ʼ5 ಟ್ರಿಲಿಯನ್ ಡಾಲರ್ ಆರ್ಥಿಕತೆʼ: ಗುರಿಯನ್ನು ಇನ್ನೂ ಎರಡು ವರ್ಷ ಮುಂದೂಡಿದ ಮುಖ್ಯ ಆರ್ಥಿಕ ಸಲಹೆಗಾರರು !

ಹೊಸದಿಲ್ಲಿ : ಭಾರತವು ಆರ್ಥಿಕ ವರ್ಷ 2025-26 ಅಥವಾ 2026-27ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ನೂತನ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಹೇಳಿದ್ದಾರೆ.ಭಾರತವು ಆರ್ಥಿಕ ವರ್ಷ 2024-25ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020ರಲ್ಲಿ ಹೇಳಿದ್ದರೆ ಅದನ್ನೀಗ ನೂತನ ಮುಖ್ಯ ಆರ್ಥಿಕ ಸಲಹೆಗಾರರು ಎರಡು ವರ್ಷ ಮುಂದೂಡಿದ್ದಾರೆ.ಬಜೆಟ್ ನಂತರದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಭಾರತದ ಜಿಡಿಪಿ ಈಗಾಗಲೇ 3 ಟ್ರಿಲಿಯನ್ ಡಾಲರ್ ದಾಟಿದೆ ಎಂದು ಹೇಳಿದರು.”ನೈಜ ಜಿಡಿಪಿ ಶೇ 8- ಶೇ 9ರಷ್ಟು ಇರುವಂತೆ ನೋಡಿಕೊಂಡರೆ ಅದು 8% ಡಾಲರ್ ಜಿಡಿಪಿ ಪ್ರಗತಿಯಾದಂತೆ. ಇದನ್ನು ಪರಿಗಣಿಸಿದರೆ ನಾವು 2025-26 ಅಥವಾ 2026-27ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು” ಎಂದು ಅವರು ಹೇಳಿದರು.ಮುಂದಿನ ಆರ್ಥಿಕ ವರ್ಷ- 2022-23ರಲ್ಲಿ ಭಾರತದ ಜಿಡಿಪಿ ಶೇ 8ರಿಂದ ಶೇ 8.5ರಷ್ಟು ಏರಿಕೆಯಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾವೈರಸ್: ಭಾರತದಲ್ಲಿ 24 ಗಂಟೆಗಳಲ್ಲಿ 1.27 ಲಕ್ಷ ಹೊಸ ಪ್ರಕರಣಗಳು, 1,059 ಸಾವು;

Sat Feb 5 , 2022
ಭಾರತ ಮಾರ್ಪಟ್ಟಿದೆ ಮೂರನೇ ದೇಶ COVID-19 ಗೆ ಸಂಬಂಧಿಸಿದಂತೆ 5 ಲಕ್ಷಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಲು. ಶನಿವಾರ 1,059 ಸಾವುಗಳು ವರದಿಯಾಗಿದ್ದರಿಂದ ಭಾರತದ COVID-19 ಸಾವಿನ ಸಂಖ್ಯೆ 5,01,114 ಕ್ಕೆ ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಶನಿವಾರ 1,27,952 COVID-19 ಪ್ರಕರಣಗಳು ದಾಖಲಾಗಿವೆ. ದೈನಂದಿನ ಧನಾತ್ಮಕತೆಯು ಶೇಕಡಾ 9.27 ರಿಂದ ಶೇಕಡಾ 7.9 ಕ್ಕೆ ಇಳಿದಿದೆ. ಭಾರತದ ಸಕ್ರಿಯ COVID-19 ಕ್ಯಾಸೆಲೋಡ್ 13,31,648 ಕ್ಕೆ […]

Advertisement

Wordpress Social Share Plugin powered by Ultimatelysocial