ಈತನನ್ನು ಬಿಟ್ಟರೆ ಭಾರತದ ಯಾರೂ ನಮ್ಮ ನೆಲದಲ್ಲಿ ಉತ್ತಮ ಆಟವಾಡಲ್ಲ ಎಂದ ದ.ಆಫ್ರಿಕಾ ನಾಯಕ!

ಈತನನ್ನು ಬಿಟ್ಟರೆ ಭಾರತದ ಯಾರೂ ನಮ್ಮ ನೆಲದಲ್ಲಿ ಉತ್ತಮ ಆಟವಾಡಲ್ಲ ಎಂದ ದ.ಆಫ್ರಿಕಾ ನಾಯಕ!

ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ ಟ್ವೆಂಟಿ ಹಾಗೂ ಟೆಸ್ಟ್ ಎರಡೂ ಸರಣಿಗಳಲ್ಲಿಯೂ ಜಯದ ನಗೆ ಬೀರಿರುವ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಡೀನ್ ಎಲ್ಗರ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸಲಿದೆ.

ಕಳೆದ ಡಿಸೆಂಬರ್ 8ರಂದು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದ ಬಿಸಿಸಿಐ ಅಜಿಂಕ್ಯ ರಹಾನೆ ಬದಲಾಗಿ ರೋಹಿತ್ ಶರ್ಮಾ ಅವರನ್ನು ಭಾರತ ಟೆಸ್ಟ್ ತಂಡದ ನೂತನ ಉಪ ನಾಯಕನನ್ನಾಗಿ ನೇಮಿಸಿತು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವ ಹಾಗೂ ರೋಹಿತ್ ಶರ್ಮಾ ಉಪನಾಯಕತ್ವದಡಿಯಲ್ಲಿ ಟೀಮ್ ಇಂಡಿಯಾ ತನ್ನ ಚೊಚ್ಚಲ ಟೆಸ್ಟ್ ಸರಣಿಯನ್ನಾಡಬೇಕಿತ್ತು. ಆದರೆ ಸರಣಿಗೂ ಮುನ್ನ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ಒಳಗಾದ ಕಾರಣ ಕೆಎಲ್ ರಾಹುಲ್ ನೂತನ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹಾಗೂ ಪ್ರಿಯಾಂಕ್ ಪಾಂಚಾಲ್ ರೋಹಿತ್ ಶರ್ಮಾಗೆ ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಂಡಿದ್ದಾರೆ

ಹೀಗೆ 18 ಆಟಗಾರರ ಟೀಮ್ ಇಂಡಿಯಾ ಈಗಾಗಲೇ ದಕ್ಷಿಣ ಆಫ್ರಿಕಾವನ್ನೂ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ಟೀಮ್ ಇಂಡಿಯಾದ ಆಟಗಾರರು ಹರಿಣಗಳ ನೆಲದಲ್ಲಿ ಹರಿಣಗಳನ್ನೇ ಸೋಲಿಸಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಬಾವುಟವನ್ನು ನೆಡುವ ಯೋಜನೆಯಲ್ಲಿದೆ. ಹೌದು, ಟೀಮ್ ಇಂಡಿಯಾ ಇದುವರೆಗೂ ಒಂದು ಬಾರಿಯೂ ಸಹ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ಈ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಲಿದೆಯಾ ಎಂಬ ಲೆಕ್ಕಾಚಾರಗಳು ಹೆಚ್ಚಾಗಿ ನಡೆಯುತ್ತಿದ್ದು, ಯಾವ ಆಟಗಾರರು ದಕ್ಷಿಣ ಆಫ್ರಿಕಾ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು ಎಂದು ಊಹೆಗಳನ್ನು ನಡೆಸಲಾಗುತ್ತಿದೆ. ಈ ಕುರಿತಾಗಿ ಇದೀಗ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಮಾತನಾಡಿದ್ದು ಈ ಸರಣಿಯಲ್ಲಿ ಭಾರತದ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡಬಲ್ಲ ಎಂದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಈತ ಮಾತ್ರ ಉತ್ತಮ ಪ್ರದರ್ಶನ ನೀಡಬಹುದುಟೀಮ್ ಇಂಡಿಯಾ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಜಸ್ ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಾತಾವರಣದಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಲ್ಲ ಭಾರತದ ಏಕೈಕ ಆಟಗಾರ ಎಂದಿದ್ದಾರೆ. ಈ ಮೂಲಕ ಜಸ್ ಪ್ರೀತ್ ಬುಮ್ರಾ ಕುರಿತು ದಕ್ಷಿಣ ಆಫ್ರಿಕಾಕ್ಕೆ ತಲೆನೋವಿದೆ ಎಂಬ ವಿಚಾರವನ್ನು ಡೀನ್ ಎಲ್ಗರ್ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಓರ್ವನ ಕುರಿತು ಯೋಜನೆಗಳನ್ನು ಹಾಕಿಕೊಳ್ಳುವುದಿಲ್ಲ

ಹೀಗೆ ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಾತಾವರಣದಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಲ್ಲ ಭಾರತದ ಏಕೈಕ ಆಟಗಾರ ಎಂದಿರುವ ಡೀನ್ ಎಲ್ಗರ್ ಆದರೂ ಸಹ ದಕ್ಷಿಣ ಆಫ್ರಿಕಾ ಎದುರಾಳಿ ತಂಡದ ಓರ್ವ ಆಟಗಾರನನ್ನು ತಲೆಯಲ್ಲಿಟ್ಟುಕೊಂಡು ಯೋಜನೆಯನ್ನು ಹಾಕುವುದಿಲ್ಲ ಎಂದಿದ್ದಾರೆ. ಇಡೀ ತಂಡವನ್ನು ಗಣನೆಗೆ ತೆಗೆದುಕೊಂಡು ಯೋಜನೆಗಳನ್ನು ಹಾಕಲಿದ್ದೇವೆ ಎಂದಿರುವ ಡೀನ್ ಎಲ್ಗರ್ ಭಾರತ ತಂಡ ಇತ್ತೀಚಿನ ದಿನಗಳಲ್ಲಿ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿರುವ ತಂಡವಾದ್ದರಿಂದ ಉತ್ತಮ ಪೈಪೋಟಿ ನೀಡಬಹುದಾಗಿದೆ ಎಂದೂ ಸಹ ಹೇಳಿದ್ದಾರೆ.

ಜಾಣ್ಮೆಯಿಂದ ಆಡಿದರೆ ಮಾತ್ರ ಸೆಂಚುರಿಯನ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಬಹುದು

ಹೀಗೆ ಟೀಮ್ ಇಂಡಿಯಾ ಆಟಗಾರರ ಕುರಿತು ಮಾತನಾಡಿರುವ ಡೀನ್ ಎಲ್ಗರ್ ಇತ್ತಂಡಗಳ ನಡುವೆ ನಡೆಯಲಿರುವ ಸೆಂಚುರಿಯನ್ ಟೆಸ್ಟ್ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸೆಂಚೂರಿಯನ್ ಕ್ರೀಡಾಂಗಣದಲ್ಲಿ ತಮ್ಮ ಜಾಣ್ಮೆಯನ್ನು ಉಪಯೋಗಿಸಿ ಆಟವನ್ನು ಆಡಿದರೆ ಮಾತ್ರ ಹೆಚ್ಚು ರನ್ ಗಳಿಸಬಹುದು ಮತ್ತು ಬೌಲಿಂಗ್ ವಿಭಾಗದಲ್ಲಿಯೂ ಕೂಡ ಅಷ್ಟೇ ಪಿಚ್ ಗುಣವನ್ನು ಚೆನ್ನಾಗಿ ಅರಿತು ಬೌಲಿಂಗ್ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಇಲ್ಲವಾದರೆ ಉತ್ತಮ ಪ್ರದರ್ಶನ ನೀಡಲಾಗದೇ ಪರಿತಪಿಸಬೇಕಾಗುತ್ತದೆ ಎಂದು ಡೀನ್ ಎಲ್ಗರ್ ಹೇಳಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಳಸಿ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?

Wed Dec 22 , 2021
ತುಳಸಿ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೇ ರೀತಿ ತುಳಸಿ ಬೀಜದಲ್ಲಿಯೂ ಕೂಡ ಔಷಧೀಯ ಗುಣಗಳಿವೆ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಆಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ತುಳಸಿ ಬೀಜಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿರುತ್ತದೆ. ಇದು ಮಲಬದ್ಧತೆ, ಆಯಸಿಡಿಟಿ, ಅಜೀರ್ಣ ಸಮಸ್ಯೆಯನ್ನು ಪರಿಹರಿಸುತ್ತದೆ. ಹಾಗಾಗಿ ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ.ನಿಮಗೆ ಮೈಕೈ ನೋವಿದ್ದರೆ […]

Advertisement

Wordpress Social Share Plugin powered by Ultimatelysocial