ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು.

ಮುಖ ಟ್ಯಾನ್ ಆಗುವುದು, ಹೊಳಪು ಕಳೆದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ. ಸ್ವಲ್ಪ ಕೇರ್ ತೆಗೆದುಕೊಂಡರೆ ಬೇಸಿಗೆಯಲ್ಲಿಯೇ ಸಿಗುವ ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು.

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ಯಥೇಚ್ಚವಾಗಿ ದೊರಕುತ್ತದೆ.

ಇದನ್ನು ತಿನ್ನುವುದರ ಜತೆಗೆ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.

ಮಾವಿನ ಹಣ್ಣಿನ ತಿರುಳು ಅರ್ಧ ಕಪ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಬಾದಾಮಿ ಪುಡಿ ಹಾಗೂ ಓಟ್ಸ್ ಪೌಡರ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಫೇಸ್ ಪ್ಯಾಕ್ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ.

½ ಕಪ್ ಮಾವಿನ ಹಣ್ಣಿನ ತಿರುಳಿಗೆ 1 ಟೀ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ಲಿಂಬೆ ಹಣ್ಣಿನ ರಸ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಇದನ್ನು ಫೇಸ್ ಪ್ಯಾಕ್ ರೀತಿ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆದರೆ ಮುಖ ಕಾಂತಿಯಿಂದ ಮಿನುಗುತ್ತದೆ.

ಅರ್ಧ ಕಪ್ ಮಾವಿನ ಹಣ್ಣಿನ ತಿರುಳಿಗೆ, 3 ಟೀ ಸ್ಪೂನ್ ಮುಲ್ತಾನಿ ಮಿಟ್ಟಿ ಪುಡಿ, 2 ಟೀ ಸ್ಪೂನ್ ನೀರು, 1 ಟೀ ಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದು ಕೂಡ ನಿಮ್ಮ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯೋಗ ಮಾಡುವಾಗ ಮಾಡುವ ಈ ಸಣ್ಣ ತಪ್ಪುಗಳಿಂದ ಆರೋಗ್ಯಕ್ಕೆ ಹಾನಿ,

Mon Jun 6 , 2022
‘ಯೋಗ ಮಾಡುವವನಿಗೆ ರೋಗವಿಲ್ಲ’ ಎಂಬ ಗಾದೆ ಮಾತಿದೆ…. ಯಾರು ಪ್ರತಿದಿನ ಅರ್ಧಗಂಟೆ ಯೋಗ ಮಾಡುತ್ತಿದ್ದರೋ ಅವರಿಗೆ ಯೋಗದ ಪ್ರಯೋಜನದ ಬಗ್ಗೆ ಖಂಡಿತ ಗೊತ್ತಿರುತ್ತದೆ. ಏಕೆಂದರೆ ಯೋಗ ಎಂಬುವುದು ಅದು ಜಸ್ಟ್‌ ಒಂದು ವ್ಯಾಯಾಮವಲ್ಲ, ಸರ್ವ ರೋಗಗಳಿಗೆ ರಾಮಬಾಣ. ಹೌದು ಯೋಗದಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಎಷ್ಟೋ ಆರೊಗ್ಯ ಸಮಸ್ಯೆಗಳನ್ನು ಇದರಿಂದ ಗುಣಪಡಿಸಬಹುದಾಗಿದೆ. ಇದನ್ನು ಮಾಡುವುದರಿಂದ ಮಾನಸಿಕ ಆರೋಗ್ಯ ಹೆಚ್ಚುವುದು, ಮನಸ್ಸಿನಲ್ಲಿರುವ ಎಷ್ಟೋ ಗೊಂದಲುಗಳು ನಿವಾರಣೆಯಾಗುತ್ತೆ, ನಮ್ಮ ಗುರಿಯ ಕಡೆ ಫೋಕಸ್ […]

Advertisement

Wordpress Social Share Plugin powered by Ultimatelysocial