ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾ ಎಷ್ಟೆಲ್ಲ ದಾಖಲೆಗಳನ್ನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ರಿಷಬ್‌ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಆದರೆ ರಿಷಬ್‌ ಶೆಟ್ಟಿ ಅವರ ಹೊಸ ಸಿನಿಮಾದ ಕುರಿತು ಇಲ್ಲೊಂದು ಮಾಹಿತಿ ಹೊರಬಿದ್ದಿದೆ.

ನಟ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಮಾಡಿರುವ ಸಾಧನೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಅವರೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈ ಮಧ್ಯೆ ‘ಕಾಂತಾರ’ ಸಿನಿಮಾ ರಿಲೀಸ್‌ಗೂ ಮುನ್ನ ರಿಷಬ್ ಶೆಟ್ಟಿ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ‘ಕಾಂತಾರ’ ತೆರೆಕಂಡ ಬಳಿಕ ಆ ಸಿನಿಮಾಗಳಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಅದರಲ್ಲಿ ಮೊದಲನೆಯದು, ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ! ಹೌದು, ರಕ್ಷಿತ್ ಶೆಟ್ಟಿ ಅವರ ಪರಮ್‌ವಾ ಸ್ಟುಡಿಯೋಸ್‌ ಬ್ಯಾನರ್ ಮೂಲಕ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಘೋಷಣೆ ಆಗಿತ್ತು. ರಿಷಬ್ ಶೆಟ್ಟಿ ಕೂಡ ಆ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತವಾಗಿತ್ತು. ಅದರಲ್ಲೀಗ ಬದಲಾವಣೆ ಆಗಿದ್ದು, ರಿಷಬ್ ಸಿನಿಮಾದಿಂದ ಹೊರನಡೆದಿದ್ದಾರೆ.’ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ದಿಗಂತ್, ರಿಷಬ್ ಶೆಟ್ಟಿ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ಇದ್ದರು. ಆದರೆ ಈಗ ರಿಷಬ್ ಶೆಟ್ಟಿ ಅವರು ಸಿನಿಮಾದಿಂದ ಹೊರನಡೆದಿದ್ದು, ಆ ಜಾಗಕ್ಕೆ ಲೂಸ್ ಮಾದ ಯೋಗಿ ನಟಿಸಲಿದ್ದಾರೆ. ಆದರೆ ಈ ಬಗ್ಗೆ ರಕ್ಷಿತ್ ಶೆಟ್ಟಿ ಅವರ ಪರಮ್‌ವಾ ಸ್ಟುಡಿಯೋಸ್‌ ಬ್ಯಾನರ್ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ರಮ್ಯಾ ಕೃಷ್ಣ, ಮೈಕ್ಟೈಸನ್ ಮುಂತಾದವರು ನಟಿಸಿದ್ದ 'ಲೈಗರ್' ಸಿನಿಮಾವು ಆಗಸ್ಟ್‌ನಲ್ಲಿ ತೆರೆಕಂಡು ದೊಡ್ಡ ಸೋಲನ್ನು ಕಂಡಿತ್ತು.

Wed Dec 28 , 2022
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿದ್ದ ‘ಲೈಗರ್’ ಸಿನಿಮಾವನ್ನು ನಿರ್ದೇಶಿಸಿದ್ದರು ಪೂರಿ ಜಗನ್ನಾಥ್. ಇದು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿತ್ತು ಕೂಡ. ಆದರೆ ‘ಲೈಗರ್‌’ ಹೀನಾಯ ಸೋಲು ಕಂಡಿತ್ತು. ನಿರ್ದೇಶನದ ಜೊತೆಗೆ ಸಿನಿಮಾಗೆ ಹಣವನ್ನೂ ಹಾಕಿದ್ದ ಪೂರಿ ಜಗನ್ನಾಥ್ ಆರ್ಥಿಕವಾಗಿಯೂ ದೊಡ್ಡ ನಷ್ಟ ಕಂಡರು. ಸದ್ಯ ಅವರ ಮುಂದಿನ ಸಿನಿಮಾ ಬಗ್ಗೆ ಒಂದು ಬಿಗ್ ಅಪ್‌ಡೇಟ್ ಸಿಕ್ಕಿದೆ. ಈ ಬಾರಿ ಅವರು ಬಾಲಿವುಡ್‌ನ ಸೂಪರ್ ಸ್ಟಾರ್ ನಟನ […]

Advertisement

Wordpress Social Share Plugin powered by Ultimatelysocial