: ‘ಆಧಿಪತ್ಯಕ್ಕಾಗಿ ರಜಪೂತ ರಾಜ ಮಹಾರಾಣ ಪ್ರತಾಪ್‌ ಮತ್ತು ಮೊಘಲ್‌ ದೊರೆ ಅಕ್ಬರ್‌ ಪರಸ್ಪರ ಯುದ್ಧ ಮಾಡಿದ್ದರು.

 

ಜೈಪುರ: ‘ಆಧಿಪತ್ಯಕ್ಕಾಗಿ ರಜಪೂತ ರಾಜ ಮಹಾರಾಣ ಪ್ರತಾಪ್‌ ಮತ್ತು ಮೊಘಲ್‌ ದೊರೆ ಅಕ್ಬರ್‌ ಪರಸ್ಪರ ಯುದ್ಧ ಮಾಡಿದ್ದರು. ಆದರೆ ಅದಕ್ಕೆ ಬಿಜೆಪಿ ‘ಧರ್ಮ’ದ ಬಣ್ಣವನ್ನು ಕೊಟ್ಟಿತು’ ಎಂದು ರಾಜಸ್ಥಾನ ಕಾಂಗ್ರೆಸ್‌ ಮುಖ್ಯಸ್ಥ ಗೋವಿಂದ ಸಿಂಗ್‌ ದೊಟಾಸರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗೌರ್‌ನಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ದೊಟಾಸರಾ, ‘ಬಿಜೆಪಿ ಪ್ರತಿಯೊಂದನ್ನೂ ಹಿಂದೂ-ಮುಸ್ಲಿಂ ಧರ್ಮದ ದೃಷ್ಟಿಯಿಂದಲೇ ನೋಡುತ್ತದೆ’ ಎಂದು ಆರೋಪಿಸಿದ್ದಾರೆ.

ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸತೀಶ್‌ ಪೂನಿಯಾ, ‘ಇದು ಆಧಿಪತ್ಯಕ್ಕಾಗಿ ಸಂಘರ್ಷವಲ್ಲ, ರಾಷ್ಟ್ರೀಯತೆಗಾಗಿ ನಡೆದ ಹೋರಾಟ. ಈ ಕುರಿತಾಗಿ ಈಗಾಗಲೇ ವಿವಾದಿತ ಹೇಳಿಕೆ ನೀಡಿದ್ದೀರಿ. ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲಿ ಯಾಕಿಷ್ಟು ಭಯ?’ ಎಂದು ಪ್ರಶ್ನಿಸಿದ್ದಾರೆ.

1576ರಲ್ಲಿ ಅಕ್ಬರ್‌ ಮತ್ತು ಮಹಾರಾಣ ಪ್ರತಾಪ್‌ ನಡುವೆ ಹಲ್ದಿಘಾಟಿ ಯುದ್ಧ ನಡೆದಿದೆ. ರಾಜಸ್ಥಾನದ ಮೇವಾರ್‌ ಅನ್ನು ರಜಪೂತ ದೊರೆ ಮಹಾರಾಣ ಪ್ರತಾಪ್‌ ಆಳುತ್ತಿದ್ದರು.

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ ಸತತ ಮೂರನೇ ದಿನವೂ ಮುಂದುವರಿದಿದೆ;

Fri Feb 18 , 2022
ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ ಸತತ ಮೂರನೇ ದಿನವೂ ಮುಂದುವರಿದಿದೆ. ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಹತ್ತು ನಿಮಿಷ ಕಾಲ ಮುಂದೂಡಿದರು. ಮಾಜಿ ಶಾಸಕ ಮಳ್ಳೂರ್ ಆನಂದ ರಾವ್ ನಿಧನಕ್ಕೆ ಸಂತಾಪ‌ ಸೂಚಿಸಲಾಯಿತು. ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಯಿತು. ಆದರೆ, ಕಾಂಗ್ರೆಸ್ ಸದಸ್ಯರು ಜೋರಾಗಿ ಗದ್ದಲ ನಡೆಸಿದರು. ‘ತಾವೂ ಸೇರಿದಂತೆ ವಿಪಕ್ಷ ಸದಸ್ಯರ […]

Advertisement

Wordpress Social Share Plugin powered by Ultimatelysocial