FACE BOOK:ಫೇಸ್​ಬುಕ್​ನಲ್ಲಿ ಕಾಮೆಂಟ್ ಮಾಡುವ ಮುನ್ನ ಯೋಚಿಸಿ ಕಾಮೆಂಟ್ ಮಾಡಿ ;

ಪ್ರಸ್ತುತ ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ ಮತ್ತು ಫೇಸ್​ಬುಕ್ ಮತ್ತು ಇನ್​​ಸ್ಟಾಗ್ರಾಮ್ ಅತ್ಯಂತ ಜನಪ್ರಿಯ ವೇದಿಕೆಗಳಲ್ಲಿ ಒಂದಾಗಿದೆ.

ಅದರ ಮೂಲಕ ಫೋಟೋ, ವಿಡಿಯೋ, ರೀಲ್ಸ್​ ಹಂಚಿಕೊಳ್ಳುವುದರ ಜೊತೆಗೆ ಕಾಮೆಂಟ್ ಮಾಡುತ್ತಿರುತ್ತಾರೆ. ಒಂದು ವೇಳೆ ನೀವು ಫೇಸ್ ಬುಕ್ ಬಳಕೆದಾರರಾಗಿದ್ದರೆ ಕೊಂಚ ಎಚ್ಚರಿಕೆಯಲ್ಲಿರುವುದು ಉತ್ತಮ. ಫೇಸ್​ಬುಕ್​ನಲ್ಲಿ ಅನ್ಯತಾ ಮತ್ತು ಸೂಕ್ತವಲ್ಲದ ಕಾಮೆಂಟ್​​ಗಳನ್ನು ಮಾಡಿದರೆ ಶಿಕ್ಷೆಯಾಗಬಹುದು. ಮಾತ್ರವಲ್ಲದೆ ಬಳಕೆದಾರ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಬಹುದು.

ಜೈಲು ಸೇರುವ ಪರಿಸ್ಥಿತಿ: ಸಾಮಾಜಿಕ ಮಾಧ್ಯಮದ ಬಳಕೆ ಹೆಚ್ಚಾಗುತ್ತಿದೆ. ಸದ್ಯಕ್ಕಂತೂ ಅನೇಕ ಸಾಮಾಜಿಕ ಜಾಲತಾಣಗಳು ಬೀಡುಬಿಟ್ಟಿವೆ. ಅದರಲ್ಲಿಯೇ ಹೆಚ್ಚು ಕಾಲ ಕಳೆಯುವವರಿದ್ದಾರೆ. ಹೀಗಿರುವಾಗ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳು ಬಳಕೆದಾರರ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಲು ಪ್ರಯತ್ನಿಸುತ್ತಿವೆ.

ಏಕೆಂದರೆ ಫೇಸ್​ಬುಕ್​ನಲ್ಲಿ ಕೆಲವು ಬಳಕೆದಾರರು ತಮ್ಮ ಪೋಸ್ಟ್ಗಳ ಮೇಲೆ ತಪ್ಪು ರೀತಿಯ ಕಾಮೆಂಟ್ಗಳನ್ನು ಮಾಡುವ ಮೂಲಕ ಇತರರಿಗೆ ಕಿರುಕುಳ ಮತ್ತು ಮಾನಹಾನಿ ಮಾಡಲು ಪ್ರಯತ್ನಿಸುತ್ತಾರೆ. ಅಂತಹ ಬಳಕೆದಾರರ ಕಾಮೆಂಟ್​ಗಳ ಮೇಲೆ ಫೇಸ್​ಬುಕ್ ಕ್ರಮ ಕೈಗೊಳ್ಳಬಹುದು ಮತ್ತು ಅಗತ್ಯವಿದ್ದರೆ ಬಳಕೆದಾರರನ್ನು ಜೈಲಿಗೆ ಕಳುಹಿಸಬಹುದು.

ದಯವಿಟ್ಟು ಈ ರೀತಿಯ ಕಾಮೆಂಟ್ ಮಾಡುವುದನ್ನು ತಡೆಯಿರಿ: ಕಾಮೆಂಟ್ ಮಾಡುವ ಮುನ್ನ ಯೋಚಿಸಿ ಕಾಮೆಂಟ್ ಮಾಡುವುದು ಉತ್ತಮ. ಮಾನಹಾನಿ ಮಾಡುವ ಕಾಮೆಂಟ್ ಮಾಡುವ ಮುನ್ನ ಎಚ್ಚರಿಕೆಯಿಂದ ಇರುವುದು ಒಳಿತು. ಅದರಲ್ಲೂ ಯಾರೊಬ್ಬರ ಪೋಸ್ಟ್​ನ ಅಡಿಯಲ್ಲಿ ಜಾತಿ ಅಥವಾ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಮೆಂಟ್ಗಳನ್ನು ಮಾಡಿದರೆ, ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದಾದ ಅವಕಾಶವಿದೆ. ಕಾಮೆಂಟ್ಗಳ ವಿಭಾಗದಲ್ಲಿ ಬೇರೊಬ್ಬರನ್ನು ಅವಮಾನಿಸಿದರೂ, ನಿಂದಿಸಿದರೂ ಅಥವಾ ಅಶ್ಲೀಲ ಚಿತ್ರಗಳನ್ನು ಕಳುಹಿಸಿದರೂ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.

ಅನುಚಿತ ಕಾಮೆಂಟ್ಗಳ ಮೇಲೆ ದೂರು ನೀಡಿ: ನಿಮ್ಮ ಪೋಸ್ಟ್ ಅಥವಾ ಬೇರೆಯವರ ಪೋಸ್ಟ್ನಲ್ಲಿ ಮಾಡಿದ ಕಾಮೆಂಟ್ ಅಶ್ಲೀಲವಾಗಿದ್ದರೆ ಅಥವಾ ತಪ್ಪಾಗಿದ್ದರೆ, ಅವರ ವಿರುದ್ಧ ದೂರು ದಾಖಲಿಸುವ ಹಕ್ಕಿದೆ. ಈ ಕುರಿತಾಗಿ ದೂರು ದಾಖಲಾದ ಅನೇಕ ಘಟನೆಗಳಿವೆ. Facebook ನಲ್ಲಿ, ಪ್ರತಿಯೊಬ್ಬ ಬಳಕೆದಾರರು ಕಾಮೆಂಟ್ ಅನ್ನು ವರದಿ ಮಾಡುವ ಆಯ್ಕೆಯನ್ನು ಹೊಂದಿರುತ್ತಾನೆ. ಇದರಿಂದಾಗಿ ಬಳಕೆದಾರನು ತಪ್ಪಾದ ಕಾಮೆಂಟ್ ಅನ್ನು Facebook ಗೆ ವರದಿ ಮಾಡಬಹುದು.

ಇಂತಹ ಕಾಮೆಂಟ್ಗಳನ್ನು ಮಾಡುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಇದರಿಂದ ಫೇಸ್ಬುಕ್ ನಿಮ್ಮ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಮತ್ತು ನೀವು ಯಾವುದೇ ಅಡೆತಡೆಯಿಲ್ಲದೆ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಾರದ ಮೊದಲ ದಿನವೇ ಷೇರು ಪೇಟೆಯಲ್ಲಿ ಕುಸಿತ: 2000 ಅಂಕಗಳಿಂದ ಕುಸಿದ ಸೆನ್ಸೆಕ್ಸ್..​..!

Mon Jan 24 , 2022
ವಾರದ ಆರಂಭದ ದಿನವಾದ ಇಂದೇ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದು ಆರ್ಥಿಕ ತಜ್ಞರು ಇದನ್ನು ಬ್ಲ್ಯಾಕ್​ ಮಂಡೇ ಎಂದಿದ್ದಾರೆ. ಬಿಎಸ್​ಇ ಸೆನ್ಸೆಕ್ಸ್​​​ ಇಂದು 2000ಕ್ಕೂ ಅಧಿಕ ಅಂಕಕ್ಕೆ ಕುಸಿದಿದೆ. ಸೆನ್ಸೆಕ್ಸ್​ ಹಾಗೂ ನಿಫ್ಟಿಗಳೆರಡೂ ಶೇಕಡಾ 3-3 ಕುಸಿತದೊಂದಿಗೆ ವಹಿವಾಟನ್ನು ನಡೆಸುತ್ತಿವೆ. ಮಿಡ್​ ಕ್ಯಾಪ್​ ಸೂಚ್ಯಂಕವು ಕಳೆದ 9 ತಿಂಗಳ ಅವಧಿಯಲ್ಲಿಯೇ ಅತೀ ಹೆಚ್ಚು ಕುಸಿತ ಕಂಡಿದೆ. ನಿಫ್ಟಾ ಇಂಟ್ರಾ ಡೇನಲ್ಲಿ 17000ಕ್ಕಿಂತ ಕಡಿಮೆಗೆ ಕುಸಿದಿದೆ. ಹಾಗೂ ನಿಫ್ಟಿ ಕಳೆದ ವರ್ಷದ […]

Advertisement

Wordpress Social Share Plugin powered by Ultimatelysocial