ಸಾರ್ವಜನಿಕ ಆಸ್ತಿಯನ್ನು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಚಿಟ್ಟಿ ಅಯ್ಯಣ್ಣ ಗಡಿಪಾರಿಗೆ ಒತ್ತಾಯಿಸಿ ರೈತರ ದರಣಿ.

ರಾಯಚೂರು :ಡಿ, 05. ತಾಲೂಕಿನ ಬಾಯಿದೊಡ್ಡಿ/ವಡವಾಟಿ ಗ್ರಾಮ ಸೀಮಾಂತರ ಸರ್ವೆ ನಂ. 99/1 ವಿಸ್ತೀರ್ಣ: 51ಎ, 26 ಗುಂಟೆ ಇರುವ ಗೈರಾಣಿ ಬೊಮಿ ಮತ್ತು ಐ.ಟಿ.ಐ. ಭೂಮಿಯಲ್ಲಿ ಹಣ ಮತ್ತು ಬಲಾಡ್ಯ ರಾಜಕೀಯ ಶಕ್ತಿಯಿಂದ ಅಯ್ಯಣ್ಣ ತಂದೆ ಚಿಟ್ಟಿ ಭೀಮಣ್ಣ ಸಾ|| ವಡವಾಟಿ ಅವರು ಕಳೆದ 10 ವರ್ಷಗಳಿಂದ ನಿರಂತರವಾಗಿ ಜೆ.ಸಿ.ಬಿ. ಮತ್ತು ಟಿಪ್ಪರ್‌ಗಳ ಮುಖಾಂತರ ಮುರಂ ಮತ್ತು ಮಣ್ಣನ್ನು 40-50 ಎಕರೆ ಭೂಮಿಯಲ್ಲಿ ಹಗೆದು ವಿವಿದ ಪ್ರದೇಶಗಳಿಗೆ ಮುರಂ ಮಾರಾಟ ಮಾಡಿ ಅಕ್ರಮವಾಗಿ ಹಣ ಪಡೆಯುತಿದ್ದಾರೆ ಎಂದು ರೈತ ಕೂಲಿ ಸಂಗ್ರಾಮ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಒತ್ತಾಯಿಸಿತು.

ಸುಮಾರು 60-70ಫೀಟ್ ಅಳವಾಗಿ ಹಗೆದು ಟಿಪ್ಸರ್‌ಗಳ ಮುಖಾಂತರ ವಿವಿದ ನಗರಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಹಳ್ಳಿಗಳಿಗೆ ಬರುವ ಸಣ್ಣ ದಾರಿಯಲ್ಲಿ ಟಿಪ್ಪರ್ ಓಡಾಡುವುದರಿಂದ ರಸ್ತೆಗಳು ಜಖಂಗೊಂಡಿರುತ್ತವೆ. ಟಿಪ್ಪರ್ ಒಡನಾಟದಿಂದ ಸುತ್ತ ಮುತ್ತಲಿರುವ ಹಳ್ಳಿಗಳಲ್ಲಿ ಬೆಳೆದಿರುವ ಬೆಳೆಗಳಿಗೆ ದೂಳು ಅವರಿಸಿಕೊಂಡು ಬೆಳಗಳು ನಾಶವಾಗುತ್ತಿವೆ. ವಡವಾಟಿ ಶಾಲೆ ಪ್ರಮುಖ ರಸ್ತೆಗೆ ಅಂಟಿಕೊಂಡಿರುತ್ತದೆ. ತರಗತಿಯಲ್ಲಿ ಮಕ್ಕಳ ಹೊಂದುತ್ತಿರುವು ಕನಿಷ್ಠ ಜ್ಞಾನ ವಿಲ್ಲದೆ ನಿರಂತರವಾಗಿ ಟಿಪ್ಪರ್ ಗಳು ಅತಿ ವೇಗವಾಗಿ, ಸೌಂಡ್ ಮಾಡುತ್ತಾ ಒಡಾಡುವುದು ಮಕ್ಕಳ ಕಲಿಕೆ ಇನ್ನಡೆಗೆ ತೀವ್ರ ಪರಿಣಾಮ ಬೀರುತ್ತದೆ. ಶಾಲಾ ಮಕ್ಕಳ ರಸ್ತೆಗಳಲ್ಲಿ ಓಡಾಡುವುದರಿಂದ ಮಕ್ಕಳ ಜೀವಕ್ಕು ತೊಂದರೆ ಅಗುವ ಸಂಭವವಿದೆ. ಈಗಾಗಲೇ ಈ ಟಿಪ್ಪರ್ ಗಳ ಅತಿವೇಗಕ್ಕೆ ಸಿಲುಕಿ ಎರಡು ಜೀವಗಳು ಸತ್ತವೆ. ಅದರು ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಷ್ಟೆಲ್ಲ ಆದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಕೊಟ್ಟ ಮನವಿ ಪತ್ರಗಳನ್ನು ಮುಂದೆ ಇಟ್ಟುಕೊಂಡು ಗಣಿ ಮಾಫಿಯಗಳ ಜೊತೆ ಶಾಮೀಲಾಗಿರುವ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಹೊರಟ ಕ್ಕಾಗಿ ಅನಿರ್ದಿಷ್ಟಾವಧಿ ದರಣಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಲಯದ ಮುಂದೆ ದಿನಾಂಕ: 05.12.2022 ರಂದು ರೈತ ಕೂಲಿ ಸಂಘ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೂಡಲೇ ಮುರುಂ ಮತ್ತು ಮಣ್ಣು ಗಣಿಗಾರಿಕೆ ಹಗೆಯುವುದನ್ನು ತಡೆ ಹಿಡಿಯಬೇಕು. ಅಕ್ರಮವಾಗಿ ಮುರಂ ಮತ್ತು ಮಣ್ಣು ಹಗೆದು ಮಾರಾಟ ಮಾಡುತ್ತಿರುವ ಅಯ್ಯಣ್ಣ ತಂದೆ ಚಿಟ್ಟೆ ಭೀಮಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಗೌರಾಣಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟ ಮಾಡಿ ಕೊಡಬೇಕೆಂದು ಒತ್ತಾಯ. ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವತ್ತಾಯಿಸಿದರು. ಈ ಸಂದರ್ಭದಲ್ಲಿ ಗೋಪಾಲ ಡಿ.ರಾಂಪೂರು, ಶ್ರೀನಿವಾಸ ಕಲವಲದೊಡ್ಡಿ, ಎಸ್.ಮಾರೆಪ್ಪ ವಕೀಲರು, ಅಂಜಿನಯ್ಯ ಕುರುಬದೊಡ್ಡಿ
ಶ್ರೀನಿವಾಸ ಕೊಪ್ಪರ. ಅಬ್ರಾಹಮ್ ಕಮಲಾಪೂರು .ಆಂಜಿನಯ್ಯ ಕಲವಲದೊಡ್ಡಿ
ಗೋವಿಂದ ವಡವಟ. ಕಷ್ಟಪ್ಪ ಆತ್ಕೂರು
ನರಸಿಂಹಲು ಕೊರ್ತಕುಂದ. ಮೀರ್ ಯಾಪಲದಿನ್ನಿ. ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜಿಲ್ಲೆಯಲ್ಲಿ ತಲೆಎತ್ತಿ ನಿಂತಿವೆ ನಕಲಿ ಕೀಟನಾಶಕ ಮಾರಾಟ ಮಳಿಗೆಗಳು.

Tue Dec 6 , 2022
  ಕಣ್ಣಿದ್ದು ಕುರುಡರಾದ ಅಧಿಕಾರಿಗಳುಹೆಸರಿಗಷ್ಟೇ ತಪಾಸಣೆಹೆಗ್ಗಿಲ್ಲದೆ ನಡೆಯುತ್ತಿದೆ ನಕಲಿ ಕೀಟನಾಶಕ ಮಾರಾಟ ದಂದೆರೈತರ ಜೊತೆ ಚೆಲ್ಲಾಟ ಆಡುತ್ತಿರುವ ಗೊಬ್ಬರ ಕೀಟನಾಶಕ ಔಷದ ಮಾರಾಟ ಅಂಗಡಿ ಮಾಲೀಕರು.ವಿಜಯಪುರ ಜಿಲ್ಲೆಯ ಕಲಿಕೇರಿಯ ಪ್ರವೀಣ ಜಗಶೆಟ್ಟಿ ಮಾಲೀಕತ್ವದ ಪದ್ಮಾವತಿ ಅಗ್ರೋ ಸೆಂಟರದಲ್ಲಿ ನಕಲಿ ಕೀಟನಾಶಕ ಮಾರಾಟ.ಕೋರಜೆನ್ (Corgen) ಕಂಪನಿಯ ಹೆಸರಿನ ನಕಲಿ ಕೀಟನಾಶಕ ಮಾರಾಟ ಮಾಡುತ್ತಿರುವ ಪ್ರವೀಣ ಜಗಶೆಟ್ಟಿಅಸಲಿ ಕೋರಜೆನ್ (Corgen)ಕಂಪನಿಯ ಬಾರಕೋಡ್ ಇಲ್ಲದ ನಕಲಿ ಕೋರಜೆನ್ ಕೀಟನಾಶಕ ರೈತರಿಗೆ ಮಾರಾಟ.ತೊಗರಿ ಬೇಳೆಗೆ ನಕಲಿ […]

Advertisement

Wordpress Social Share Plugin powered by Ultimatelysocial