ಕುರುಡು ಪ್ರೀತಿಯಲ್ಲಿ ಬಿದ್ರು ಗೋಲ್ಡನ್‌ ಗಣೇಶ್ -ಒಂಚೂರು ಪ್ರೀತಿ ಬೇರೆ ರೀತಿ..!

ಪ್ರೇಮಕ್ಕೆ ಕಣ್ಣಿಲ್ಲ ಅಂತಾರೆ ನಿಜಾನ ? ಏನೋಪಾ ಹೀಗಂತ ಗೋಲ್ಡನ್ ಸ್ಟಾರ್ ಗಣೇಶ್ ಹೇಳ್ತಿದ್ದಾರೆ.ನಿಮ್ಮ ನೆನಪು, ಈ ಬಿಕನಾಸಿ ಮಳೆ,ನಿಮ್ಮ ಕೂದಲು ,ನಿಮ್ಮ ಬ್ಯೂಟಿ, ಆ RASCAL ದೇವದಾಸ ಅಂತಿದ್ದ ಗಣಿ ಈಗ ಪ್ರೇಮಕ್ಕೆ ಕಣ್ಣಿಲ್ಲ  ಅಂದೊರ್ಯಾರು ಅಂತ ಹೊಸದಾಗಿ ಹೇಳ್ತವ್ರಪ್ಪೋ . ಲವ್‌ concept ಗೆ ಕಿಂಗ್‌ ಕಾನ್‌ ಆಗಿರೋ ಗಣಿ ಒಂಥರಾ ಕನ್ನಡದ ಶಾರುಕ್‌ ಅಂತಾನೇ ಹೇಳಬೋದು .ಪ್ರೀತಿ ಅಂದ್ರೆ ತ್ಯಾಗ ಅಂತ ಚಿತ್ರಗಳಲ್ಲಿ ಹೀರೋಯಿನ್ ನ ತ್ಯಾಗ  ಮಾಡಿದವ್ರು ನಮ್ಮ ಗೋಲ್ಡ್‌ ಗಣಿ. ಮುಖದ  ಬೆವರಿಳಿಸುವ ಅವರ ಬ್ರೇಕ್‌ ಅಪ್‌ ಸೀನ್ಸ್‌ ಹೋಗಿರೋ x ನಾ ಮರಳಿ ನೆನಪಿಸೋ ಡೈಲಾಗ್ಸ್‌ ವಾ… ಇದೀಗ ಮತ್ತೆ ನೂತನ ರೊಮ್ಯಾಂಟಿಕ್ concept ನಲ್ಲಿ ರೋಮ್ಯಾನ್ಸ್‌ ಜಲಕ್‌ ತೋರಿಸಲು ಸಕತ್‌ ಚಿತ್ರತಂಡ ಸಕತ್‌ ಆಗಿ ತಯಾರಾಗಿದೆ.

ನಿರ್ದೇಶಕ ಸಿಂಪಲ್ ಸುನಿ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ ನಲ್ಲಿ ಬರ್ತಿರುವ ಎರಡನೇ ಸಿನಿಮಾ ಸಖತ್. ಟೈಟಲ್ ನಂತೆ ಸಖತ್ ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ಸಖತ್. ಸದ್ಯ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲ ‘ಪ್ರೇಮಕ್ಕೆ ಕಣ್ಣಿಲ್ಲಾ’ ಎಂಬ ಹಾಡನ್ನು ಬಿಡುಗಡೆ ಮಾಡಿದೆ.

ಈ ಹಾಡಿನಲ್ಲಿ ನಟಿ nishvika ಗೆ  ಕಣ್ಣು ಕಾಣಿಸೋಲ್ಲ ಅದೇ ರೀ ಕುರುಡು ಪ್ರೀತಿ. ಪ್ರೀತಿಯಲ್ಲಿ ಬಿದ್ದವರಿಗೆ ಪ್ರೀತಿ ಕುರುಡು ಅಂತಾರೇ ಇನ್ನೂ ಈ ಚಿತ್ರದಲ್ಲಿ ಪ್ರೀತಿಸೋರೇ ಕುರುಡು ಏನ್‌ ಟ್ವೀಸ್ಟ್‌ ಅಲ್ವ . ಪ್ರೀತಿಯಲ್ಲಿ ಬೀಳುವಂತ ಸದ್ದು ,ಒಂಚೂರು ಸ್ಪರ್ಶ, ಒಂಚೂರು ಗಂಧ, ಹಾಡು ಕೇಳೋರು ಒಂಚೂರು ಲೈಕ್ಸ್‌ ಇದನ್ನ ಹೇಳ್ತಿರೌರ್ಗೆ ಒಂಚೂರು ಕಾಮೆಂಟ್ಸ್‌.

ಎಸ್‌ ,ಟ್ರ್ಯಾಕ್‌ ತಪ್ಪೋದು ಬೇಡ . ವಾಪಸ್‌ ವಿಷಯಕ್ಕೆ ಬರೋಣ . ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಚಿತ್ರ ಸಖತ್. ಟಿವಿ ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಸುತ್ತಾಡುತ್ತೆ. ಇಲ್ಲಿವರೆಗೆ ಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಿದ್ದ ಗೋಲ್ಡನ್ ಸ್ಟಾರ್  ಈ ಚಿತ್ರದಲ್ಲಿ ಚಾಲೆಂಜಿಂಗ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಅಂಧ ಗಾಯಕನ ಪಾತ್ರಕ್ಕೆ ಜೀವ ತುಂಬಿರುವ ಗೋಲ್ಡನ್ ಸ್ಟಾರ್ ರಿಯಾಲಿಟಿ ಶೋ ಸ್ವರ್ಧಿಯಾಗಿ ಕಾಣಸಿಗಲಿದ್ದಾರೆ.  ನಿಶ್ವಿಕಾ ನಾಯ್ಡು  ಹಾಗೂ ಹೊಸ ಪ್ರತಿಭೆ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಚಿತ್ರಕ್ಕೆ ನಿಶಾ ವೆಂಕಟ್ ಕೋನನ್ಕಿ, ಭರಾಟೆ ಖ್ಯಾತಿಯ ಸುಪ್ರಿತ್ ಬಂಡವಾಳ ಹೂಡಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ನವೆಂಬರ್ ಅಂತ್ಯದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದೆ.ಕುರುಡು ಪ್ರೀತಿ ನೋಡಲು ನೀವು ತಯಾರಾಗಿರಿ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಶತಕ ಬಾರಿಸಿದ ಪೆಟ್ರೋಲ್‌-ಡೀಸೆಲ್‌ ದರ..!?

Sun Oct 10 , 2021
ಪೆಟ್ರೋಲ್‌ ಬೆನ್ನಲ್ಲೇ ಇದೀಗ ಡೀಸೆಲ್‌ ದರ ಕೂಡ ರಾಜ್ಯದಲ್ಲಿ ಶತಕದ ಬಾರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಮುಂದುವರಿದರೆ ವಾರದೊಳಗೆ ಡೀಸೆಲ್‌ದರ 100ರ ಗಡಿ ದಾಟಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶುಕ್ರವಾರ ಒಂದು ಲೀಟರ್‌ ಡೀಸೆಲ್‌ ದರ 99.65 ರು. ತಲುಪಿದ್ದು, ಇದೇ ರಾಜ್ಯದ ಅತಿಹೆಚ್ಚಿನ ದರವಾಗಿದೆ. ಉತ್ತರ ಕನ್ನಡ ಸೇರಿ ರಾಜ್ಯದ 10 ಕಡೆ ಡೀಸೆಲ್‌ ದರ 99 ರೂ. ದಾಟಿದೆ, ಶತಕದತ್ತ ದಾಪುಗಾಲಿಡುತ್ತಿದೆ. ಬಳ್ಳಾರಿ​- […]

Advertisement

Wordpress Social Share Plugin powered by Ultimatelysocial