ಟ್ವಿಟರ್​ನಲ್ಲಿ ಟ್ರೆಂಡ್ ಆದ ‘ಭಜರಂಗಿ 2..!

ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತಭಜರಂಗಿ 2′ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆಗೂ ಮುನ್ನವೇ ಟ್ವಿಟರ್ನಲ್ಲಿ Bhajarangi 2 ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದಭಜರಂಗಿ 2′ ಚಿತ್ರ ಬಿಡುಗಡೆಗೂ ಮುನ್ನವೇ ಬುದೊಡ್ಡ ಕ್ರೇಜ್ ಹುಟ್ಟುಹಾಕಿದೆಅಲ್ಲದೇ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಬಹುದೊಡ್ಡ ನಿರೀಕ್ಷೆ ಇದ್ದು, ಅದಕ್ಕೆ ಸಾಕ್ಷಿ ಎಂಬಂತೆ ಟ್ವಿಟರ್ನಲ್ಲಿ ಭಾರತದ ಮಟ್ಟದಲ್ಲಿ Bhajarangi 2 ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಈವರೆಗೆ ಸುಮಾರು ಭಜರಂಗಿ 2 ಚಿತ್ರದ ಹ್ಯಾಷ್ ಟ್ಯಾಗ್ನಲ್ಲಿ 9,300ಕ್ಕೂ ಅಧಿಕ ಟ್ವೀಟ್ಗಳನ್ನು ಮಾಡಲಾಗಿದ್ದು, ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಚಿತ್ರತಂಡದ ಪ್ರಿರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆದಿದ್ದು, ರಾಕಿಂಗ್ ಸ್ಟಾರ್ ಯಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗವಹಿಸಿ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಕಾರ್ಯಕ್ರಮದ ತುಣುಕುಗಳೂ ಕೂಡ ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿತ್ರವು ಅಕ್ಟೋಬರ್ 29 ಶುಕ್ರವಾರ ರಾಷ್ಟ್ರಾದ್ಯಂತ ಬಿಡುಗಡೆಯಾಗಲಿದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Accountants and Advisors Certified Public Accountants

Wed Oct 27 , 2021
Moore Accountancy is a tax accounting and tax advisory firm in San Jose, CA, providing tax preparation and planning, and representation before the federal and state tax authorities. We provide comprehensive, individualized service focused on understanding your unique needs and objectives. As a firm, Hood & Strong is one of California’s […]

Advertisement

Wordpress Social Share Plugin powered by Ultimatelysocial