ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನ ತಡೆದ ,ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನ ತಡೆದ ,ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಯಶಸ್ವಿಯಾಗಿ,. ಆವರಣದ ಒಳಗೆ ಹೂಗಿ , ಒತ್ತಾಯ ಪತ್ರ ಸಲ್ಲಿಸಿದ ರೈತರುಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದ ಅಪಾರ ಜಿಲ್ಲಾಧಿಕಾರಿ ಕವಿತಾ ರಾಜರಾವ್ ಒತ್ತಾಯ ಪತ್ರ ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗಳಿಗೆ ಉತ್ತರ ಹೇಳುತ್ತಾರೆ ಎಂದಾಗ ರೈತರು ಒಪ್ಪಲಿಲ್ಲ ಜಿಲ್ಲಾಧಿಕಾರಿಗಳ ಸಮಕ್ಷಮ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೇ ಹಾಜರಿದ್ದು ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು, ಜಿಲ್ಲಾಧಿಕಾರಿಗಳು ಮೂರು ದಿನದೊಳಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಚಳುವಳಿಯನ್ನುಕೈ ಬಿಡಲಾಯಿತು ಚಳುವಳಿಯ ನೇತೃತ್ವ ವಹಿಸಿದ ರಾಜ್ಯಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ಎಲ್ಲಾ ಸರ್ಕಾರಗಳು ರೈತರನ್ನ ಗುಲಾಮರಂತ್ತೆ ನಡೆಸಿಕೊಳ್ಳುತ್ತಿದ್ದಾರೆ, ತಿನ್ನುವ ಅನ್ನಕ್ಕೆ ಕಷ್ಟ ಬಂದಾಗ ರೈತರ ಬಗ್ಗೆ ಗೌರವ ಬರುತ್ತದೆ, ಈಗ ಪಾಕಿಸ್ತಾನದಲ್ಲಿ ಬಂದಿದೆ, ರೈತರು ಎಂದಿಗೂ ಯಾರಿಗೂ ಹೆದರಬಾರದು ರೈತರ ಮೇಲೆ ದಬ್ಬಾಳಿಕೆ ನಡೆಸುವ ಯಾರೇ ಆದರೂ ಅವರನ್ನು ಮಟ್ಟ ಹಾಕಲು ಸಂಘಟಿತರಾಗಬೇಕು, ಸರ್ಕಾರ ಮಾಡಿದ ಆದೇಶವನ್ನು ಗಾಳಿಗೆ ತೂರಿ ರೈತರನ್ನು ವಂಚಿಸುವ ಸಕ್ಕರೆ ಕಾರ್ಖಾನೆ ಮಾಲೀಕರ ಷಡ್ಯಂತರ ಮಟ್ಟ ಹಾಕಲು ಹೋರಾಟ ಅವಶ್ಯಕತೆ ಎಂದರು ಇಂದಿನ ಚಳುವಳಿಯ ಒತ್ತಯಗಳು ಕಬ್ಬಿನ ಹೆಚ್ಚುವರಿ 150ರೂ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೊಡಿಸಭೇಕು ಜಿಲ್ಲೆಯ ರೈತರ ವಿವಿದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ಮೈಸೂರಿನ ಗನ್ನ ಹೌಸ್ ವೃತ್ತದಿಂದ ಮೆರವಣಿಗೆ ಆರಂಭಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ರೈತರು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸತತ 39 ದಿನಗಳ ಹೋರಾಟದ ಪರಿಣಾಮ ಕಬ್ಬಿಗೆ ರೂ 150/-ಹೆಚ್ಚುವರಿ ಆದೇಶ ಮಾಡಿದ್ದರು ಬಣ್ಣಾರಿ ಸಕ್ಕರೆ ಕಾರ್ಖಾನೆ ಹೆಚ್ಚುವರಿ ಹಣ ಪಾವತಿಸದೆ ಇರುವ ಬಗೆ ಅರಿಶಿಣ ಬೆಳೆಗೆ ಬೆಲೆ ಕುಷಿತವಾಗಿದ್ದು ಉತ್ಪಾದನಾ ವೆಚ್ಚವು ಸಿಗುತ್ತಿಲ್ಲ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್ ಗೆ 17500 ಎಂಇಎಸ್ ಯೋಜನೆಯಲ್ಲಿ ಬೆಂಬಲ ಬೆಲೆ ನಿಗದಿ ಮಾಡಬೇಕು ಕಾವೇರಿ – ಕಬಿನಿ ಅಚ್ಚುಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಬಾಳೆ ಇನ್ನಿತರ ಬೆಳೆಗಳ ರಕ್ಷಣೆಗಾಗಿ ಬೇಸಿಗೆಯಲ್ಲಿ ದನ ಕರುಗಳ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ತುಂಬಿಸಲು, ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಈ ಬಗ್ಗೆ ನಾಳೆಯಿಂದಲೇ ನೀರು ಹರಿಸುವುದಾಗಿ ,ಕಬಿನಿ ಅಧಿಕ್ಸಕ ಅಭಿಯಂತರರು ಭರವಸೆ ನೀಡಿದರು ಕೃಷಿ ಪಂಪ್ ಸೆಟ್ ಗಳಿಗೆ ಬೆಳಿಗ್ಗೆ 6 ರಿಂದ ಸಂಜೆ 6 ರವರಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಕಾಡುಪ್ರಾಣಿಗಳ ದಾಳಿಯಿಂದ ರೈತರು ಭಯ ಬೀತರಾಗಿರುವ ಕಾರಣ ಹಗಲು ವೇಳೆ ವಿದ್ಯುತ್ ನೀಡಬೇಕು ಕನಿಷ್ಠ ಬೆಂಬಲ ಬೆಲೆ ಭತ್ತ ರಾಗಿ ಇತರೆ ಉತ್ಪನ್ನಗಳ ಖರೀದಿ ಕೇಂದ್ರಗಳಲ್ಲಿ, ರೈತರಿಂದ ಖರೀದಿ ಮಿತಿ ವಿಧಿಸಿರುವುದನ್ನು ರದ್ದುಗೊಳಿಸಬೇಕು, ಪಂಜಾಬ್ ಹರಿಯಾಣ ತೆಲಂಗಾಣ ರಾಜ್ಯಗಳಲ್ಲಿ ರೈತರಿಗೆ ಯಾವುದೇ ಮಿತಿ ಇರುವುದಿಲ್ಲ , ಸರಬರಾಜು ಮಾಡಿದ ಐದು ದಿನದ ಒಳಗಾಗಿ ರೈತರಿಗೆ ಹಣ ಪಾವತಿಯಾಗುತ್ತದೆ ಪ್ರಧಾನಿ ಫಸಲ್ ಭೀಮಾ ಬೆಳೆವಿಮೆ ಪದ್ಧತಿ ರೈತರಿಗೆ ಸಹಕಾರಿಯಲ್ಲ, ಪ್ರತಿ ರೈತನ ಹೊಲದ ವಿಮೆ ಜಾರಿ ಆಗಬೇಕು ಈಗ ಕಂಪನಿಗಳಿಗೆ ಲಾಭ ತರುವ ಯೋಜನೆಯಾಗಿದೆ, ಇನ್ನಾದರೂ ರೈತರ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಬೇಕು ಬ್ಯಾಂಕ್ ಗಳಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ನೀತಿ ಕೈ ಬಿಡಬೇಕು. ಕೃಷಿ ಸಾಲ ನೀತಿ ಬದಲಾಗಬೇಕು ರೈತನ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಶೇ 75 ರಷ್ಟು ಸಾಲ ನೀಡಬೇಕು, ಕೃಷಿ ಉತ್ಪಾದನೆಗೆ ಬಡ್ಡಿ ರಹಿತ ಸಾಲ ನೀಡಬೇಕು ರಸಗೊಬ್ಬರ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಕೆಲವು ಕಡೆ ಕಳಪೆ ರಸಗೊಬ್ಬರ ಕೀಟನಾಶಕ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ಅಡಿಗೆ ಅನಿಲ (ಗ್ಯಾಸ್) ವಿತರಕರು ಪ್ರತಿ ಸಿಲಿಂಡರ್ ಗೆ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ಗ್ರಾಮೀಣ ಭಾಗದಲ್ಲಿ ಸುಲಿಗೆ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ರಾಜ್ಯದಲ್ಲಿ ಜಾರಿಗೆ ಬಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು, ಸಾವಿರಾರು ರೈತರು ಈ ಕಾಯ್ದೆ ಜಾರಿಯಾದ ಮೇಲೆ ಕೃಷಿ ಉತ್ಪನ್ನಗಳನ್ನು ರಹಧಾರಿ ಇಲ್ಲದ ದಲ್ಲಾಳಿಗಳಿಗೆ ಮಾರಾಟ ಮಾಡಿ, ಕೋಟ್ಯಾಂತರ ರುಪಾಯಿ ಹಣ ಕಳೆದುಕೊಂಡಿದ್ದಾರೆ ಜಿಲ್ಲೆಯಲ್ಲಿ ಸಾವಿರಾರು ರೈತರು ಹತ್ತಾರು ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಹೋಗುತ್ತಿರುವ ಜಮೀನುಗಳಿಗೆ ಸಾಗುವಳಿ ಪತ್ರವನ್ನು ನೀಡದೆ ನಿರ್ಲಕ್ಷ ವಹಿಸುತ್ತಿದ್ದಾರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ರೈತರಿಗೆ ನ್ಯಾಯಬದ್ಧವಾಗಿ ಸಾಗುವಳಿ ಪತ್ರವನ್ನು ನೀಡಬೇಕುಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುವ ಪರಿಹಾರ ಧನ ಸಂಪೂರ್ಣ ನಷ್ಟ ಭರಿಸಬೇಕು, ಜೀವ ಹಾನಿಗೆ ಕನಿಷ್ಠ 50 ಲಕ್ಷ ಪರಿಹಾರ ನೀಡಬೇಕು, ಕಾಡಂಚಿನಲ್ಲಿ ಪ್ರಾಣಿಗಳ ಸಾವಿಗೆ ರೈತರನ್ನ ಬಂಧಿಸಿ ಜೈಲಿಗೆ ಕಳಿಸುವ, ರೈತರನ್ನ ಭಯೋತ್ಪಾದಕರಂತೆ ಬಿಂಬಿಸುವ ಅರಣ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮೇಲ್ಕಂಡ ರೈತರ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಮೂರು ದಿನದ ಒಳಗಾಗಿ ಸಭೆ ಕರೆಯದಾಗಿ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಭರವಸೆ ನೀಡಿದ ಕಾರಣ ಚಳುವಳಿಯನ್ನು ಕೈ ಬಿಡಲಾಯಿತು ಇಂದಿನ ಚಳುವಳಿಯಲಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಆತ್ತಹಳ್ಳಿ ದೇವರಾಜ್,ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಯ,ಇಂದಿನ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ ಸೋಮಶೇಖರ್,ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್,ಕಿರಗಸೂರ ಶಂಕರ ಕೆರೆಹುಂಡಿ ರಾಜಣ್ಣ, ಮಹಿಳಾ ಜಿಲ್ಲಾಧ್ಯಕ್ಷೆ ಕಮಲಮ್ಮ ತಾಲೂಕು ಅಧ್ಯಕ್ಷರಾದ ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ಕೋಟೆ ರಾಜೇಶ್, ಹಾಡ್ಯರವಿ, ಪಟೇಲ್ ಶಿವಮೂರ್ತಿ, ರೂಪ, ದೇವಮಣಿ, ಬಿದರಹಳ್ಳಿ ಮಾದಪ್ಪ ,ಮುಖಂಡರಾದ, ಪ್ರಸಾದ್ ನಾಯ್ಕ, ಕುರುಬೂರು ಪ್ರದೀಪ್,ಗೌರಿಶಂಕರ್,ಹಾಲಿನ ನಾಗರಾಜ್, ಅಂಬಳೆ ಮಂಜುನಾಥ್, ಪಿ ರಾಜು, ಉಡಿಗಾಲ ಮಂಜುನಾಥ್,ಕೋಟೆ ಸುನಿಲ್ ಕುಮಾರ್,ರೇವಣ್ಣ,ಮಹದೇವಸ್ವಾಮಿ,ಮುಂತಾದ ನೂರಾರು ರೈತ ,ರೈತ ಮಹಿಳೆಯರು ಇದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ;

Tue Feb 28 , 2023
ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರಿಗೂ ಸಮಯದ ಅಭಾವ. ತಾಜಾ ಆಹಾರವನ್ನು ಸೇವಿಸದೇ ಅದನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಕೆಲವರು ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಅದನ್ನು ಮತ್ತೆ ಬಿಸಿ ಮಾಡಿ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಕೆಲವು ವಸ್ತುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿಂದರೆ ವಿಷವಾಗುತ್ತದೆ. ಆಲೂಗಡ್ಡೆ: ಆಲೂಗಡ್ಡೆಯನ್ನು ಪ್ರತಿ ತಿನಿಸುಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಆಲೂಗೆಡ್ಡೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ […]

Advertisement

Wordpress Social Share Plugin powered by Ultimatelysocial