ರಾಗಿ ಮಾರಾಟಕ್ಕೆ ರೈತರ ಪರದಾಟ.

ಕಲ್ಪತರು ನಾಡು ತುಮಕೂರು ಜಿಲ್ಲೆಯಾದ್ಯಂತ ರಾಗಿ ಮಾರಾಟಕ್ಕೆ ರೈತರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಮಕೂರು, ತುರುವೇಕೆರೆ ಸೇರಿದಂತೆ ಪ್ರತಿ ತಾಲ್ಲೂಕಿನಲ್ಲೂ ರಾಗಿ ಮಾರಾಟಕ್ಕೆ ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಬೆಂಬಲ ಬೆಲೆ ನೀಡಿ ರೈತರು ಬೆಳೆದ ರಾಗಿ ಖರಿದಿಸಲು ಜಿಲ್ಲೆಯಾದ್ಯಂತ ಖರೀದಿ ಕೇಂದ್ರಗಳನ್ನು ತೆರೆದಿದೆ, ಆದರೆ ತುಮಕೂರಿನ ಅಂತರಸನಹಳ್ಳಿ ಹಾಗೂ ತುರುವೇಕೆರೆ ಪಟ್ಟಣದಲ್ಲಿ ರೈತರ ರಾಗಿ ತುಂಬಿದ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಗ್ರಾಮೀಣ ಭಾಗದಿಂದ ಟ್ರಾಕ್ಟರ್‌ಗಳ ಮೂಲಕ ರಾಗಿತಂದು ಹಗಲು ರಾತ್ರಿ ಕಾಯುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಜಿಲ್ಲಾಡಳಿತ ರಾಗಿ ಖರೀದಿಗೆ ಹೆಚ್ಚಿನ ಆಸಕ್ತಿ ತೋರದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆಲ್ಲ ಕಾರಣ ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳ ಕೊರತೆ ಎದುರಾಗಿದ್ದು ರೈತರು ಹಗಲು-ರಾತ್ರಿ ಎನ್ನದೆ ರಾಗಿ ಖರೀದಿಗಾಗಿ ಪರದಾಡುವಂತಾಗಿದೆ. ರೈತರು ರಾಗಿ ತುಂಬಿ ಕೊಂಡು ತಂದ ಟ್ರಾಕ್ಟರ್‌ಗಳು ಕಿಲೋ ಮೀಟರ್‌ಗಳವರೆಗೆ ಉದ್ದ ನಿಲ್ಲುವಂತಾಗಿದೆ. ಇನ್ನು ರಾಗಿ ಮಾರಾಟಕ್ಕೆ ದೂರ ದೂರದ ಊರುಗಳಿಂದ ಬರುವ ರೈತರಿಗೆ ಕನಿಷ್ಟ ಸೌಲಭ್ಯಗಳಿಲ್ಲದೇ ರಸ್ತೆಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ. ಇನ್ನು ಮಾರ್ಚ್ 31ರವರೆಗೆ ರಾಗಿ ಖರೀದಿ ಅವಕಾಶ ನೀಡಲಾಗಿದ್ದು, ನೋಂದಣಿ ಮಾಡಿಸಿದ ರೈತರ ಗುಣಮಟ್ಟದ ರಾಗಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಕಳೆದ ನಾಲ್ಕೈದು ದಿನಗಳಿಂದ ಊಟ-ನೀರು, ನಿದ್ದೆ ಇಲ್ಲದೆ ರೈತರು ಬಿರು-ಬಿಸಿಲು, ರಾತ್ರಿಯ ಚಳಿ ಎನ್ನದೇ ರಾಗಿ ಮಾರಾಟಕ್ಕೆ ಕಾಯ್ದು ಕುಳಿತುಕೊಳ್ಳುವಂತಾಗಿದೆ. ನಿಧಾನಗತಿಯಲ್ಲಿ ರಾಗಿ ಖರೀದಿಯಾಗುತ್ತಿರುವ ಹಿನ್ನಲೆ ರಾಗಿ ಖರೀದಿ ಕೇಂದ್ರದ ಗೋದಾಮಿನ ಮುಂದೆ ರಾಗಿ ಮೂಟೆ ತುಂಬಿದ ನೂರಾರು ಟ್ರಾಕ್ಟರ್‌ಗಳು ಸಾಲುಗಟ್ಟಿ ನಿಲ್ಲುವಂತಾಗಿದೆ ಕೂಡಲೆ ಸಮಸ್ಯೆಯನ್ನು ಅರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಹಾಗೂ ರೈತಪರ ಸಂಘಟನೆಗಳ ಒತ್ತಾಯವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಳೆದೆರಡು ವರ್ಷಗಳು ಕೋವಿಡ್ ಹಿನ್ನೆಲೆ ಪ್ರವಾಸಿಗ ಕೊರತೆ ಎದುರಿಸಿದ್ದ ಆನೆಗೊಂದಿ ತಾಣ,

Sat Feb 11 , 2023
ಕೊಪ್ಪಳದ ಗಂಗಾವತಿಯ ಆನೆಗೊಂದಿ, ವಿರುಪಾಪುರ ಗಡ್ಡಿ, ಶಿವಪುರ, ಬಸ್ಸಾಪುರ, ಹನುಮನಳ್ಳಿ ಗ್ರಾಮಗಳು ಅಂದ್ರೆ ವಿದೇಶಿಗರಿಗೆ ಅಚ್ಚುಮೆಚ್ಚಿನ ತಾಣಗಳು, ಬೇರೆ ಬೇರೆ ದೇಶಗಳಿಂದ ವಿದೇಶಿಗರು ಬರುತ್ತಾರೆ. ಹಾಗಾಗಿ ರೆಸಾರ್ಟ್ ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆದರೆ ಅನಧಿಕೃತ ರೆಸಾರ್ಟ್ಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ತೆರವು ಮಾಡಲು ಜಿಲ್ಲಾಡಳಿತ ಹಾಗೂ ಹಂಪಿ ಪ್ರಾಧಿಕಾರ ಕೂಡ ಮುಂದಾಗಿದ್ದು, ರೆಸಾರ್ಟ್ ಮಾಲೀಕರು ಮಾತ್ರ ನಮಗೆ ಅನುಕೂಲ ಮಾಡಿಕೊಡಿ ತೆರವುಗೊಳಿಸಬೇಡಿ ಅಂತಾ ಮನವಿ ಮಾಡುತ್ತಿದ್ದಾರೆ. ವಾ.ಓ: ಕಳೆದೆರಡು ವರ್ಷಗಳು […]

Advertisement

Wordpress Social Share Plugin powered by Ultimatelysocial