ಆಧಾರ್ ಹೊಂದಿದ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ: ಬೆಳೆ ಹಾನಿಗೆ ಡಬಲ್ ಪರಿಹಾರ

ರಾಯಚೂರು: 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಬೆಳೆ ಹಾನಿಯಾದ ರೈತರಿಗೆ ಒಟ್ಟು 20 ಹಂತಗಳಲ್ಲಿ 84,982 ಫಲಾನುಭವಿಗಳಿಗೆ 60.22 ಕೋಟಿ ರೂ.ಗಳ ಇನ್‌ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಬೆಳೆ ಪ್ರತಿ ಹೆಕ್ಟರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 6,800 ರೂ.ಹಾಗೂ ಹೆಚ್ಚುವರಿ ಪರಿಹಾರ 6,800 ರೂ. ಸೇರಿದಂತೆ ಒಟ್ಟು 13,600ರೂ., ನೀರಾವರಿ ಬೆಳೆ ಪ್ರತಿ ಹೆಕ್ಟರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 13,500 ರೂ. ಹಾಗೂ ಹೆಚ್ಚುವರಿ ಪರಿಹಾರ 11,500 ರೂ. ಸೇರಿದಂತೆ 25,000 ರೂ., ವಾರ್ಷಿಕ ಬೆಳೆ ಪ್ರತಿ ಹೆಕ್ಟರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 18,000 ರೂ. ಹಾಗೂ ಹೆಚ್ಚುವರಿ ಪರಿಹಾರ 10,000 ರೂ. ಸೇರಿದಂತೆ ಒಟ್ಟು 28,000 ರೂ.ಗಳ ನೀಡಲು ಕ್ರಮ ಕೈಗೊಳ್ಳಲಾಗಿದೆ.ಜಿಲ್ಲೆಯ 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಬೆಳೆ ಹಾನಿಯಾದ 80,412 ರೈತರಿಗೆ ಹೆಚ್ಚುವರಿಯಾಗಿ 53.47 ಕೋಟಿ ರೂ.ಗಳ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೊದನೆ ನೀಡಲಾಗಿದ್ದು, ಅತೀ ಶೀಘ್ರದಲ್ಲಿ ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಅವರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಯ ಮುಂದೆ ಪೂಜನೀಯವಾಗಿ ಬೆಳೆಯುವ ತುಳಸಿಗೆ ಆಯುರ್ವೇದ ಔಷಧ!

Thu Feb 10 , 2022
ಮನೆಯ ಮುಂದೆ ಪೂಜನೀಯವಾಗಿ ಬೆಳೆಯುವ ತುಳಸಿಗೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಮಹತ್ತರವಾದ ಸ್ಥಾನವಿದೆ. ತುಳಸಿ ಕಟ್ಟೆಯಲ್ಲಿ ಮಾತ್ರವಲ್ಲ ಮನೆಮುಂದಿನ ಹೂದೋಟದಲ್ಲಿ ಇಲ್ಲವೇ ಹೂದಾನಿಗಳಲ್ಲಿ ತುಳಸಿ ಗಿಡ ಬೆಳೆಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಹೇಗೆನ್ನುತ್ತೀರಾ ತುಳಸಿಯ ಗಾಳಿ ಸೇವನೆ ದೇಹಕ್ಕೆ ಅತ್ಯುತ್ತಮವಾದುದು. ಬೆಳಿಗ್ಗೆ ಇಲ್ಲವೇ ಸಂಜೆ ನಿಮ್ಮ ಹೂದೋಟದಲ್ಲಿ ಓಡಾಡುವಾಗ ತುಳಸಿ ಗಿಡದ ಗಾಳಿ ನಿಮ್ಮ ಮೂಗಿನ ಮೂಲಕ ಒಳಹೋದರೆ ಅದರಿಂದ ಉಸಿರಾಟದ ಅಥವಾ ಹೃದಯ ಸಂಬಂಧಿ ಕಾಯಿಲೆಗಳು ಪರಿಹಾರವಾಗುತ್ತವೆ.ಪ್ರತಿ ದಿನ ಬೆಳಗ್ಗೆ […]

Advertisement

Wordpress Social Share Plugin powered by Ultimatelysocial