ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ.

 

ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ ಎನಿಸಿದ್ದವರು.ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ ದಿನ ಮಾರ್ಚ್ 5. ಅಂದಿನ ದಿನದಲ್ಲಿ ಮೈಸೂರಿನಲ್ಲಿ ಬದುಕನ್ನು ಕಳೆದ ನಮಗೆ ಹಿಂದೂಸ್ಥಾನಿ ಸಂಗೀತದ ಹೆಚ್ಚು ಪರಿಚಯವಿರಲಿಲ್ಲ. ದಸರೆಯ ಸಂದರ್ಭದಲ್ಲಿ ಮೈಸೂರಿನ ಅರಮನೆಯಲ್ಲಿ ದೀಪಗಳೆಲ್ಲಾ ಜಗಮಗಿಸುತ್ತಿದ್ದ ಒಂದು ದಿನ ಆ ಇಡೀ ವಾತಾವರಣವನ್ನೆಲ್ಲಾ ತಮ್ಮ ದೇವಗಾನದಲ್ಲಿ ತುಂಬಿಸುತ್ತಿದ್ದ ಗಂಗೂಬಾಯಿ ಹಾನಗಲ್ಲರ ಮೋಡಿ ನಮ್ಮನ್ನೆಲ್ಲಾ ಮೈಮರೆಸಿದ್ದು ಇಂದು ನೆನೆದರೂ ರೋಮಾಂಚನವೆನಿಸುತ್ತಿದೆ. ಈ ಭಾವದಲ್ಲಿ ಚಿಂತಿಸುವಾಗ ಹಿಂದೊಮ್ಮೆ ಓದಿದ ಗಂಗೂಬಾಯಿ ಹನಗಲ್ ಅವರ ಜೀವನದ ನೈಜ ಘಟನೆಯೊಂದು ನೆನಪಾಗುತ್ತಿದೆ.
ಆಕಾಶವಾಣಿ ದೆಹಲಿ ಕೇಂದ್ರ. ಸಾಮಾನ್ಯ ವೇಷದ ಗಂಗೂಬಾಯಿಯವರು ಡ್ಯೂಟಿ ರೂಮಿನಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಪರಿಚಾರಕ ಕೊಂಚ ಅಸಡ್ಡೆಯಿಂದ ಏನು ಎತ್ತ ಎಂದು ವಿಚಾರಿಸದೆ ಅಸಡ್ಡೆತನದಿಂದ ಹೊರಗಡೆಗೆ ಬೆಂಚಿನ ಮೇಲೆ ಕಾದು ಕುಳಿತುಕೊಳ್ಳಲು ಹೇಳಿದ. ಕಾರ್ಯಕ್ರಮ ನಿಗದಿಯಾದ ಹೊತ್ತಿಗೆ ಸರಿಯಾಗಿ ಗಂಗೂಬಾಯಿ ಅವರು ಸ್ಟುಡಿಯೋ ಪ್ರವೇಶಿಸಿದರು. ಅಲ್ಲಿದ್ದವ ಕೂಡಾ ಅದೇ ಒರಟುತನದಿಂದ ಪ್ರಶ್ನಿಸಿದ.
‘ಯಾಕ್ರೀ ಇಷ್ಟು ತಡಾ?’‘ನಾನು ಬಂದು ಅರ್ಧಾ ತಾಸು ಆತು. ನಿಮ್ಮ ಪರಿಚಾರಕ ಒಳಗೆ ಬಿಡಲಿಲ್ಲ’.ಆತ ಮತ್ತೆ ಕೇಳಿದ-‘ಸರಿ. ಯಾವ ಪಟ್ಟಿ ನಿಮ್ಮದು? ಅಲ್ಲಿ ತಂಬೂರಿ ಇದೆ, ತಗೋರಿ’
ಗಂಗೂಬಾಯಿ ಅಲ್ಲಿದ್ದ ತಂಬೂರಿ ತೆಗೆದುಕೊಂಡು ಶ್ರುತಿ ಮಾಡಿಕೊಂಡು ಹಾಡಲು ಸನ್ನದ್ಧರಾದರು. ಸ್ಟುಡಿಯೋದಲ್ಲಿ ಕೆಂಪು ದೀಪ ಉರಿಯತೊಡಗಿತು. ಹಾಡತೊಡಗಿದರು. ರಾಗ ಪೂರಿಯಾ! ಅಮೋಘ ಸಂಗೀತವೆಂದು ಕೇಳಿದ ಎಲ್ಲರಿಗೂ ಅರ್ಥವಾಗುತ್ತಿತ್ತು. ಕಿರಣಾ ಘರಾಣೆಯ ಶುದ್ಧ ಶೈಲಿಯ ಹಾಡುಗಾರಿಕೆ! ದೆಹಲಿಯ ನಿಲಯ ನಿರ್ದೇಶಕರು ಅಕಸ್ಮಾತ್ ಹಾಡುಗಾರಿಕೆಯನ್ನು ಕೇಳಿದರು. ಆಗೆಲ್ಲ ಆಕಾಶವಾಣಿಯಲ್ಲಿ ನೇರಪ್ರಸಾರದ ಕಾರ್ಯಕ್ರಮಗಳೇ ಹೆಚ್ಚು. ರೆಕಾರ್ಡಿಂಗ್ ಮಾಡುವ ಅನುಕೂಲ ಅಷ್ಟಾಗಿ ಇರಲಿಲ್ಲ. ಸುಶ್ರಾವ್ಯವಾಗಿ ಮೂಡಿಬರುತ್ತಿರುವ ಕಾರ್ಯಕ್ರಮವನ್ನು ಕೇಳಿ ನಿಲಯದ ನಿರ್ದೇಶಕರು ತಕ್ಷಣ ಸ್ಟುಡಿಯೋಗೆ ಧಾವಿಸಿದರು. ಆ ಮಹಿಳೆ ಹಾಡುತ್ತಿದ್ದ ಹಾಡುಗಾರಿಕೆಯನ್ನು ಮನಸಾರೆ ಕೇಳಿ ಆನಂದಿಸಿದರು. ಕಾರ್ಯಕ್ರಮ ಮುಗಿದ ಮೇಲೆ ಕೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಪಾಂಡುರಂಗ ಭೀಮರಾವ್ ದೇಸಾಯಿ ಅವರು ಕರ್ನಾಟಕ ಇತಿಹಾಸ ಸಾಹಿತ್ಯ ಸಂಸ್ಕೃತಿಗಳ ಖ್ಯಾತ ಸಂಶೋಧಕರು.

Mon Mar 6 , 2023
  ಡಾ. ಪಾಂಡುರಂಗ ಭೀಮರಾವ್ ದೇಸಾಯಿ ಅವರು ಕರ್ನಾಟಕ ಇತಿಹಾಸ ಸಾಹಿತ್ಯ ಸಂಸ್ಕೃತಿಗಳ ಖ್ಯಾತ ಸಂಶೋಧಕರೂ, ಶಾಸನತಜ್ಞರೂ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತೀಯ ಇತಿಹಾಸ ಸಂಸ್ಕೃತಿಗಳ ಪ್ರಾಧ್ಯಾಪಕರೂ ಆಗಿದ್ದವರು. ಮಾರ್ಚ್ 5 ಈ ಮಹನೀಯರ ಸಂಸ್ಮರಣಾ ದಿನ.ಪಾಂಡುರಂಗ ದೇಸಾಯಿಯವರು ರಾಯಚೂರು ಜಿಲ್ಲೆಯ ಕೊಪ್ಪಳದ ಬಳಿಯ ಕಿನ್ಹಾಲದಲ್ಲಿ 1910ರ ಡಿಸೆಂಬರ್ 24ರಂದು ಜನಿಸಿದರು. ತಂದೆ ಭೀಮರಾವ್. ತಾಯಿ ಭಾಗೀರಥೀಬಾಯಿ.ಪಾಂಡುರಂಗ ದೇಸಾಯಿ ಅವರ ಪ್ರಾಥಮಿಕ ಶಿಕ್ಷಣ ಸೇಡಮ್‍ನಲ್ಲೂ, ಸೆಕೆಂಡರಿ ಶಿಕ್ಷಣ ಗುಲ್ಬರ್ಗದಲ್ಲೂ ನಡೆಯಿತು. […]

Advertisement

Wordpress Social Share Plugin powered by Ultimatelysocial