ಹಾಡು ನಿಲ್ಲಿಸಿದ ಭಾರತದ ಗಾನ ಕೋಗಿಲೆ; ಸಂಗೀತ ಇರುವವರೆಗೂ ಅವರ ಹೆಸರು ಚಿರಸ್ಥಾಯಿ; ಲತಾ ಮಂಗೇಶ್ಕರ್ ನಿಧನಕ್ಕೆ ಸಿಎಂ ಸಂತಾಪ

 

ಬೆಂಗಳೂರು: ಸಾರಸ್ವತ ಲೋಕದ ತಾರೆ ಸದಾ ಮಿನುಗುತ್ತಿರಲಿ. ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಅಗಲಿಕೆ ಇಡೀ ದೇಶಕ್ಕೆ ದುಃಖ ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಗಾಯಕಿ ಲತಾ ಮಂಗೇಶ್ಕರ್ ಹಿಮಾಲಯದಷ್ಟು ಎತ್ತರದವರು.ಅವರ ಹಾಡುಗಳನ್ನು ಕೇಳಿ ನಾವೆಲ್ಲರೂ ಬೆಳೆದವರು. ಅವರ ಧ್ವನಿಯಲ್ಲಿನ ದೇಶ ಭಕ್ತಿ ಹಾಡು ಕೇಳಿದಾಗ ದೇಶ ಭಕ್ತಿ ಉಕ್ಕಿ ಹರಿಯುತ್ತೆ. ಅಷ್ಟೇ ಪ್ರೇರಣಾದಾಯಕ ಅವರ ಧ್ವನಿ, ಹಾಡುಗಳು. ಎಲ್ಲಿಯವರೆಗೂ ಈ ಭೂಮಿಯ ಮೇಲೆ ಸಂಗೀತ, ಹಾಡುಗಾರಿಕೆ ಇರುತ್ತೋ ಅಲ್ಲಿಯವರೆಗೂ ಲತಾ ಮಂಗೇಶ್ಕರ್ ಅವರ ಹೆಸರು ಸ್ಥಿರಸ್ಥಾಯಿಯಾಗಿ ಎಲ್ಲರ ಹೃದಯದಲ್ಲಿ ಇರುತ್ತೆ ಎಂದರು.ಲತಾ ಮಂಗೇಶ್ಕರ್ ಕನ್ನಡದಲ್ಲೂ ಹಾಡಿದ್ದಾರೆ. ಅವರ ಕನ್ನಡದ ಹಾಡುಗಳು ಅಷ್ಟೇ ಜನಪ್ರಿಯವಾಗಿವೆ. ಇಂದು ಭಾರತದ ಕೋಗಿಲೆ ಹಾಡು ನಿಲ್ಲಿಸಿದ್ದು, ಇಡೆ ದೇಶಕ್ಕೆ ದುಃಖದ ಸಂಗತಿ. ಇದೀ ದೇಶವೆ ದುಖದಲ್ಲಿದೆ. ಲತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಕಂಬನಿ ಮಿಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಬುರಗಿ | ಕೊಲೆ: ಮೂವರಿಗೆ ಜೀವಾವಧಿ ಶಿಕ್ಷೆ

Sun Feb 6 , 2022
ಕಲಬುರಗಿ: ಇಲ್ಲಿನ ಹನುಮಾನ್ ನಗರದ ಸಮುದಾಯ ಭವನದ ಬಳಿ ಮಾರಕಾಸ್ತ್ರಗಳಿಂದ ಯುವಕನನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹58,500 ದಂಡ ವಿಧಿಸಿ ಆದೇಶ ಹೊರಡಿಸಿದೆ.ತಾರಫೈಲ್ ವಿಶಾಲ ನಗರ ನಿವಾಸಿ ರಾಮಚಂದ್ರ ಅಲಿಯಾಸ್ ದಾಬಾ ಪಪ್ಯಾ ಟಕ್ಕಳಕಿ (20), ಸಾಗರ ಬೇಡರ್ (20) ಹಾಗೂ ಹನುಮಾನ್ ನಗರದ ನಿವಾಸಿ ಅರ್ಜುನ ರಾಠೋಡ (19) ಶಿಕ್ಷೆಗೆ […]

Advertisement

Wordpress Social Share Plugin powered by Ultimatelysocial