ಉಡುಪಿ: ಮಸೀದಿ ಕಟ್ಟಡದಲ್ಲಿದ್ದ SDPI ಅಧ್ಯಕ್ಷನ ಅಕ್ರಮ ಹೋಟೆಲ್ ತೆರವು

ಉಡುಪಿ, ಮಾರ್ಚ್ 26: ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಬುಲ್ಡೋಜರ್ ಅಬ್ಬರಿಸಿದೆ. ನಗರದಲ್ಲಿ ಕಟ್ಟಿರುವ ಹಲವು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಉಡುಪಿ ನಗರಸಭೆ ಮಾಡಿದೆ.ಉಡುಪಿ ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ಕಳೆದ ಹಲವು ವರ್ಷಗಳಿಂದ ಅಕ್ರಮ ಕಟ್ಟಡದಲ್ಲಿ ಹೋಟೆಲ್ ವ್ಯವಹಾರ ನಿರ್ವಹಿಸುತ್ತಿದ್ದು, ನಗರಸಭೆ ಹಲವು ನೋಟಿಸ್ ನೀಡಿದ ಬಳಿಕ ಹೋಟೆಲ್ ತೆರವುಗೊಳಿಸಿದ ಕಾರಣ ನಗರಸಭೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಬುಲ್ಡೋಜರ್‌ನಲ್ಲಿ ಹೋಟೆಲ್ ಕಟ್ಟಡ ನೆಲಸಮಗೊಳಿಸಿದೆ.ಉಡುಪಿ ನಗರದ ಜಾಮೀಯಾ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಬುಲ್ಡೋಜರ್ ಘರ್ಜನೆ ಮಾಡಿದ್ದು, ಬೆಳ್ಳಂಬೆಳಗ್ಗೆ ಉಡುಪಿ ನಗರಸಭೆಯ ಕಾರ್ಯಾಚರಣೆ ಮಾಡಿದೆ. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಅವರ ಝರಾ ಹೋಟೆಲ್ ಅನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.

ನಜೀರ್ ಅಹಮ್ಮದ್ ಅವರ ಹೋಟೆಲ್ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಅಕ್ರಮ ಕಟ್ಟಡದಲ್ಲಿದೆ. ಈ ಬಗ್ಗೆ ನಜೀರ್ ಅಹಮ್ಮದ್ ಅವರಿಗೆ ನಗರಸಭೆ ಹಲವು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಇದೀಗ ಹೋಟೆಲ್ ತೆರವು ಮಾಡಿದ್ದಾರೆ.

ಹೋಟೆಲ್ ತೆರವು ಹಿನ್ನಲೆಯಲ್ಲಿ ನಜೀರ್ ಅಹಮ್ಮದ್ ಜೊತೆ ಅಧಿಕಾರಿಗಳು, ಪೊಲೀಸರು ಜೊತೆ ಮಾತುಕತೆ ಮಾಡಿದ್ದಾರೆ. ನಗರಸಭೆ ಸಿಬ್ಬಂದಿ, ಪೌರ ಕಾರ್ಮಿಕರಿಂದ ಅಂಗಡಿ ತೆರವು ಮಾಡಲಾಗಿದೆ. ಹೋಟೆಲ್ ಜೊತೆಗೆ ಕಟ್ಟಡದಲ್ಲಿರುವ ಝೈತರ್ ಆನ್ ಎಂಬ ಮಳಿಗೆಯೂ ತೆರವು ಮಾಡಲಾಗಿದೆ.

ಎಸ್‌ಡಿಪಿಐ ಜಿಲ್ಲಾಧ್ಯಕ್ಷನ ಅಕ್ರಮ ಕಟ್ಟಡ ತೆರವು ಹಿನ್ನಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿದೆ. ಹೋಟೆಲ್ ತೆರವು ಕಾರ್ಯಾಚರಣೆ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಈ ಹೋಟೆಲ್ ತೆರವು ಬಗ್ಗೆ ಕಳೆದ ಒಂದು ವರ್ಷದಿಂದ‌ ನೋಟಿಸ್ ನೀಡುತ್ತಿದ್ದೇವೆ. ಅಕ್ರಮ ಕಟ್ಟಡ ತೆರವು ಬಗ್ಗೆ ಮೂರು ತಿಂಗಳಿನಿಂದ ನಗರಸಭೆಯಲ್ಲಿ ಚರ್ಚೆಯನ್ನು ಮಾಡಲಾಗಿದೆ. ನೋಟಿಸ್ ನೀಡಿಯೇ ಅಕ್ರಮ ಕಟ್ಟಡ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಈ ವೇಳೆ ಕೇವಲ ಈ ಕಟ್ಟಡ ಮಾತ್ರನಾ? ಬೇರೆ ಅಕ್ರಮ ಕಟ್ಟಡಗಳನ್ನು ಏನು ಮಾಡುತ್ತೀರಿ? ಎಂದು ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಉಡುಪಿ ನಗರದ ಎಲ್ಲಾ ಅಕ್ರಮ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ.‌ ತೆರವುಗೊಳಿಸದಿದ್ದಲ್ಲಿ ಕಾರ್ಯಾಚರಣೆ ಮಾಡಿ ತೆರವು ಮಾಡುವುದಾಗಿ ಹೇಳಿದ್ದಾರೆ.

ಉಡುಪಿಯಲ್ಲಿ ಹಿಜಾಬ್ ಹೋರಾಟಕ್ಕೆ, ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಎಸ್‌ಡಿಪಿಐ ಮತ್ತು ಸಿಎಫ್‌ಐ ನೇರ ಬೆಂಬಲ ನೀಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಅಂತಾನೂ ಆರೋಪ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಹಾರವು ತ್ವಚೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಮಿಥ್ಯಗಳನ್ನು ಬಿಚ್ಚಿಡುವುದು: ಮಿಥ್ಯ 6 ನಿಮ್ಮನ್ನು ಆಶ್ಚರ್ಯಗೊಳಿಸಬಹುದು

Sat Mar 26 , 2022
ಚರ್ಮವು ನಿಮ್ಮ ದೇಹದಲ್ಲಿನ ಅತಿದೊಡ್ಡ ಅಂಗವಾಗಿದೆ. ಹೊರಗಿನ ಮಾಲಿನ್ಯಕಾರಕಗಳು ಮತ್ತು ರಾಸಾಯನಿಕಗಳಿಂದ ಅದನ್ನು ರಕ್ಷಿಸುವುದು ಸವಾಲಿನ ಸಂಗತಿಯಾಗಿದೆ. ಆದರೂ, ನೀವು ಪ್ರತಿದಿನ ಸೇವಿಸುವ ಆಹಾರವು ಹೆಚ್ಚು ಮುಖ್ಯವಾಗಿದೆ. ಉರಿಯೂತ, ಮೊಡವೆಗಳು ಮತ್ತು ಅಕಾಲಿಕ ಚರ್ಮದ ವಯಸ್ಸಾದಿಕೆಯು ಹೆಚ್ಚಿನ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳಿಂದ ಉಂಟಾಗಬಹುದು. ಈ ಸತ್ಯಗಳು ವಿಜ್ಞಾನದಲ್ಲಿ ಬೇರೂರಿದ್ದರೂ, ಹಲವಾರು ಮಾಹಿತಿಯ ತುಣುಕುಗಳು ತಪ್ಪುದಾರಿಗೆಳೆಯುವಂತಿವೆ, ಮತ್ತು ಯಾವುದು ಸರಿ ಮತ್ತು ಯಾವುದು ಅಲ್ಲ ಎಂಬುದನ್ನು ಕಂಡುಹಿಡಿಯಲು ನಿಮಗೆ ಸಹಾಯ […]

Advertisement

Wordpress Social Share Plugin powered by Ultimatelysocial