ದರ್ಶನ್ 56ನೇ ಸಿನಿಮಾದ ಟೈಟಲ್‌ ರಿವೀಲ್ ಆಗೋವರೆಗೂ ಫ್ಯಾನ್ಸ್ ನಿದ್ದೆನೂ ಮಾಡಿರಲಿಲ್ಲ.

ರ್ಶನ್ 56ನೇ ಸಿನಿಮಾದ ಟೈಟಲ್‌ ರಿವೀಲ್ ಆಗೋವರೆಗೂ ಫ್ಯಾನ್ಸ್ ನಿದ್ದೆನೂ ಮಾಡಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಟೈಟಲ್ ‘ಕಾಟೇರ’ ಅಂತ ರಿವೀಲ್ ಮಾಡಿದ್ದರು. ಅಲ್ಲಿಂದ ಸಿನಿಮಾದ ಟೈಟಲ್‌ ಬಗ್ಗೆ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ.

‘ಕಾಟೇರ’ 1974ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಈ ಕಾರಣಕ್ಕೆ ಪ್ರೇಕ್ಷಕರನ್ನು ಸಿನಿಮಾದ ಕಥೆಯಷ್ಟೇ ಅಲ್ಲ, ಟೈಟಲ್ ಕೂಡ ಸೆಳೆಯುತ್ತಿದೆ. ಹಾಗಿದ್ದರೆ, ‘ಕಾಟೇರ’ ಅಂದ್ರೆ ಏನು? ಅನ್ನೋ ಇದೇ ಟೈಟಲ್‌ ಅನ್ನು ಇಟ್ಟಿದ್ದು ಯಾಕೆ? ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡದೆ ಇರೋದಿಲ್ಲ. ಅದಕ್ಕೆ ಇದೇ ಸಿನಿಮಾ ಡೈಲಾಗ್ ರೈಟರ್ ಮಾಸ್ತಿ ಉತ್ತರ ಕೊಟ್ಟಿದ್ದಾರೆ.

ದರ್ಶನ್ ಬಹಳ ದಿನಗಳ ಬಳಿಕ ಮತ್ತೆ ಲಾಂಗ್ ಹಿಡಿದಿದ್ದಾರೆ. ಅಲ್ಲದೆ, ಪಂಚೆಯುಟ್ಟು ಹಳ್ಳಿಗನ ಲುಕ್‌ನಲ್ಲಿ ಕಂಡಿರೋದು ಇಷ್ಟೆಲ್ಲ ಕುತೂಹಲಕ್ಕೆ ಕಾರಣ. ಈ ಮಧ್ಯೆ ಟೈಟಲ್ ಬೇರೆ ಕುತೂಹಲ ಕೆರಳಿಸಿದೆ. ಟೈಟಲ್ ರಿವೀಲ್ ಆಗುವುದಕ್ಕೂ ಮುನ್ನ ಚಿತ್ರತಂಡದ ಮುಂದೆ ‘ಕಾಟೇರ’ ಹಾಗೂ ‘ಚೌಡಯ್ಯ’ ಎರಡು ಆಯ್ಕೆ ಇತ್ತು. ಅದರಲ್ಲಿ ‘ಕಾಟೇರ’ ಆಯ್ಕೆ ಮಾಡಲಾಗಿದೆ. ಈ ಶೀರ್ಷಿಕೆಯನ್ನು ಇಟ್ಟಿದ್ದೇಕೆ? ಇದರ ಅರ್ಥವೇನು? ಅನ್ನೋದನ್ನು ಮಾಸ್ತಿ ರಿವೀಲ್ ಮಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

ಕಾಟೇರಮ್ಮನಿಗೂ ‘ಕಾಟೇರ’ಗೂ ಏನು ಸಂಬಂಧ?

‘ಕಾಟೇರ’ ಟೈಟಲ್‌ ಮಾಸ್ ಫೀಲ್ ಕೊಡುತ್ತಿದೆ. ಈಗಾಗಲೇ ರಿಲೀಸ್ ಮಾಡಿರೋ ಫಸ್ಟ್ ಲುಕ್‌ಗೂ ಟೈಟಲ್‌ಗೂ ನೀಟ್ ಆಗಿ ಮ್ಯಾಚ್ ಆಗುತ್ತಿದೆ. ಈಗ ಎದ್ದಿರೋ ಪ್ರಶ್ನೆ ‘ಕಾಟೇರ’ ಅಂದರೆ ಏನು? ಇದರ ಅರ್ಥವೇನು? ಅನ್ನೋದನ್ನು ಯೂಟ್ಯೂಬ್ ಚಾನೆಲ್‌ ಒಂದರಲ್ಲಿ ಮಾಸ್ತಿ ರಿವೀಲ್ ಮಾಡಿದ್ದಾರೆ. “ಕಾಟೇರ ಅಂದ್ರೆ ನಿರ್ದಿಷ್ಠವಾದ ಒಂದು ಅರ್ಥವಿಲ್ಲ. ಅದೊಂದು ಹೆಸರು ಅಷ್ಟೇ. ತುಂಬಾ ಊರುಗಳಲ್ಲಿ ಕಾಟೇರಮ್ಮ ಅನ್ನೋ ಒಂದು ದೇವರು ಇದೆ. ಕಾಟೇರಮ್ಮ ಅಂದರೆ ತಾಯಿ ಕಾಳಿ, ದುಷ್ಟರ ರಕ್ತ ಕುಡಿಯುವಂತಹ ಒಂದು ದೇವತೆ. ಆ ಅರ್ಥದಲ್ಲಿ ಬರುತ್ತೆ.” ಎಂದು ಡೈಲಾಗ್ ರೈಟರ್ ಮಾಸ್ತಿ ಹೇಳಿದ್ದಾರೆ.

‘ಕಾಟೇರ’ ಟೈಟಲ್ ಇಟ್ಟಿದ್ದು ಯಾಕೆ?

” ತುಂಬಾ ಕಡೆ ಹೆಣ್ಣು ಮಕ್ಕಳ ಹೆಸರುಗಳನ್ನೂ ಇಡುತ್ತಾರೆ. ಕೆಲವರು ಹರಕೆ ಕಟ್ಟಿಕೊಂಡಿರುತ್ತಾರೆ. ನನಗೆ ಮಗುವಾದರೆ, ನಿನ್ನ ಹೆಸರು ಇಡುತ್ತೇನಪ್ಪಾ ಅಂತ. ಆ ಕಾಲದಲ್ಲಿ ಆ ತರ ಇತ್ತು. ಈಗ ಇಲ್ಲ. ಆಗೆಲ್ಲ ತಾತನ ಹೆಸರನ್ನು ಮಗನಿಗೆ ಇಡುವುದು, ಮಕ್ಕಳಾಗಿಲ್ಲ ಅಂತ ಹರಕೆ ಹೊತ್ತುಕೊಂಡಿದ್ದವರು ಯಾವ ದೇವತೆ ಮೊರೆ ಹೋಗಿತ್ತಾರೋ ಆ ದೇವತೆಯ ಹೆಸರು ಇಡುತ್ತಾರೆ. ಮತ್ತೆ ತುಂಬಾ ಹಿಂದೆ ನಡೆಯೋ ಕಥೆಯಾಗಿರುವುದರಿಂದ ಆ ಹೆಸರನ್ನು ಇಟ್ಟಿದ್ದೇವೆ.” ಎನ್ನುತ್ತಾರೆ ಮಾಸ್ತಿ.

‘ಪೋಸ್ಟರ್‌ನಲ್ಲೇ 30 ಸೀನ್ ಇದೆ’

ಒಂದು ಟೈಟಲ್ ಹಾಗೂ ಫಸ್ಟ್‌ ಲುಕ್ ರೆಡಿ ಮಾಡುವಾಗ ಸಾಕಷ್ಟು ಕ್ರಿಯೇಟಿವ್ ಕೆಲಸಗಳು ನಡೆದಿರುತ್ತೆ. ನಿರ್ದೇಶಕ ತರುಣ್ ಸುಧೀರ್ ತಮ್ಮ ತಂಡದೊಂದು ಚರ್ಚೆ ಮಾಡಿ ಫಸ್ಟ್ ಲುಕ್‌ ಸಿದ್ಧಪಡಿಸಿದ್ದಾರೆ. “ಒಂದು ಪೋಸ್ಟರ್ ಕೊಟ್ರೂ, ಏನೇ ಕೊಟ್ಟರೂ ತರುಣ್ ಒಂದಿಷ್ಟು ವಿಷಯಗಳನ್ನು ಇಟ್ಟುಕೊಂಡಿರುತ್ತಾರೆ. ಈ ಪೋಸ್ಟರ್‌ನಲ್ಲಿರುವ ಪ್ರತಿಯೊಂದು ಅಂಶಗಳೂ ಈ ಸಿನಿಮಾದ ಕಥೆಯನ್ನು ಹೇಳುತ್ತೆ. ನಾವೇನು 70 ಸೀನ್ ಮಾಡಿರುತ್ತೇವೆ. ಅದರಲ್ಲಿ ಕಮ್ಮಿ ಅಂದ್ರೂ 30 ಸೀನ್ ಆ ಪೋಸ್ಟರ್‌ನಲ್ಲಿ ಇರುತ್ತೆ. ಅಷ್ಟು ತಲೆ ಉಪಯೋಗಿಸಿ, ತಮ್ಮ ತಂಡದೊಂದಿಗೆ ಡಿಸ್ಕಸ್ ಮಾಡಿ ಮಾಡುತ್ತಾರೆ.” ಎಂದು ಮಾಸ್ತಿ ರಿವೀಲ್ ಮಾಡಿದ್ದಾರೆ.

ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಏನೇನಿದೆ?

‘ಕಾಟೇರ’ ಫಸ್ಟ್ ಲುಕ್‌ನಲ್ಲಿ ತರುಣ್ ಸುಧೀರ್ ಹಲವು ಎಲಿಮೆಂಟ್‌ಗಳನ್ನು ರಿವೀಲ್ ಮಾಡಿದ್ದಾರೆ. ಪಾರ್ಲಿಮೆಂಟ್, ದಂಗೆ ಎದ್ದ ರೈತರ ಸಮೂಹ, 1974ನೇ ಇಸವಿ ಹೀಗೆ ಹಲವು ಅಂಶಗಳನ್ನು ಗಮನಿಸಬಹುದು. “ಫಸ್ಟ್ ಪೋಸ್ಟರ್ ಬಿಟ್ಟಾಗ ಒಂದಷ್ಟು ಕುರಿಗಳ ಮುಂದೆ ಒಂದು ನಾಯಿ ಇರುತ್ತೆ. ಅದೂ ಒಂದು ಕಥೆಯನ್ನು ಹೇಳುತ್ತೆ. ಇವತ್ತು ಬಿಟ್ಟಿರುವ ಟೈಟಲ್‌ನಲ್ಲೂ ಒಂದು ಕಥೆ ಹೇಳುತ್ತೆ.ಅದ್ಯಾವುದನ್ನೂ ರಿವೀಲ್ ಮಾಡದ ಹಾಗೆ, ಜನಕ್ಕೆ ಅದೇ ಕುತೂಹಲವನ್ನು ಹತ್ತಿರಕ್ಕೆ ತೆಗೆದುಕೊಂಡು ಹೋಗಿ, ಟೀಸರ್ ಮೂಲಕನೋ, ಟ್ರೈಲರ್ ಮೂಲಕನೋ ರಿವೀಲ್ ಮಾಡಲಾಗುತ್ತೆ.” ಎಂದು ಫಸ್ಟ್ ಲುಕ್ ಹಾಗೂ ಟೈಟಲ್‌ ಬಗ್ಗೆ ಮಾಹಿತಿ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಬ್ಬ ಗಂಡಿನ ಪ್ರತಿಯೊಂದು ಯಶಸ್ಸಿನ ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾಳೆ!

Fri Feb 17 , 2023
ಒಬ್ಬ ಗಂಡಿನ ಪ್ರತಿಯೊಂದು ಯಶಸ್ಸಿನ ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾಳೆ ಎಂಬಂತೆ, ತಮ್ಮ ಪ್ರೀತಿಯ ಗಂಡನ ಹಿಂದೆ ಇದ್ದಾರೆ ನಿಶಾ ವಿನೋದ್​​ ಪ್ರಭಾಕರ್​​​. ಹೌದು ಸ್ಯಾಂಡಲ್​​ವುಡ್ ನಟ​​​ ವಿನೋದ ಪ್ರಭಾಕರ್​​​​​​ ಪತ್ನಿ ನಿಶಾ ಪ್ರಭಾಕಾರ್​​​ ಇಬ್ಬರು ಪ್ರೀತಿಸಿ 2014ರಲ್ಲಿ ಮದುವೆಯಾಗಿದ್ದರು. ಅಂದಿನಿಂದ ಈಗಿನವರೆಗೂ ಈ ಇಬ್ಬರು ಅನ್ನೋನ್ಯತೆಯಿಂದ ಸುಖ ಸಂಸಾರವನ್ನು ನಡೆಸಿಕೊಂಡು ಬಂದಿದ್ದಾರೆ. ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿರುವ ನಿಶಾ ಪ್ರಭಾಕರ್​​ ನಟ ಪ್ರಭಾಕರ್​​ರನ್ನು ಪ್ರೀತಿಸಿ ಮದುವೆಯಾದರು. ನಟ […]

Advertisement

Wordpress Social Share Plugin powered by Ultimatelysocial