ತುಳಸಿ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ತುಳಸಿ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?

ತುಳಸಿ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೇ ರೀತಿ ತುಳಸಿ ಬೀಜದಲ್ಲಿಯೂ ಕೂಡ ಔಷಧೀಯ ಗುಣಗಳಿವೆ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಆಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ತುಳಸಿ ಬೀಜಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿರುತ್ತದೆ. ಇದು ಮಲಬದ್ಧತೆ, ಆಯಸಿಡಿಟಿ, ಅಜೀರ್ಣ ಸಮಸ್ಯೆಯನ್ನು ಪರಿಹರಿಸುತ್ತದೆ. ಹಾಗಾಗಿ ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ.ನಿಮಗೆ ಮೈಕೈ ನೋವಿದ್ದರೆ ತುಳಸಿ ಬೀಜಗಳನ್ನು ಸೇವಿಸಿ. ತುಳಸಿ ಬೀಜದಲ್ಲಿ ನೋವು ನಿವಾರಕ ಗುಣವಿದೆ. ಇದು ದೇಹದ ನೋವನ್ನು ಕಡಿಮೆ ಮಾಡುತ್ತದೆ.

ತುಳಸಿ ಬೀಜ ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇದೆ, ಫೈಬರ್ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಬೇಗನೆ ಹಸಿವಾಗುವುದಿಲ್ಲ. ಇದರಿಂದ ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯಬಹುದು. ಇದರಿಂದ ತೂಕ ಇಳಿಕೆಯಾಗುತ್ತದೆ. ಹಾಗಾಗಿ ತುಳಿಸಿ ಬೀಜದಿಂದ ಟೀ ತಯಾರಿಸಿ ಕುಡಿಯಿರಿ.

ತುಳಸಿ ಬೀಜವನ್ನು ಸೇವಿಸುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಲಿಸುತ್ತಿದ್ದ ಆಟೋದಿಂದ ಕೆಳಗೆ ಜಿಗಿದ ಯುವತಿ: ಆಟೋ ಒಳಗೆ ನಡೆದ ಭಯಾನಕ ಘಟನೆ ಬಿಚ್ಚಿಟ್ಟ ಸಂತ್ರಸ್ತೆ

Wed Dec 22 , 2021
ನವದೆಹಲಿ: ಆಟೋ ಚಾಲಕನಿಂದ ಅಪಹರಣಕ್ಕೆ ಒಳಗಾಗುವ ಭಯದಿಂದ 28 ವರ್ಷದ ಯುವತಿಯೊಬ್ಬಳು ಚಲಿಸುತ್ತಿದ್ದ ಆಟೋದಿಂದ ಹೊರಗೆ ಜಿಗಿದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಯುವತಿಯು ಭಾನುವಾರ ಮಾರುಕಟ್ಟೆಯಿಂದ ಮನೆಗೆ ಮರಳುವಾಗ ಗುರುಗ್ರಾಮದ 22ನೇ ಸೆಕ್ಟರ್​ನಲ್ಲಿ ಘಟನೆ ನಡೆದಿದೆ. ನಡೆದ ಕಹಿ ಅನುಭವವನ್ನು ಯುವತಿ ತನ್ನ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಟ್ವಿಟರ್​ ಪ್ರೊಫೈಲ್​ನಲ್ಲಿರುವಂತೆ ಯುವತಿಯ ಹೆಸರು ನಿಷ್ಥಾ. ಸಂವಹನ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ತಮ್ಮ ಮನೆಯಿಂದ 7 ಕಿ.ಮೀ ದೂರದಲ್ಲಿರುವ ಮಾರುಕಟ್ಟೆಗೆ ಹೋಗಿದ್ದ […]

Advertisement

Wordpress Social Share Plugin powered by Ultimatelysocial