ಗೃಹಿಣಿಯರೇ 40 ವರ್ಷದ ನಂತರವೂ ಫಿಟ್‌.

ಸುಂದರವಾಗಿ ಕಾಣಬೇಕು ಅನ್ನುವ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಮಹಿಳೆಯರಲ್ಲಿ ಮದುವೆಯಾಗಿ ಮಕ್ಕಳಾದ ಮೇಲೆ ತೂಕ ಹೆಚ್ಚಾಗುವಂತಹ ಸಮಸ್ಯೆಯನ್ನು ಖಂಡಿತ ಅನುಭವಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮೊದಲಿನ ತೂಕಕ್ಕೆ ಮತ್ತೆ ಮರಳೋದಕ್ಕೆ ಆಗೋದೇ ಇಲ್ಲ.ಅದ್ರಲ್ಲೂ 40 ವರ್ಷದ ನಂತರ ತೂಕ ಇಳಿಸಿಕೊಂಡು ಫಿಟ್‌ ಆಗಿರಬೇಕು ಅನ್ನುವ ಆಸೆ ನಿಮ್ಮಲ್ಲಿದೆಯಾ? ಅತಿಯಾದ ತೂಕವನ್ನು ಇಳಿಸಿ ನೀವು ಫಿಟ್‌ ಆಗ್ಬೇಕಾ? ಹಾಗಾದ್ರೆ ನಾವು ಹೇಳೋ ಸಿಂಪಲ್‌ ಟಿಪ್ಸ್‌ನ ಫಾಲೋ ಮಾಡಿ.ನಿಮಗೆಲ್ಲಾ ಬಾಲಿವುಡ್‌ ಹೀರೋಯಿನ್‌ ಕರೀನಾ ಕಪೂರ್‌ ಬಗ್ಗೆ ಗೊತ್ತಿದ್ಯಲ್ಲ. ಎರಡು ಮಕ್ಕಳಾದ್ರು ಈಗಲೂ ಕೂಡ ನವ ಯುವತಿಯಂತೆ ಫೀಟ್‌ ಆಗಿದ್ದಾರೆ. ಈಗಿನ ಜನರೇಷನ್‌ ಹುಡುಗಿಯರು ನಾಚುವಂತೆ ದೇಹ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ ಕರೀನಾಗೆ ಇಬ್ಬರು ಮಕ್ಕಳಾದ ಮೇಲೆ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸುಲಭದ ಮಾತು ಅಲ್ಲ. ಯಾಕಂದ್ರೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ನಾವು ಫಿಟ್‌ನೆಸ್‌ ಅಂತ ಆಹಾರವನ್ನು ಸರಿಯಾಗಿ ತಿನ್ನದೇ ಹೋದರೆ ನಮ್ಮ ಪ್ರಾಣಕ್ಕೆ ಆಪತ್ತು ಬರಬಹುದು.ಇವತ್ತು ನಾವು ನಿಮಗೆ ಅಧಿಕ ಫೋಷಕಾಂಶಗಳನ್ನು ಸೇವಿಸಿ. 40 ವರ್ಷದ ನಂತರವೂ ಫಿಟ್‌ ಆಗಿ ಇರೋದು ಹೇಗೆ ಎಂಬುದನ್ನು ಹೇಳ್ತೀವಿ. ಅದಕ್ಕಾಗಿ ನೀವು ಕರೀನಾ ಕಪೂರ್‌ ಫಿಟ್‌ನೆಸ್‌ ಟಿಪ್ಸ್‌ ಅನ್ನು ಫಾಲೋ ಮಾಡಿ. ಇದು ಖುದ್ದು ಕರೀನಾ ಕಪೂರ್‌ ಅವರೇ ಹೇಳಿರೋ ಕೆಲವೊಂದು ಡಯೇಟ್‌ ಟಿಪ್ಸ್‌.ಬೆಳಗ್ಗಿನ ಸಮಯ ನಾವು ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ ಅನ್ನೋದು ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಬೆಳಗ್ಗಿನ ವರ್ಕ್‌ಔಟ್‌ಗೂ 60 ರಿಂದ 90 ನಿಮಿಷದ ಮೊದಲು ಫೈಬರ್‌ಯುಕ್ತ ಆಹಾರವನ್ನು ಸೇವಿಸಬೇಕು. ಇದು ನಿಮ್ಮ ತೋಳುಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇದರಿಂದಾಗಿ ನೀವು ವ್ಯಾಯಾಮದ ಸಮಯದಲ್ಲಿ ಅತೀ ಹೆಚ್ಚಿನ ಪ್ರಮಾಣದ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ ಇವರು ಮಾತ್ರ ಬಾಸ್, ಇನ್ಯಾರೂ ಬಾಸ್ ಅಲ್ಲ ಎಂದ ಪ್ರಥಮ್!

Fri Feb 24 , 2023
ಚಂದನವನದಲ್ಲಿ ಫ್ಯಾನ್ ವಾರ್‌ಗಳಿಗೇನೂ ಬರವಿಲ್ಲ. ಒಬ್ಬ ಸ್ಟಾರ್ ನಟನ ಚಿತ್ರ ಬಿಡುಗಡೆಯಾಗಲಿದೆ ಎಂದರೆ ವಿರೋಧಿ ಬಣ ಆ ಚಿತ್ರದ ಕುರಿತಾಗಿ ಅಪಪ್ರಚಾರ ಮಾಡಲು ಮುಂದಾಗಿಬಿಡುತ್ತದೆ. ಆ ವಿರೋಧಿ ಬಣ ಮತ್ತೊಬ್ಬ ನಟನ ಅಭಿಮಾನಿ ಬಳಗವೇ ಎಂಬುದು ವಿಪರ್ಯಾಸ. ಇನ್ನು ಈ ಫ್ಯಾನ್ ವಾರ್ ಒಂದು ಕಡೆಯಿಂದಾಗುತ್ತಿರುವ ತಪ್ಪಲ್ಲ. ಎಲ್ಲಾ ನಟರ ಅಭಿಮಾನಿಗಳೂ ಸಹ ಇದರಲ್ಲಿ ತೊಡಗಿಕೊಂಡವರೇ. ಇದರಲ್ಲಿ ಕೆಲವರು ಸ್ವಲ್ಪ ಫ್ಯಾನ್ ವಾರ್ ಮಾಡಿದರೆ, ಇನ್ನೂ ಕೆಲವರು ಫ್ಯಾನ್ ವಾರ್ […]

Advertisement

Wordpress Social Share Plugin powered by Ultimatelysocial