ʻಗದರ್‌-2ʼ ಸಿನಿಮಾದ ನಟ ಸನ್ನಿ ಡಿಯೋಲ್ ಫಸ್ಟ್‌ ಲುಕ್‌ ಔಟ್‌

ʻಗದರ್‌-2ʼ (Gadar-2) ಸಿನಿಮಾದ ನಟ ಸನ್ನಿ ಡಿಯೋಲ್ (Sunny Deol) ಅವರ ಫಸ್ಟ್‌ ಲುಕ್‌ ಔಟ್‌ ಆಗಿದೆ. ZEE ಸ್ಟುಡಿಯೋಸ್ ಈ ವರ್ಷ ಮುಂಬರುವ ಚಲನಚಿತ್ರಗಳ 50 ಸೆಕೆಂಡುಗಳ ಮಾಂಟೇಜ್ ವಿಡಿಯೊವನ್ನು ಅನಾವರಣಗೊಳಿಸಿದೆ. ಈ ವಿಡಿಯೊದಲ್ಲಿ ಸಿನಿಮಾಗಳ ಸಂಕ್ಷಿಪ್ತ ತುಣುಕುಗಳು ಒಳಗೊಂಡಿದೆ.ಈ ಸಂದರ್ಭದಲ್ಲಿ ʻಗದರ್‌-2ʼ ಸಿನಿಮಾದ ನಟ ಸನ್ನಿ ಡಿಯೋಲ್ ಅವರ ಲುಕ್‌ ಔಟ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ ವೈರಲ್‌ ಆಗುತ್ತಿದೆ.2023ರಲ್ಲಿ ʻಗದರ್‌-2ʼ ಬಹು ನಿರೀಕ್ಷಿತ ಚಿತ್ರವಾಗಿದೆ. ಸಿನಿರಸಿಕರು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ʻಗದರ್‌-2ʼ ಸಿನಿಮಾದಲ್ಲಿ ಸನ್ನಿ ಡಿಯೋಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್‌ ಕಂಡು ಅಭಿಮಾನಿಗಳು ʻʻಗದರ್‌-ಏಕ್ ಪ್ರೇಮ್ ಕಥಾದ ತಾರಾ ಸಿಂಗ್ ಪಾತ್ರ ನೆನಪಿಸುತ್ತದೆʼʼಎಂದು ಟ್ವೀಟ್‌ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರು ಟ್ವೀಟ್‌ ಮೂಲಕ ʻಗದರ್‌-2 ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗಲಿದೆʼʼಎಂದು ಕಮೆಂಟ್‌ ಮೂಲಕ ಹೇಳಿಕೊಳ್ಳುತ್ತಿದ್ದಾರೆ.ವರದಿ ಪ್ರಕಾರ ಸಿನಿಮಾ ಹಿಮಾಚಲ ಪ್ರದೇಶ, ಇಂದೋರ್ ಮತ್ತು ಲಕ್ನೋದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಗದರ್-2 ಅನ್ನು ಅನಿಲ್ ಶರ್ಮಾ ನಿರ್ದೇಶಿಸಲಿದ್ದಾರೆ ಮತ್ತು 2023ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಅನಿಲ್ ಶರ್ಮಾ ನಿರ್ದೇಶನದ ʻಗದರ್ ಏಕ್ ಪ್ರೇಮ್ ಕಥಾʼ ಆ ಕಾಲದ ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಜತೆಗೆ, ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಯಸ್ಮಿತಾ ಕೊಲೆ- ಭದ್ರತಾ ವೈಫಲ್ಯದ ವಿರುದ್ಧ ಪ್ರೆಸಿಡೆನ್ಸಿ ಕಾಲೇಜ್ ಬಳಿ ಪ್ರತಿಭಟನೆ.

Thu Jan 5 , 2023
ಜನವರಿ 2ಕ್ಕೆ ಯಲಹಂಕದ ಪ್ರೆಸಿಡೆನ್ಸಿ ಕಾಲೇಜ್ ವಿದ್ಯಾರ್ಥಿನಿ ಲಯಸ್ಮಿತಾಳನ್ನ ಪಾಗಲ್ ಪ್ರೇಮಿ ಪವನ್ ಕಾಲೇಜ್ ಕ್ಯಾಂಪಸ್ ಒಳಗಡೆ ನುಗ್ಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಭಾರಿ ಭದ್ರತೆ ನಡುವೆ ಕಾಲೇಜಿನೊಳಗೆ ನಡೆದ ಕೊಲೆ ವಿರುದ್ದ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇದುವರೆಗೂ ರಾಜಾನುಕುಂಟೆ ಪೊಲೀಸರು ಪ್ರೆಸಿಡೆನ್ಸಿ ಕಾಲೇಜ್ ಆಡಳಿತ ಮಂಡಳಿ ಯಾರೋಬ್ಬರನ್ನು ಕರೆದು ವಿಚಾರಣೆ ನಡೆಸಿಲ್ಲ, ಬಂಧನ ಸಹ ಮಾಡಿಲ್ಲ ಎಂದು ಸ್ಥಳೀಯರು ಪ್ರೆಸಿಡೆನ್ಸಿ ಕಾಲೇಜ್ ವಿರುದ್ಧ […]

Advertisement

Wordpress Social Share Plugin powered by Ultimatelysocial