ಫ್ರೀಯಾಗಿ ನೋಡಿ ಧನುಷ್ ಅಭಿನಯದ ‘ವಾತಿ’ ಸಿನಿಮಾ!

ಧನುಷ್ ಇತ್ತೀಚೆಗೆ ವೆಂಕಿ ಅಟ್ಲೂರಿ ನಿರ್ದೇಶನದ ದ್ವಿಭಾಷಾ ಸಿನಿಮಾ ಮಾಡಿದ್ದಾರೆ.

ತಮಿಳಿನಲ್ಲಿ ‘ವಾತಿ’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೊಂಡಿದ್ದು, ತೆಲುಗಿನಲ್ಲಿ ‘ಸಾರ್’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿದೆ. ಟ್ರೇಲರ್ ಮತ್ತು ಟೀಸರ್ನಿಂದ ಕ್ರೇಜ್ ಕ್ರಿಯೇಟ್ ಮಾಡಿದ್ದ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇದೀಗ ಸಿನಿಮಾ ಪ್ರಮೋಷನ್ ಹಿನ್ನೆಲೆ ತೆಲುಗು ರಾಜ್ಯಗಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸಲು ಚಿತ್ರತಂಡ ಮುಂದಾಗಿದೆ. ಈ ಉಚಿತ ಶೋಗಳು ಕೆಲವು ಆಯ್ದ ಪ್ರದೇಶಗಳಲ್ಲಿ ಇರಲಿದೆ.

ಇನ್ನು ಈ ಸಿನಿಮಾದ ಥಿಯೇಟ್ರಿಕಲ್ ಬ್ಯುಸಿನೆಸ್ ವಿಚಾರಕ್ಕೆ ಬಂದರೆ ತೆಲುಗಿನ ಈ ಸಿನಿಮಾ ಮೊದಲ ದಿನವೇ ಎಪಿ ತೆಲಂಗಾಣದಲ್ಲಿ ಒಟ್ಟು 5.5 ಕೋಟಿ ಬ್ಯುಸಿನೆಸ್ ಮಾಡಿದೆ. ಹೀಗಾಗಿ ಈ ಸಿನಿಮಾ ಹಿಟ್ ಆಗಬೇಕಾದರೆ 6 ಕೋಟಿ ಶೇರ್ ಬೇಕು. ತಮಿಳಿನಲ್ಲಿ 35 ಕೋಟಿ ವರೆಗೂ ವ್ಯಾಪಾರ ಮಾಡಿದೆ ಎನ್ನಲಾಗ್ತಿದೆ. ಧನುಷ್ ಸಿನಿಮಾ ಎರಡು ತೆಲುಗು ರಾಜ್ಯಗಳಲ್ಲಿ 415 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ನಮ್ಮ ದೇಶದಲ್ಲಿ ಶಿಕ್ಷಣ ಎನ್ನುವುದು ಲಾಭದಾಯಕವಲ್ಲದ ಸೇವೆ ಎಂಬ ಕಥೆಯನ್ನು ಆಧರಿಸಿದೆ. ಗುಣಮಟ್ಟದ ಶಿಕ್ಷಣ ಬೇಕಾದರೆ ಹಣ ಖರ್ಚು ಮಾಡಬೇಕು. ಹಣ ಇರುವವನು ಡಿಗ್ರಿ ಖರೀದಿಸುತ್ತಾರೆ. ಹಣ ಕಡಿಮೆ ಇರುವವನು ಸಾಲ ಮಾಡಿದರೂ ಸಿಗಲ್ಲ. ದೇಶದಾದ್ಯಂತ ಶಿಕ್ಷಣವನ್ನು ವ್ಯಾಪಾರವಾಗಿ ಪರಿವರ್ತಿಸಿದವರ ವಿರುದ್ಧ ಸಾಮಾನ್ಯ ಸ್ಕೂಟ್ ಟೀಚರ್ ಮತ್ತು ಕೆಲವು ಕಾರ್ಪೊರೇಟ್​ಗಳ ನಡುವೆ ನಡೆಯುವ ಹೋರಾಟವಾಗಿದೆ.

ಇದೀಗ ಪ್ರಸ್ತುತ ಶಿಕ್ಷಣ ಶ್ರೀಮಂತರ ಆಸ್ತಿಯಾಗಿದೆ. ಸಾಮಾನ್ಯ ವ್ಯಕ್ತಿ ಇದನ್ನೆಲ್ಲಾ ಹೇಗೆಲ್ಲಾ ಎದುರಿಸುತ್ತಾನೆ ಎನ್ನುವ ಕಥೆಯನ್ನು ವಾತಿ ಸಿನಿಮಾವೊಳಗೊಂಡಿದೆ. ಈ ಸಿನಿಮಾದಲ್ಲಿ ಈಗಿನ ಟ್ರೆಂಡ್ ಝೀರೋ ಫೀ.. ಜೀರೋ ಎಜುಕೇಶನ್.. ಮೋರ್ ಫೀ.. ಹೆಚ್ಚು ಎಜುಕೇಶನ್ ಬಗ್ಗೆ ತೋರಿಸಲಾಗಿದೆ.

ದೇಶದ ಶಿಕ್ಷಣ ವ್ಯವಸ್ಥೆ ಮೇಲೆ ಈ ಸಿನಿಮಾ ಮಾಡಲಾಗಿದೆ. ನಮ್ಮಲ್ಲಿರುವ ಉತ್ತಮ ಉಪನ್ಯಾಸಕರನ್ನು ಸರ್ಕಾರಿ ಕಾಲೇಜಿಗೆ ಕಳುಹಿಸಿ ಎಂದು ‘ವಾತಿ’ ಸಿನಿಮಾದಲ್ಲಿ ತೋರಿಸಲಾಗಿತ್ತು. 1990ರ ದಶಕದಲ್ಲಿ ದೇಶದಲ್ಲಿ ಉದಾರೀಕರಣಗೊಂಡ ಆರ್ಥಿಕ ನೀತಿಗಳಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಏಕಸ್ವಾಮ್ಯ ಹೆಚ್ಚಾಯಿತು.

ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ಹೇಗೆ ಆಳುತ್ತಿವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.. ಈ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳ ವಿರುದ್ಧ ತಿರುಗಿ ಬಿದ್ದ ಒಬ್ಬ ಸಾಮಾನ್ಯ ಶಿಕ್ಷಕನ ಅನುಭವಗಳೇ ಈ ಸಿನಿಮಾದ ಕಥೆ. ಅದರಲ್ಲೂ ವಿದ್ಯೆ ಎಂಬುದು ದೇವರ ಗುಡಿಯಲ್ಲಿ ನೈವೇದ್ಯವಿದ್ದಂತೆ, ಆದ್ರೆ ಅದನ್ನು ಈಗ ಪಂಚತಾರಾ ಹೋಟೆಲಿನಲ್ಲಿರುವ ತಿನಿಸಿನಂತೆ ಮಾರುತ್ತಿದ್ದೇನೆ ಎಂದು ಧನುಷ್ ಹೇಳುವ ಡೈಲಾಗ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.

ತೆಲುಗಿನಲ್ಲಿ ಧನುಷ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ತಿಲಕ್ ಎಂಬ ಉಪನ್ಯಾಸಕನ ಪಾತ್ರವನ್ನು ಧನುಷ್ ಬಾಲಗಂಗಾಧರ್ ಮಾಡಿದ್ದಾರೆ. ಒಟ್ಟಿನಲ್ಲಿ ಸಮಾಜದಲ್ಲಿ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ದರೋಡೆ ಬಗ್ಗೆ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಲಕರ ವಿರೋಧ ಲೆಕ್ಕಿಸದೇ ಪಾರ್ಶ್ವವಾಯು ಪೀಡಿತ ಪ್ರಿಯಕರನ್ನು ಮದ್ವೆಯಾಗಿದ್ದ ಸಹನಾಗೆ ಭಾರೀ ಆಘಾತ

Sat Feb 18 , 2023
ತ್ರಿಸ್ಸೂರ್​: ಅಪಘಾತದ ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿದ್ದ ಕೇರಳ ಮೂಲದ ಪ್ರಣವ್ ನಿನ್ನೆ (ಫೆ.17) ಕೊನೆಯುಸಿರೆಳೆದಿದ್ದಾರೆ. ಪ್ರಣವ್​ಗೆ 31 ವರ್ಷ ವಯಸ್ಸಾಗಿತ್ತು. ತನ್ನ ಪ್ರೇಮ ವಿವಾಹದಿಂದಲೇ ಕೇರಳದಲ್ಲಿ ಮಾತ್ರವಲ್ಲದೆ, ಎಲ್ಲಡೆ ಸುದ್ದಿ ಮಾಡಿದ್ದರು. ಪ್ರಣವ್​, ತ್ರಿಸ್ಸೂರ್​ನ ಕನ್ನಿಕ್ಕರ ಮೂಲದ ನಿವಾಸಿ. ಶುಕ್ರವಾರ ಬೆಳಗ್ಗೆ ರಕ್ತ ವಾಂತಿ ಮಾಡಿಕೊಂಡ ಪ್ರಣವ್​​ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಣವ್​ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದರು. ತಿರುವನಂತಪುರದ ಸಹನಾ ಎಂಬಾಕೆಯನ್ನು 2020ರ […]

Advertisement

Wordpress Social Share Plugin powered by Ultimatelysocial