ನಾನು ನಿಮ್ಮ ಕುಟುಂಬದ ಸದಸ್ಯ.

ದಾವೂದಿ ಬೊಹ್ರಾ ಸಮುದಾಯ ಶಿಕ್ಷಣ, ವ್ಯಾಪಾರ ಮತ್ತು ಉದ್ಯಮಶೀಲತೆ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಾವೂದಿ ಬೋಹ್ರಾಗಳು ಕುಟುಂಬದ ಸದಸ್ಯರಂತೆ ತಮ್ಮನ್ನು ನೋಡುತ್ತಾರೆ .ಯಾವಾಗಲೂ ಬೋಹ್ರಾಗಳ ಪ್ರೀತಿ ಮತ್ತು ವಾತ್ಸಲ್ಯ ಆನಂದಿಸಿದ್ದೇನೆ.”ನಾನು ನಿಮ್ಮ ನಡುವೆ ಇರುವಾಗ ಮುಖ್ಯಮಂತ್ರಿಯೂ ಅಲ್ಲ, ಪ್ರಧಾನಿಯೂ ಅಲ್ಲ. ನಾನು ನಿಮ್ಮ ಕುಟುಂಬದ ಸದಸ್ಯ ಎಂದು ಅವರು ತಿಳಿಸಿದ್ದಾರೆ.ಮುಂಬೈನಲ್ಲಿ ಮರೋಲ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು ನನಗೆ ನಾಲ್ಕು ತಲೆಮಾರಿನ ಸೈಯದ್ನಾ ಪರಿಚಯವಿದೆ. ದಿವಂಗತ ಸೈಯದ್ನಾ ಮೊಹಮ್ಮದ್ ಬುರ್ಹಾನುದ್ದೀನ್ ಕೂಡ ನನ್ನನ್ನು ಆಶೀರ್ವದಿಸಿದ್ದಾರೆ” ಎಂದು ಹೇಳಿದ್ದಾರೆ. ಅಭಿವೃದ್ಧಿ ಮತ್ತು ಪರಂಪರೆಯಲ್ಲಿ ನಂಬಿಕೆಯಿರುವ ದಾವೂದಿ ಬೋಹ್ರಾಗಳು ಕಾಲಕ್ಕೆ ತಕ್ಕಂತೆ ಸಾಗಿದ್ದಾರೆ ಮತ್ತು ಹೆಣ್ಣುಮಕ್ಕಳು ಸೇರಿದಂತೆ ಶಿಕ್ಷಣವನ್ನು ಯಾವಾಗಲೂ ಗೌರವಿಸುತ್ತಾರೆ ಎಂದು ಹೇಳಿದ್ದಾರೆ.
ದಾವೂದಿ ಬೋಹ್ರಾ ಸಮುದಾಯದ ಪ್ರಮುಖ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ. ಸಂಸ್ಥೆಯು ಸೂರತ್, ಕರಾಚಿ ಮತ್ತು ನೈರೋಬಿಯಲ್ಲಿ ಕ್ಯಾಂಪಸ್‌ಗಳನ್ನು ಹೊಂದಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ ವಿಸ್ತರಿಸಲಿ ಎಂದರು.
ಬಂಗಲೆ, ಸೈಫೀ ವಿಲ್ಲಾ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಕೋರಿಕೆಯ ಮೇರೆಗೆ ದಿವಂಗತ ಸೈಯದ್ನಾ ತಾಹೆರ್ ಸೈಫುದ್ದೀನ್ ಅವರು ನಂತರ ಬಂಗಲೆಯನ್ನು ದೇಶಕ್ಕೆ ಉಡುಗೊರೆಯಾಗಿ ನೀಡಿದ್ದರು. ಇದು ಈಗ ಸ್ಮಾರಕವಾಗಿದೆ ಎನ್ನುವ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ನೆನಪು ಮಾಡಿಕೊಂಡಿದ್ದಾರೆ. ಉದ್ಯೋಗವನ್ನು ಸೃಷ್ಟಿಸಬಹುದಾದ ಪರಿಸರ ವ್ಯವಸ್ಥೆಯನ್ನು ರಚಿಸಲು ಸಂಯೋಜಿಸಲಾಗಿದೆ. ಉದ್ಯಮಿಗಳಿಗೆ ಸಹಾಯ ಮಾಡಲು ಸರ್ಕಾರ ಮುಂದಾಗಿದೆ ಎಂದಿದ್ದಾರೆ.ಸೈಯದ್ ಮುಫದ್ದಲ್ ಸೈಫುದ್ದೀನ್ ಮಾತನಾಡಿ ಭಾರತ ಶತಮಾನಗಳಿಂದ ನಮ್ಮ ಮನೆಯಾಗಿದೆ, ಮತ್ತು ನಾವು ಇಲ್ಲಿ ಶಾಂತಿಯಿಂದ ಇದ್ದೇವೆ” ಎಂದು ಪ್ರತಿ ಮಗುವಿಗೆ ಶಿಕ್ಷಣ ಮತ್ತು ಬೆಳೆಯಲು ಅವಕಾಶ ಸಿಗಲಿ ಎಂದು ಅವರು ಪ್ರಾರ್ಥಿಸಿದರು. ಜಮಿಯಾ ಸಂಸ್ಥೆ ಯ ಪೋಷಕ ಮತ್ತು ದಾವೂದಿ ಬೋಹ್ರಾಸ್‌ನ ಆಧ್ಯಾತ್ಮಿಕ ಮುಖ್ಯಸ್ಥ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೆಲವು ರಾಜತಾಂತ್ರಿಕರು ಮತ್ತು ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಗಸ್ಟ್‌ಗೆ ೭೫ ಹೊಸ ವಂದೇ ಭಾರತ್ ರೈಲು.

Sat Feb 11 , 2023
ದೇಶಾದ್ಯಂತ ಈ ವರ್ಷದ ಆಗಸ್ಟ್ ವೇಳೆಗೆ ೭೫ ಹೊಸ ವಂದೇ ಭಾರತ್ ರೈಲು ಸೇವೆ ಪ್ರಾರಂಭಿಸಲು ಭಾರತೀಯ ರೈಲ್ವೆ ಯೋಜಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಜೊತೆಗೆ, ಭಾರತೀಯ ರೈಲ್ವೇ ವಂದೇ ಮೆಟ್ರೋ ರೈಲು ಸೇವೆಯನ್ನೂ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.ಈ ವರ್ಷ ವಂದೇ ಭಾರತ್ ಮೆಟ್ರೋ ರೈಲಿನ ವಿನ್ಯಾಸ ಮತ್ತು ಉತ್ಪಾದನೆ ಪೂರ್ಣಗೊಳಿಸಲಾಗುವುದು ಮತ್ತು ಮುಂದಿನ ಹಣಕಾಸು ವರ್ಷದಲ್ಲಿ, ರೈಲಿನ ಉತ್ಪಾದನೆ ವೇಗ […]

Advertisement

Wordpress Social Share Plugin powered by Ultimatelysocial