ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ!

ಇದನ್ನು ಪ್ರತಿನಿತ್ಯ ತಿಂದರೆ ಅನೇಕ ರೋಗಗಳು ನಮ್ಮಿಂದ ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಪವರ್‌ಹೌಸ್ ಆಗಿವೆ.

ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.

ಹಣ್ಣುಗಳ ಸೇವನೆಗೆ ಬೇರೆ ಬೇರೆ ವಿಧಾನಗಳಿವೆ. ಕೆಲವರು ಬೆಳಗ್ಗೆ ಹಣ್ಣುಗಳನ್ನು ತಿನ್ನಲು ಇಷ್ಟಪಟ್ಟರೆ ಕೆಲವರು ಸಂಜೆ ಸೇವನೆ ಮಾಡ್ತಾರೆ.

ಅನೇಕರು ಹಣ್ಣುಗಳನ್ನು ಕಟ್‌ ಮಾಡಿಕೊಂಡು ಸ್ವಲ್ಪ ಉಪ್ಪು ಹಾಕಿಕೊಂಡು ತಿನ್ನುತ್ತಾರೆ. ಮಾರುಕಟ್ಟೆಗಳಲ್ಲಿ ನೀವು ಫ್ರೂಟ್‌ ಬೌಲ್‌ ಖರೀದಿ ಮಾಡಿದ್ರೆ ಅಲ್ಲೂ ಅದೇ ರೀತಿ ಉಪ್ಪು ಹಾಕಿ ಕೊಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಹಣ್ಣುಗಳ ಮೇಲೆ ಉಪ್ಪು ಸಿಂಪಡಿಸಿಕೊಂಡು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ.

ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 5 ಗ್ರಾಂ ಉಪ್ಪು ಮಾತ್ರ ಬೇಕಾಗುತ್ತದೆ. ದೇಹವು ಆಹಾರದಿಂದ ಅಗತ್ಯವಿರುವಷ್ಟು ಉಪ್ಪನ್ನು ಪಡೆಯುತ್ತದೆ. ಇದಕ್ಕಿಂತ ಹೆಚ್ಚಿನ ಉಪ್ಪಿನ ಪ್ರಮಾಣವು ಹೃದಯ ಮತ್ತು ರಕ್ತದೊತ್ತಡಕ್ಕೆ ಒಳ್ಳೆಯದಲ್ಲ. ಹಾಗಾಗಿ ಹಣ್ಣುಗಳಿಗೂ ಉಪ್ಪು ಹಾಕಿಕೊಂಡು ತಿನ್ನುವುದನ್ನು ತಪ್ಪಿಸಿ.

ಹೆಚ್ಚು ಉಪ್ಪು ತಿಂದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ನೀರಿನ ಧಾರಣವು ಪ್ರಾರಂಭವಾಗುತ್ತದೆ, ಇದು ಊತಕ್ಕೆ ಕಾರಣವಾಗುತ್ತದೆ. ದೇಹದ ವಿಷಗಳು ಒಳಗೇ ಉಳಿಯುತ್ತವೆ.

ಕತ್ತರಿಸಿದ ಹಣ್ಣುಗಳಿಗೆ ಉಪ್ಪನ್ನು ಹಾಕುವುದರಿಂದ ದೇಹವು ಅದರ ಪೋಷಕಾಂಶಗಳನ್ನು ಪಡೆಯುವುದಿಲ್ಲ. ಉಪ್ಪು ಹಾಕಿದ ಬಳಿಕ ಹಣ್ಣುಗಳ ಪೋಷಕಾಂಶಗಳು ನೀರಿನ ರೂಪದಲ್ಲಿ ಹೊರಬರುತ್ತವೆ. ನಂತರ ಹಣ್ಣುಗಳನ್ನು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಈ ಹಣ್ಣುಗಳನ್ನು ತಿನ್ನುವುದರಿಂದ ಮೂತ್ರದೊಂದಿಗೆ ದೇಹದ ನೀರು ಹೊರಬರುತ್ತದೆ, ಇದು ಸಹ ದೇಹಕ್ಕೆ ಒಳ್ಳೆಯದಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮೆಟ್ರೋದಲ್ಲಿ ಬಿದ್ದ ಕಸವನ್ನ ಸ್ವಚ್ಛಗೊಳಿಸಿದ ಯುವಕ:

Sun Dec 4 , 2022
ನಮ್ಮ ಸುತ್ತಮುತ್ತಲಿನ ವಾತಾವರಣ ಸ್ಚಚ್ಛವಾಗಿಟ್ಟುಕೊಳ್ಳಬೇಕು ಅನ್ನೋದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿದೆ. ಎಷ್ಟೋ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಕ್ಕ ಸಿಕ್ಕಲ್ಲಿ ಕಸ ಎಸೆಯುವುದನ್ನ ನಾವು ನೋಡಿರ್ತೆವೆ. ಆದರೆ ಇಲ್ಲೊಬ್ಬ ವ್ಯಕ್ತಿ ನಮ್ಮ ವಾತಾವರಣವನ್ನ ಯಾವ ರೀತಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಅನ್ನೋದನ್ನ ಸ್ವತಃ ತಾನೇ ಮಾಡಿ ತೋರಿಸಿದ್ದಾನೆ. ಅದು ದೆಹಲಿ ಮೆಟ್ರೋ ರೈಲ್ವೆ. ಅಲ್ಲೊಬ್ಬ ಯುವಕ ಟಿಪ್ ಟಾಪ್ ಆಗಿ ರೆಡಿ ಆಗಿ, ಕುತ್ತಿಗೆಗೆ ಟೈ ಕಟ್ಟಿಕೊಂಡವನು ನಿಂತಿದ್ದ. ಆತ ಒಮ್ಮಿಂದೊಮ್ಮೆ […]

Advertisement

Wordpress Social Share Plugin powered by Ultimatelysocial