎಂದು ಅವರ ಪುತ್ರ ಮೈಕೆಲ್ ವಿಲ್ಡಿಂಗ್ ಹೇಳಿದ ಮಾತುಗಳು ಎಲಿಜಬೆತ್ ಟೇಲರ್ ಅವರ ಬದುಕಿನ ಕುರಿತಾದ ಒಂದು ಸಮಗ್ರ ಸಂಗ್ರಹ ವಾಕ್ಯದಂತೆ ಕಾಣುತ್ತದೆ.’ದೇರ್ಸ್‌ ಒನ್ ಬಾರ್ನ್ ಎವ್ರಿ ಮಿನಟ್’ ಎಂಬ ಹಾಸ್ಯಚಿತ್ರದಲ್ಲಿ ನಟಿಸಿದಾಗ ಎಲಿಜಬೆತ್ ಅವರಿಗೆ ವಯಸ್ಸಿನ್ನೂ ಹತ್ತು. 1942ರಲ್ಲಿ ಆ ಚಿತ್ರ ಬಿಡುಗಡೆಯಾಯಿತು. ಅದಾದ ಎರಡು ವರ್ಷದ ನಂತರ ‘ನ್ಯಾಷನಲ್ ವೆಲ್ವೆಟ್’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದಾಗ ಅವರು ಬಾಲತಾರೆ ಎನಿಸಿಕೊಂಡರು.
1960ರಲ್ಲಿ ‘ಬಟರ್‌ಫೀಲ್ಡ್ 8′ ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕೆ ಎಲಿಜಬೆತ್ ಟೇಲರ್ ಅವರಿಗೆ ಆಸ್ಕರ್ ಪ್ರಶಸ್ತಿ ಸಂದಿತು. 1966ರಲ್ಲಿ ‘ಹೂಸ್ ಅಫ್ರೈಡ್ ಆಫ್ ವರ್ಜಿನಿಯಾ ವೂಲ್ಫ್?’ ಅಭಿನಯಕ್ಕೆ ಅವರಿಗೆ ಮತ್ತೊಂದು ಆಸ್ಕರ್‌ನ ಗರಿ ಮೂಡಿತು. 1957ರಿಂದ ಸತತ ಮೂರು ವರ್ಷ ‘ರೇನ್ ಟ್ರೀ ಕಂಟ್ರಿ’, ‘ಕ್ಯಾಟ್ ಆನ್ ಎ ಹಾಟ್ ಟಿನ್ ರೂಫ್’ ಹಾಗೂ ‘ಸಡನ್ಲಿ, ದಿ ಲಾಸ್ಟ್ ಸಮ್ಮರ್’ ಚಿತ್ರಗಳ ನಟನೆಗಾಗಿ ಅವರ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿತ್ತು.
‘ಕ್ಲಿಯೋಪಾತ್ರಾ’ ಕಳೆದ ಶತಮಾನದ ಅತ್ಯಂತ ಜನಪ್ರಿಯ ಚಿತ್ರಗಳಲ್ಲೊಂದು. ಆ ಚಿತ್ರದಲ್ಲಿನ ದೃಶ್ಯ ವೈಭವಗಳು ಮರೆಯುವಂತದ್ದಲ್ಲ.ಹಾಲಿವುಡ್ ಚಿತ್ರದ ಅಭಿನಯಕ್ಕಾಗಿ 10 ಲಕ್ಷ ಡಾಲರ್ ಸಂಭಾವನೆ ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಎಲಿಜಬೆತ್ ಪಾತ್ರವಾದದ್ದು ಆ ಚಿತ್ರದ ಮೂಲಕ. 1963ರಲ್ಲಿ ತೆರೆಕಂಡ ‘ಕ್ರಿಯೋಪಾತ್ರ’ ಆ ವರ್ಷ ಅತಿಹೆಚ್ಚು ಹಣ ಗಳಿಸಿದ ಚಿತ್ರವೂ ಹೌದು. ಆ ಚಿತ್ರ ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರದ ಪಾತ್ರಕ್ಕಾಗಿ 65 ಉಡುಗೆಗಳನ್ನು ಎಲಿಜಬೆತ್ ಬದಲಿಸಿದ್ದರು. ಆ ಸಂದರ್ಭದಲ್ಲಿ ಅದು ಗಿನ್ನೆಸ್ ದಾಖಲೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೃದಯ ಸಂಬಂಧಿ ಕಾಯಿಲೆಗೆ ಮದ್ದು.

Mon Feb 27 , 2023
  ತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು.ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.ಸೋಯಾ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದ ಲಿಪಿಡ್ಸ್ ಅಂಶ ಕಡಿಮೆಯಾಗಿ ಕೆಟ್ಟ ಕೊಬ್ಬನ್ನು ನಿಯಂತ್ರಣ ಮಾಡುತ್ತದೆ.ಸೇಬು, ಸ್ಟ್ರಾಬೆರಿ, ಮೂಸುಂಬಿ, ಪಪ್ಪಾಯ, ಕ್ಯಾರೆಟ್, ಮೂಲಂಗಿ, ಟೊಮೆಟೊ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯ ಸಂಬಂಧಿ ರೋಗದಿಂದ ದೂರವಿರಬಹುದು.ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಕುಡಿಯುವ […]

Advertisement

Wordpress Social Share Plugin powered by Ultimatelysocial