ಈ ಪಾನೀಯ ಕುಡಿದ್ರೆ ಕಾಡಲ್ಲ ಗ್ಯಾಸ್ಟ್ರಿಕ್ ಸಮಸ್ಯೆ!

ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ನಾವು ಸೇವಿಸುವ ಆಹಾರ ಸರಿಯಾಗಿ ಇರದೇ ಇರುವುದರಿಂದ ದೇಹದಲ್ಲಿ ಹೆಚ್ಚಿನ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ಹೆಚ್ಚು ಗ್ಯಾಸ್ ರೀಲಿಸ್ ಆಗಬೇಕು. ಇದು ಹೊರಹೋಗದಿದ್ದರೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಓಮ ಕಾಳು ಇದಕ್ಕೆ ಅತ್ಯುತ್ತಮ ಮದ್ದಾಗಬಲ್ಲದು. ಇದರಲ್ಲಿ ಫೈಬರ್ ಹಾಗೂ ಮಿನರಲ್ಸ್ ಇದ್ದು ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಎರಡು ಲೋಟ ನೀರಿಗೆ ಹಾಕಿ ಒಂದು ಚಮಚದಷ್ಟು ಓಮ ಕಾಳುಗಳನ್ನು ಹಾಕಿ ಕುದಿಸಿ. ಜೊತೆಗೆ ಪುದಿನಾ ಸೇರಿಸಿ.‌ ಇದರಲ್ಲಿ ಮ್ಯಾಂಗನೀಸ್, ವಿಟಮಿನ್ಸ್, ಫೈಬರ್ ಹೇರಳವಾಗಿದೆ. ಇದು ಹೊಟ್ಟೆ ನೋವು, ಹೊಟ್ಟೆ ಉಬ್ಬರವನ್ನು ನಿವಾರಣೆ ಮಾಡುತ್ತದೆ. ನಂತರ ಒಣ ಶುಂಠಿ ಪುಡಿಯನ್ನು ಸೇರಿಸಿ. ದೇಹದಲ್ಲಿ ಇನ್ಫೆಕ್ಷನ್ ಸಮಸ್ಯೆ ಇದ್ದರೆ ಅದರ ನಿವಾರಣೆಗೆ ಶುಂಠಿ ಉಪಕಾರಿ.

ಇವೆಲ್ಲವನ್ನೂ ಸೇರಿಸಿ ಎರಡು ಗ್ಲಾಸ್ ನೀರು ಒಂದು ಗ್ಲಾಸ್ ಆಗುವ ತನಕ ಕುದಿಸಿ. ತಣ್ಣಗಾದ ಬಳಿಕ ಸೋಸಿ. ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ. ಇದನ್ನು ಹತ್ತು ದಿನಗಳ ಕಾಲ ನಿಯಮಿತವಾಗಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎವರ್‌ಗ್ರೀನ್ ಹೀರೊ ಶಿವರಾಜ್‌ಕುಮಾರ್. ವಯಸ್ಸು 60, ಆದರೂ ಯಂಗ್‌ ಅಂಡ್ ಎನೆರ್ಜೆಟಿಕ್.

Tue Feb 21 , 2023
    ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹೀರೊ ಶಿವರಾಜ್‌ಕುಮಾರ್. ವಯಸ್ಸು 60, ಆದರೂ ಯಂಗ್‌ ಅಂಡ್ ಎನೆರ್ಜೆಟಿಕ್. ಶಿವಣ್ಣನಿಗೆ ಇಷ್ಟೊಂದು ವಯಸ್ಸು ಆಗೊಯ್ತಾ? ಅಂತ ಯಾರೂ ಊಹಿಸಲು ಸಾಧ್ಯವೇ ಇಲ್ಲ. ದಿನದಿಂದ ದಿನಕ್ಕೆ ಶಿವರಾಜ್‌ಕುಮಾರ್ ಯಂಗ್ ಆಗುತ್ತಿದ್ದಾರೆ. ಅವರ ಎಜರ್ಜಿ, ಸ್ಪೀಡ್ ಇವೆಲ್ಲವನ್ನೂ ಬೀಟ್ ಮಾಡೋಕೆ ಇಂದಿನ ಯುವಕರಿಗೇ ಸಾಧ್ಯವಿಲ್ಲ. ಆದರೂ, 125 ಸಿನಿಮಾಗಳು ಆಯ್ತು. ಇನ್ನೊಂದು 25 ಸಿನಿಮಾ ಮಾಡಿ ಶಿವಣ್ಣ ನಟನೆಯಿಂದ ನಿವೃತ್ತಿ ಪಡೆಯಬಹುದು ಎಂದು ಭಾವಿಸಿದ್ದರು. ಆದರಕ್ಕೆ […]

Advertisement

Wordpress Social Share Plugin powered by Ultimatelysocial