ಪರೀಕ್ಷೆ ರದ್ದು ವಿಚಾರ : ಗೃಹ ಸಚಿವ ಅರಗ ಜ್ಞಾನೇಂದ್ರಗೆ ಪತ್ರ ಬರೆದ ಶಾಸಕರು

ಬೆಂಗಳೂರು : ಪಿಎಸ್ ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಪಿಎಸ್ ಐ ಪರೀಕ್ಷೆ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗಜ್ಞಾನೇಂದ್ರಗೆ 8 ಶಾಸಕರು ಪತ್ರ ಬರೆದಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರಗೆ ಶಾಸಕರಾದ ಕೆ.ಎಸ್.

ಲಿಂಗೇಶ್, ಪಿ.ರಾಜೇಶ್, ಸುನಿಲ್ ನಾಯ್ಕ್, ರಘುಪತಿ ಭಟ್, ರಾಜುಕುಮಾರ್ ತೇಲ್ಕೂರ್, ಹರೀಶ್ ಪೂಂಜಾ. ಲಾಲಾಜಿ ಮೆಂಡನ್, ಜೆ.ಎನ್. ಗಣೇಶ್. ರಾಘವೇಂದ್ರ ಹಿಟ್ನಾಳ್ ಪತ್ರ ಬರೆದಿದ್ದಾರೆ.

ಕೆಲವರು ಮಾಡಿದ ತಪ್ಪಿನಿಂದಾಗಿ ಸಂಪೂರ್ಣ ಪಿಎಸ್ ಐ ಪರೀಕ್ಷೆಯನ್ನೇ ರದ್ದು ಮಾಡಿರುವುದು ಸರಿಯಲ್ಲ. ಸರ್ಕಾರದ ಈ ನಿರ್ಧಾರದಿಂದ ಬಡ ಮಕ್ಕಳಿಗೆ ಅನ್ಯಾಯವಾಗಿದೆ. ಪಿಎಸ್ ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರಿಗೆ ಶಿಕ್ಷೆ ಆಗಬೇಕು. ಜೊತೆಗೆ ಬಡಮಕ್ಕಳಿಗೆ ಅನ್ಯಾಯವಾಗದ ರೀತಿ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತನಿಖೆ ಪೂರ್ಣವಗುವ ಮೊದಲೇ ಪಿಎಸ್ ಐ ಪರೀಕ್ಷೆ ರದ್ದು ಮಾಡಿರುವುದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಪ್ರಾಮಾಣಿಕರಿಗೆ ನ್ಯಾಯ ಸಿಗಬೇಕು ಎಂದು ಗೃಹ ಸಚಿವರಿಗೆ 8 ಶಿಕ್ಷಕರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯು.ಪಿ.ಎಸ್.ಸಿಯಲ್ಲಿ ಹುಬ್ಬಳ್ಳಿ ಯುವತಿಯ ಸಾಧನೆ: ಹೆತ್ತವರ‌ ಕನಸನ್ನು ಸಾಕಾರಗೊಳಿಸಿದ ಸಾಧಕಿ...!

Sat Jun 4 , 2022
ಹುಬ್ಬಳ್ಳಿ: ಆ ಯುವತಿ ತನ್ನ ಕನಸನ್ನು ನನಸಾಗಿಸಿಕೊಳ್ಳುವುದು ಮಾತ್ರವಲ್ಲದೆ ವಾಣಿಜ್ಯನಗರಿ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಆ ಯುವತಿಯ ಸಾಧನೆಗೆ ಕುಟುಂಬ ಮಾತ್ರವಲ್ಲದೆ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದೆ. ಹಾಗಿದ್ದರೇ ಯಾರು ಆ ಯುವತಿ..? ಅವಳು ಮಾಡಿದ ಸಾಧನೆ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ.. ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯ ನಿವಾಸಿ, ನಿವೃತ್ತ ರೈಲ್ವೆ ಗಾರ್ಡ್ ನ ಪುತ್ರಿ ತಹಸೀನಭಾನು ದವಡಿ 923 ಅಂಕ […]

Advertisement

Wordpress Social Share Plugin powered by Ultimatelysocial