ನೆಟೆ ರೋಗ ಬಾಧೆ ತಾಳದೆ ನೇಣಿಗೆ ಶರಣಾದ ಯುವ ರೈತ

 

ನೆಟೆರೋಗಕ್ಕೆ ತುತ್ತಾಗಿ ತೊಗರಿ ಬೇಳೆ ಕೈಕೊಟ್ಟ ಕಾರಣ ಕಾಳಗಿ ತಾಲೂಕಿನ ಕೊಡದೂರ ಗ್ರಾಮದ ಬಡ ರೈತ ಸಂತೋಷಕುಮಾರ ಹರಿಚಂದ್ರ ಜಾಧವ ಕೊಡದೂರ ತಾಂಡಾ ನಿವಾಸಿ (32) ಪಕ್ಕದ 250 ಅಡಿ ಎತ್ತರದ ಏರ್ಟೆಲ್ ಟವರ್ ನ ತುತ್ತತುದಿಯಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.ಮೃತ ರೈತ ಸಂತೋಷಕುಮಾರನಿಗೆ ಕೇವಲ ಎರಡು ಎಕರೆ ಜಮೀನಿದ್ದು, ಬೇರೆಯವರ ಹೊಲಗಳನ್ನು ಲೀಸ್ ಪಡೆದುಕೊಂಡು, ಒಕ್ಕಲುತನದ ಮೇಲೆ ಅವಲಂಬಿತನಾಗಿ ಉಳುಮೆ ಮಾಡುವ ಉತ್ತಮ ರೈತನಾಗಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.ಬೇರೆಯವರಿಂದ ಲೀಜ್ ಹಾಕಿಕೊಂಡಿರುವ 30 ಎಕರೆ ಜಮೀನು ಹಾಗೂ ತನ್ನ 2 ಎಕರೆ ಸೇರಿ ಒಟ್ಟು 32 ಎಕರೆ ಜಮೀನಿನಲ್ಲಿ 150 ಕ್ವಿಂಟಲ್ ತೊಗರಿ ಬೆಳೆಯನ್ನು ನಿರೀಕ್ಷೆ ಮಾಡಿ, ವಿವಿಧ ಬ್ಯಾಂಕ್ ಹಾಗೂ ಖಾಸಗಿ ಸೇರಿ 5 ಲಕ್ಷ ಸಾಲ ಮಾಡಿದ್ದ ಎನ್ನಲಾಗಿದೆ.ತನ್ನ ಸ್ವಂತ ಜಮೀನು ಹಾಗೂ ಲೀಜ್ ಹಾಕಿಕೊಂಡಿರುವ ಎಲ್ಲಾ ಜಮೀನಿನ ತೊಗರಿ ಬೆಳೆ ಸಂಪೂರ್ಣ ನೆಟೆರೋಗಕ್ಕೆ ತುತ್ತಾಗಿ, ರಾಶಿ ಮಾಡಿದ್ದು, ಕೇವಲ 30 ಕ್ವಿಂಟಾಲ್ ಮಾತ್ರ ತೊಗರಿ ಬೆಳೆ ಬಂದಿರುವುದರಿಂದ ಆಘಾತಗೊಂಡ ರೈತ ಸಂತೋಷಕುಮಾರ ಜಾಧವ ದಿಕ್ಕು ತೋಚದೆ ಸಾಲ ಹೇಗೆ ತಿಳಿಸಲೆಂದು ಪಕ್ಕದ 250 ಅಡಿ ಎತ್ತರದ ಏರ್ಟೆಲ್ ಟವರ್ ನ ತುತ್ತತುದಿಗೆರಿ ರಾತ್ರಿ ವೇಳೆ ನೇಣು ಬಿಗಿದುಕೊಂಡಿದ್ದಾನೆ.ಮೃತ ವ್ಯಕ್ತಿಗೆ ಹೆಂಡತಿ 3 ಜನ ಚಿಕ್ಕ – ಚಿಕ್ಕ ಮಕ್ಕಳಿದ್ದು, ಬಡ ರೈತ ಕುಟುಂಬದ ಬದುಕು ಬೀದಿಗಿಳಿದಂತಾಗಿದೆ.ಶನಿವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದ ಪ್ರಯುಕ್ತ ಏರ್ಟೆಲ್ ಟವರ್ ಕೆಳಗಿರುವ ಟೀ.. ಅಂಗಡಿ ಕೆಳಗೆ ಕುಳಿತು ರೈತರು ತೊಗರಿ ಬಡೆಯಲು ಇಂದು ಬಿಸಿಲು ಬರಬಹುದೇ ಎಂಬ ಭಾವನೆಯಿಂದ ಬಾನೆತ್ತರಕ್ಕೆ ತಲೆ ಎತ್ತಿನೋಡಿದ ರೈತರ ಕಣ್ಣಿಗೆ ಘಟನೆಗೆ ಬೆಳಕಿಗೆ ಬಂದಿದೆ.ಶವ ಇಳಿಸಲು ಹರಸಾಹಸ ಪಟ್ಟ ಗ್ರಾಮಸ್ಥರು : ಘಟನೆ ತಿಳಿದು ಬೆಚ್ಚಿಬಿದ್ದ ಗ್ರಾಮಸ್ಥರು ಶವ ಇಳಿಸುವುದು ಹೇಗೆ ಎಂದು ಯೋಚಿಸುತ್ತಾ ಅಗ್ನಿಶಾಮಕ, ಕೆಇಬಿ ಹಾಗೂ ಪೆÇಲೀಸ್ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರು.ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೂ ಸಹ ತಿಳಿಯದಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಗ್ರಾಮದ ಯುವಕರು ಮತ್ತು ಹಿರಿಯರೆಲ್ಲರೂ ಸೇರಿಕೊಂಡು ಇಲಾಖಾ ಅಧಿಕಾರಿಗಳ ಸಹಕಾರದೊಂದಿಗೆ ಹತ್ತಾರು ಜನ ಟವರ್ ಹತ್ತಿ ಬೃಹದಾಕಾರದ ಹಗ್ಗದಿಂದ ಸಹಾಯದಿಂದ ಶವವನ್ನು ನಿಧನವಾಗಿ ತೆಗೆಯುತ್ತಿರುವ ದೃಶ್ಯ ನೋಡುಗರಿಗೆ ಆಶ್ಚರ್ಯಪಡುವಂತಿತ್ತು. ಬಾನೆತ್ತರದಲ್ಲಿ ತೆಲಾಡುತ್ತಿರುವ ಯುವ ರೈತ ಸಂತೋಷಕುಮಾರನ ಶವವನ್ನು ನೋಡುತ್ತಿದ್ದ ಕುಟುಂಬಸ್ಥರ ಅಕ್ರಂದನವು ಸಾರ್ವಜನಿಕರ ಕಣ್ಣಲ್ಲಿಯೂ ನೀರು ಬರುವಂತೆ ಮಾಡಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರಲ್ಲಿ ಆಭರಣಗಳ ಬಗ್ಗೆ ಉತ್ಸಾಹ ತುಸು ಹೆಚ್ಚಾಗಿಯೇ ಇರುತ್ತದೆ.

Mon Jan 16 , 2023
ಮಹಿಳೆಯರಲ್ಲಿ ಆಭರಣಗಳ ಬಗ್ಗೆ ಉತ್ಸಾಹ ತುಸು ಹೆಚ್ಚಾಗಿಯೇ ಇರುತ್ತದೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರ ಹೀಗೆ ಜಗತ್ತಿನಲ್ಲಿ ಅನೇಕ ಬಗೆಯ ದುಬಾರಿ ಆಭರಣಗಳು ಲಭ್ಯವಿವೆ. ಮಹಿಳೆಯರ ಆಭರಣಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಚಾರವೊಂದಿದೆ. ಸಾಮಾನ್ಯವಾಗಿ ಮಹಿಳೆಯರು ಪಾದಗಳಲ್ಲಿ ಚಿನ್ನದ ಕಾಲುಂಗುರಗಳನ್ನು ಧರಿಸುವುದಿಲ್ಲ. ಚಿನ್ನದ ಕಾಲ್ಗೆಜ್ಜೆಯನ್ನೂ ಧರಿಸುವುದಿಲ್ಲ.ಇದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಎರಡೂ ಕಾರಣಗಳಿವೆ. ಹಿಂದೂ ಧರ್ಮದಲ್ಲಿ ಮಹಿಳೆಯರ ಆಭರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರತಿಯೊಂದು ಆಭರಣಕ್ಕೂ ತನ್ನದೇ ಆದ ಮಹತ್ವವಿದೆ. ವಿಷ್ಣುವಿಗೆ […]

Advertisement

Wordpress Social Share Plugin powered by Ultimatelysocial