ಅಕಾಲಿಕ ಮಳೆಗೆ ಹಾನಿಗೊಳಗಾದ ಮನೆಗಳಿಗೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ : ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತರಿಗೆ ಧೈರ್ಯ

 

ಲಕ್ಷ್ಮೇಶ್ವರ:  ಕಳೆದ ವಾರ ಸುರಿದ ಅಕಾಲಿಕ ಮಳೆಗೆ  ಹಾನಿಗೊಳಗಾದ ಮನೆಗಳಿಗೆ ಮಾಜಿ ಶಾಸಕ  ರಾಮಕೃಷ್ಣ ದೊಡ್ಡಮನಿ ಹಾಗೂ ನಗರ ಕಾಂಗ್ರೇಸ ಸಮಿತಿ ಅಧ್ಯಕ್ಷ ಅಂಬರೀಶ ತೆಂಬದಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮನೆಯವರಿಗೆ ಸಮಾಧಾನ ಹೇಳಿದರು ಹಾಗೂ ಅಧಿಕಾರಿಗಳು ಸಮೀಕ್ಷೆ ಮಾಡಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ತಿಳಿಸುತ್ತೆವೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.

ನಂತರ ಮಾತನಾಡಿದ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಂಬರೀಶ ತೆಂಬದ ಸುರಿದ ಅಕಾಲಿಕ ಮಳೆಗೆ ರೈತರು, ಬಡವರು ತುಂಬಾ ನೋವು ಅನುಭವಿಸುವಂತಾಗಿದೆ. ತಾಲೂಕು ಸೇರಿದಂತೆ ಲಕ್ಷ್ಮೇಶ್ವರ ಪಟ್ಟಣದಲ್ಲಿ  ಹಲವಾರು ಮನೆಗಳು ಬದ್ದಿದ್ದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ನಾವು ವಿಷಯ ತಿಳಿಸಿದ ಕೂಡಲೆ ಎಲ್ಲ  ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಟುಂಬದವರಿಗೆ ಧೈರ್ಯ ತುಂಬಿದರು. ಸರಕಾರದಿಂದ ಸಿಗುವ ಸೌಲಭ್ಯ ಕೊಡಿಸುವ ಪ್ರಯತ್ನವನ್ನು ಅಧಿಕಾರಿಗಳು ಹಾಗೂ ಶಾಸಕರು  ಅತಿ ಶೀಘ್ರದಲ್ಲಿ ಮಾಡಬೇಕು ಎಂದು  ಆಗ್ರಹಿಸಿದ್ದಾರೆ ಎಂದು ಹೇಳಿದರು.

ಸಂದರ್ಭದಲ್ಲಿ  ಮಾಜಿ ಶಾಸಕರಾದ ಶ್ರೀ ಆರ್.ಎಸ್.ದೊಡ್ಡಮನಿ, ನಗರ ಕಾಂಗ್ರೆಸ್ ಸಮೀತಿ. ಅಧ್ಯಕ್ಷ ಅಮರೀಶ. ತೆಂಬದಮನಿ, ಹನಮಂತಪ್ಪ ಶರಸೂರಿ, ನಂದೀಶ.ಚಕ್ರಸಾಲಿ, ಮುತ್ತಣ್ಣ.ಹೇಬ್ಬಾಳ , ಮುದಕಣ್ಣ ಗದ್ದಿ, ಬಸವರಾಜ ಗೋಡಿ, ಶಿವಣ್ಣ ಕಬ್ಬೇರ, ಶಿವರಾಜ ಆದಿ, ಗೂಳಪ್ಪ ಕಡ್ಡಿಪೂಜಾರ, ಮತ್ತಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಥುರಾ: ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಹಿಂದೂ ಮಹಾಸಭಾ ಅರ್ಜಿ;

Tue May 24 , 2022
  ಮಥುರಾ:ವಾರಣಾಸಿಯ ಜ್ಞಾನವಾಪಿ ಮಸೀದಿಯ ಕಾನೂನು ಹೋರಾಟದ ನಡುವೆಯೇ ಸೋಮವಾರ ಹಿಂದೂ ಮಹಾಸಭಾ ಶಾಹಿ ಈದ್ಗಾ ಮಸೀದಿಯ ಶುದ್ದೀಕರಣ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಯ ಮತ್ತೊಂದು ಭೂ ವಿವಾದವೇರ್ಪಟ್ಟಿದೆ. ಜುಲೈ 1 ರಂದು ಅರ್ಜಿ ವಿಚಾರಣೆ ನಡೆಯಲಿದೆ. ಶಾಹಿ ಈದ್ಗಾ ಮಸೀದಿಯು ಶ್ರೀ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿದೆ. ಶ್ರೀ ಕೃಷ್ಣ ಜನ್ಮಭೂಮಿಯ ಗರ್ಭಗುಡಿಯಲ್ಲಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು […]

Advertisement

Wordpress Social Share Plugin powered by Ultimatelysocial