ತರಕಾರಿ ಖರೀದಿಗೆ ಬಂದವರ ಮೇಲೆ ಬಿದ್ದ ವಿದ್ಯುತ್ ತಂತಿ! ನೋಡನೋಡುತ್ತಿದ್ದಂತೆಯೇ ಸುಟ್ಟುಹೋದ 30 ಮಂದಿ

ಕಾಂಗೋ: ಹೈವೋಲ್ಟೇಜ್ ವಿದ್ಯುತ್ ತಂತಿಯೊಂದು ಮಾರುಕಟ್ಟೆಯ ಮಧ್ಯೆ ಭಾಗ ಬಿದ್ದ ಪರಿಣಾಮವಾಗಿ ತರಕಾರಿ ಖರೀದಿಗೆ ಬಂದ 30 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕಾಂಗೋ ಗಣರಾಜ್ಯದಲ್ಲಿ ನಡೆದಿದೆ. ಇಲ್ಲಿಯ ಕಿಬ್ಲಾ ಪ್ರದೇಶದ ಮಾರುಕಟ್ಟೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಈ ಮಾರುಕಟ್ಟೆ ತೀರಾ ಗಲೀಜಿನಿಂದ ಕೂಡಿದ್ದು, ರಸ್ತೆ ತುಂಬೆಲ್ಲಾ ಕೆಸರು ತುಂಬಿತ್ತು. ಇದರ ಪರಿಣಾಮವಾಗಿ ವಿದ್ಯುತ್ ಕಂಬಗಳು ಕೂಡ ಸಡಿಲಗೊಂಡಿದ್ದವು. ಇಷ್ಟಾದರೂ ಅದನ್ನು ಯಾರೂ ಗಮನಿಸಿರಲಿಲ್ಲ. ಇಂದು ಬೆಳಗ್ಗೆ ತರಕಾರಿ ಖರೀದಿಸಲು ಜನರು ಬಂದಾಗ ಅವರ ಮೇಲೆ ಹೈವೋಲ್ಟೇಜ್ ತಂತಿ ಬಿದ್ದಿದೆ. ಅಲ್ಲಿ ಸಂಪೂರ್ಣ ಕೆಸರುಮಯವಾಗಿದ್ದ ಹಿನ್ನೆಲೆಯಲ್ಲಿ ಇಡೀ ಪ್ರದೇಶಕ್ಕೆ ಹೈವೋಲ್ಟೇಜ್ ವಿದ್ಯುತ್ ಪಸರಿಸಿದೆ. ಇದರಿಂದ ಕ್ಷಣಾರ್ಧದಲ್ಲೇ ವಿದ್ಯುತ್ ಶಾಕ್ ತಗುಲಿದೆ. ತಂತಿ ನೇರವಾಗಿ ಕೆಸರಿನಿಂದ ಕೂಡಿದ ನೀರಿಗೆ ಬಿದ್ದಿದೆ. ನೀರಿನ ಸಂಪರ್ಕಕ್ಕೆ ಬಂದವರಿಗೆ ಶಾಕ್‌ ತಗುಲಿರುವುದಾಗಿ ಪೊಲೀಸರು ಹೇಳಿದ್ದಾರೆ.ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಮೃತದೇಹಗಳು ಒಂದಕ್ಕೊಂದು ಅಂಟಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಹಲವಾರು ಮೃತದೇಹಗಳು ಸಂಪೂರ್ಣವಾಗಿ ಕೆಸರಿನಲ್ಲಿ ಮುಳುಗಿ ಹೋಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ನೋರಾ ಫತೇಹಿ ಅವರು ಅವರೊಂದಿಗೆ ಪೋಸ್ ನೀಡುತ್ತಿದ್ದಂತೆ ಇನ್ಮುಂದೆ ತನ್ನ ಒಳಗಿನ ಸಿಂಹಿಣಿಯನ್ನು ಚಾನೆಲ್ ಮಾಡುವುದಾಗಿ ಭರವಸೆ ನೀಡುತ್ತಾಳೆ.

Thu Feb 3 , 2022
ನೋರಾ ಫತೇಹಿ ಪ್ರಸ್ತುತ ದುಬೈನಲ್ಲಿ ತನ್ನ ದಿನಗಳನ್ನು ಕಳೆಯುತ್ತಿದ್ದಾರೆ. ನಟಿ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಅವರು ಎಲ್ಲಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಇಂದು, ಫೆಬ್ರವರಿ 3, ನೋರಾ ಅವರು ಸುಂದರವಾದ ಸಿಂಹಿಣಿಗಳೊಂದಿಗೆ ಪೋಸ್ ನೀಡಿದ ತನ್ನ ಅದ್ಭುತ ಚಿತ್ರಗಳನ್ನು ಕೈಬಿಟ್ಟರು. ನೋರಾ ದುಬೈನಲ್ಲಿ ಸಿಂಹಿಣಿಗಳೊಂದಿಗೆ ಪೋಸ್ ನೀಡಿದ್ದಾಳೆ ನೋರಾ ಫತೇಹಿ ಅವರ ದುಬೈ ರಜೆ ವಿನೋದ ಮತ್ತು ಸಾಹಸದಿಂದ ತುಂಬಿದೆ. ಸುಂದರವಾದ ಸಿಂಹಿಣಿಗಳೊಂದಿಗೆ ಪೋಸ್ […]

Advertisement

Wordpress Social Share Plugin powered by Ultimatelysocial