ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ.

ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ. ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶೆಟ್ಟರ್. ರಾಷ್ಟ್ರೀಯ ಅಧ್ಯಕ್ಷರು ಪೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ಹೋಗ್ತಾ ಇದೇನಿ. ಪಾಸಿಟಿವ್ ಹೋಪ್‌ನಲ್ಲಿ ನಾನಿದೇನಿ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ, ಪಕ್ಷದ ದೃಷ್ಟಿಯಿಂದ ಎಲ್ಲಾ ಒಳ್ಳೆಯದು ಆಗುತ್ತದೆ ಎಂದು ಹೋಗ್ತಾ ಇದೇನಿ. ಯಡಿಯೂರಪ್ಪನವರನ್ನ ಭೇಟಿಯಾಗಬೇಕಿತ್ತು, ವಿಮಾನ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗ್ತಾ ಇದೇನಿ. ದೆಹಲಿಗೆ ಹೋಗಿ ಬಂದ ನಂತರ ಬಿಎಸ್‌ವೈ ಭೇಟಿ ಮಾಡುತ್ತೇನೆ. ಯಾವುದೇ ಸ್ಥಾನಮಾನ ಇಲ್ಲದೆ ಎರಡೂ ವರ್ಷದಿಂದ ಪಕ್ಷದಲ್ಲಿ ಇದೇನಿ. ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ. ಎಷ್ಟೋ ಕೆಲಸಗಳನ್ನ ನಮ್ಮ ಮಂತ್ರಿಗಳ ಮುಖಾಂತರ ಮಾಡಿಸಿದ್ದೇನೆ. ಯಾವುದೇ ಕಾರಣದಲ್ಲಿ ನಾನೂ ನಿವೃತ್ತಿ ಘೋಷಣೆ ಮಾಡಲು ಸಿದ್ದನಿದ್ದೆ. ಆದ್ರೆ ರಾಜಕಾರಣದಲ್ಲಿ ಗೌರವಿತವಾಗಿ ಹೊರಗಡೆ ಹೋಗಬೇಕು. ಆದ್ರೆ ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ನನ್ನ ಸಾಪ್ಟ್ ಕಾರ್ನರ್ ನನ್ನನ್ನ ಇಲ್ಲಿಯವರೆಗೆ ಬಂದಿದೆ. ರಾಷ್ಟ್ರ ಅಧ್ಯಕ್ಷರನ್ನ ಭೇಟಿಯಾದ ನಂತರ ನನ್ನ‌ ನಿರ್ಧಾರ ಪ್ರಕಟಿಸುತ್ತೇನೆ. ವರಿಷ್ಠರ ಭೇಟಿ ನಂತರ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆ ಇದೆ ಎಂದು  ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ಹೇಳಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಯಾಣ ಕರ್ನಾಟಕ ಬಿಜೆಪಿ ಮಾಧ್ಯಮ ನಿರ್ವಹಣಾ ಕೇಂದ್ರ ಉದ್ಘಾಟನೆ:*

Wed Apr 12 , 2023
ಕಲ್ಯಾಣ ಕರ್ನಾಟಕ ಬಿಜೆಪಿ ಮಾಧ್ಯಮ ನಿರ್ವಹಣಾ ಕೇಂದ್ರ ಉದ್ಘಾಟನೆ:* ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಮಾಧ್ಯಮ ನಿರ್ವಹಣಾ ಕೇಂದ್ರವನ್ನು ಇಂದು ಏಪ್ರಿಲ್ 12ರಂದು (ಬುಧವಾರ) ಬೆಳಗ್ಗೆ 11:00 ಗಂಟೆಗೆ ಕಲಬುರಗಿ ನಗರದಲ್ಲಿ ಉದ್ಘಾಟಿಸಲಾಯಿತು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್, ವಿಧಾನಪರಿಷತ್ ಸದಸ್ಯ ಹಾಗೂ ಮಾಧ್ಯಮ ನಿರ್ವಹಣಾ ಕೇಂದ್ರ ಸಂಚಾಲಕರು ಶಶೀಲ್ ನಮೋಶಿ, ವಿಧಾನಪರಿಷತ್ ಮಾಜಿ ಸದಸ್ಯ ಅಮರ್ನಾಥ ಪಾಟೀಲ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಧ್ಯಮ ನಿರ್ವಹಣಾ […]

Advertisement

Wordpress Social Share Plugin powered by Ultimatelysocial