ಸೌರವ್ ಗಂಗೂಲಿಗೆ ಹುಟ್ಟುಹಬ್ಬದ ಸಂಭ್ರಮ

ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ, ಕ್ರಿಕೆಟ್ ಅಭಿಮಾನಿಗಳ ಪ್ರೀತಿಯ ದಾದಾ ಸೌರವ್ ಗಂಗೂಲಿ ಇಂದು ೪೮ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಾದಾರ ಹುಟ್ಟುಹಬ್ಬಕ್ಕೆ ಎಲ್ಲೆಡೆಯಿಂದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ೧೧೩ ಟೆಸ್ಟ್ ಹಾಗೂ ೩೧೧ ಏಕದಿನ ಪಂದ್ಯಗಳನ್ನು ಆಡಿರುವ ಗಂಗೂಲಿ ೪೨.೧೮ ಸರಾಸರಿಯಲ್ಲಿ ೭,೨೧೨ ಟೆಸ್ಟ್ ರನ್ ಗಳಿಸಿದ್ದಾರೆ ಇದರಲ್ಲಿ ೧೬ ಶತಕ ಒಳಗೊಂಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ೩೫ ಅರ್ಧಶತಕ ಮತ್ತು ೩೨ ವಿಕೆಟ್‌ಗಳನ್ನು ಹೊಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ ದಾದಾ ೨೨ ಶತಕ ಮತ್ತು ೭೨ ಅರ್ಧಶತಕಗಳೊಂದಿಗೆ ೪೦.೭೩ ಸರಾಸರಿಯಲ್ಲಿ ೧೧,೩೬೩ ರನ್ ಗಳಿಸಿದ್ದಾರೆ. ೧೦೦ ಏಕದಿನ ವಿಕೆಟ್‌ಗಳನ್ನೂ ಹೊಂದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕುಮಾರನ ಅವತಾರದಲ್ಲಿ ಶ್ರೀನಗರ ಕಿಟ್ಟಿ

Wed Jul 8 , 2020
ನಿರ್ದೇಶಕ ಸಿಂಪಲ್ ಸುನಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸುತ್ತಿದ್ದು, ಶರಣ್‌ಗೆ  “ಅವತಾರ್ ಪುರುಷ’ ಚಿತ್ರ ಮಾಡುತ್ತಿರೋದು ಗೊತ್ತೇ ಇದೆ. ಅಲ್ಲದೇ ಲಾಕ್‌ಡೌನ್ ಎಫೆಕ್ಟ್ನಿಂದ ಚಿತ್ರದ ಹಾಡು ಮತ್ತು ಫೈಟ್ಸ್ ಬಾಕಿ ಇದ್ದು, ತುಂಬಾ ಗ್ಯಾಪ್‌ನ ನಂತರ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್ ಅಪಿಯರೆನ್ಸ್ ಆಗಿ ಅಭಿನಯಿಸಿರುವುದು ಕೂಡಾ ಹಳೆಯ ವಿಚಾರ. ಈ ನಡುವೆ ಚಿತ್ರದ ನಿರ್ದೇಶಕ ಸುನಿ ಚಿತ್ರದಲ್ಲಿ ಕುಮಾರನ ಅವತಾರದಲ್ಲಿ ನಟಿಸುತ್ತಿರುವ  ಶ್ರೀನಗರ ಕಿಟ್ಟಿ ಬಗ್ಗೆ, ಸಾಮಾಜಿಕ […]

Advertisement

Wordpress Social Share Plugin powered by Ultimatelysocial