ಕರ್ನಾಟಕ ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾಗಿ ಭಾಮಾ ಹರೀಶ್ ಆಯ್ಕೆ:

ಕರ್ನಾಟಕ ಚಲನಚಿತ್ರ ವಾಣಿಜ್ಯ ಚುನಾವಣೆ ಹಲವು ದಿನಗಳಿಂದ ಕುತೂಹಲ ಕೆರಳಿಸಿತ್ತು. ಫಿಲ್ಮ್ ಚೇಂಬರ್‌ನಲ್ಲಿ ಕಳೆದ ಹಲವು ದಿನಗಳಿಂದ ಚುನಾವಣೆ ನಡೆದಿರಲಿಲ್ಲ. ಈ ಕಾರಣಕ್ಕೆ ನಿರ್ಮಾಪಕರಾಗಿದ್ದ ಭಾ ಮಾ ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ ಕಾರಣದಿಂದ ಚುನಾವಣೆ ನಡೆಯದಿದ್ದರೂ, ಆ ಬಳಿಕ ಚುನಾವಣೆಯನ್ನು ನಡೆಸಲು ಮುಂದಾಗಿಲ್ಲ ಎಂದು ಕಿಡಿಕಾರಿದ್ದರು.

ಜೊತೆಗೆ ಇನ್ನೂ ಕೆಲವು ಸದಸ್ಯರ ಒತ್ತಡದಿಂದ ಮೇ 28ರಂದು ಚುನಾವಣೆ ನಡೆಸಲು ಫಿಲ್ಮ್ ಚೇಂಬರ್ ಮುಂದಾಗಿದ್ದಾಗಿತ್ತು.

ಮೇ 28ರ ಬೆಳಗ್ಗೆಯಿಂದಲೇ ಫಿಲ್ಮ್ ಚೇಂಬರ್‌ನಲ್ಲಿ ಚುನಾವಣೆ ಕಾವು ಜೋರಾಗಿತ್ತು. ಭಾ ಮಾ ಹರೀಶ್ ಹಾಗೂ ಸಾರಾ ಗೋವಿಂದು ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದರು. ಇಬ್ಬರ ಬಣಗಳು ಕೂಡ ಕಳೆದ ಕೆಲವು ದಿನಗಳಿಂದ ಸದಸ್ಯರನ್ನು ಮನವೊಲಿಸಲು ಮುಂದಾಗಿದ್ದರು. ಅದರಂತೆ ಭಾ ಮಾ ಹರೀಶ್ ಹೆಚ್ಚು ಮತಗಳನ್ನು ಪಡೆದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭಾ ಮಾ ಹರೀಶ್ ಪಡೆದ ಮತಗಳೆಷ್ಟು?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾ ಮಾ ಹರೀಶ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ದರ್ಶನ್ ಅಭಿನಯದ ‘ಮೆಜೆಸ್ಟಿಕ್’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇವರ ಬೆಂಬಲಕ್ಕೆ ಹಿರಿಯ ನಟಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು, ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಸೇರಿದಂತೆ ಹಲವು ಮಂದಿ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದರು.

ಮೇ 28ರ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಿದ್ದ ಚುನಾವಣೆಗೆ ಫಿಲ್ಮ್ ಚೇಂಬರ್‌ನ ಸದಸ್ಯರು ಬಂದು ಮತಚಲಾಯಿಸಿದ್ದರು. ಶೇ.62ರಷ್ಟು ಮತಗಳು ಚಲಾವಣೆಗೊಂಡಿದ್ದವು. 796 ನಿರ್ಮಾಪಕರು, 301 ಮಂದಿ ವಿತರಕರು ಹಾಗೂ 679 ಮಂದಿ ಪ್ರದರ್ಶನಕರು ಪಾಲ್ಗೊಂಡಿದ್ದರು. ಇವರಲ್ಲಿ ಭಾ. ಮಾ ಹರೀಶ್‌ಗೆ 781 ಮತಗಳು ಪಡೆದುಕೊಳ್ಳುವ ಮೂಲಕ ಫಿಲ್ಮ್ ಚೇಂಬರ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಾಜಿ ಅಧ್ಯಕ್ಷ ಸಾ ರಾ ಗೋವಿಂದುಗೆ ಸೋಲು

ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಈ ಬಾರಿ ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಕೂಗು ಕೇಳಿಬಂದಿತ್ತು. ಅಲ್ಲದೆ, ಫಿಲ್ಮ್ ಚಂಬರ್‌ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಕಾರಣಕ್ಕೆ ಈ ಬಾರಿ ಸಾ ರಾ ಗೋವಿಂದು ಬೆಂಬಲಕ್ಕೆ ಫಿಲ್ಮ್ ಚೇಂಬರ್ ಸದಸ್ಯರು ನಿಂತಿಲ್ಲ ಎನ್ನಲಾಗಿದೆ.

ಸಾ ರಾ ಗೋವಿಂದುಗೆ ಈ ಬಾರಿಯ ಚುನಾವಣೆಯಲ್ಲಿ ಕೇವಲ 378 ಮತಗಳು ಮಾತ್ರ ಸಿಕ್ಕಿದ್ದು, ಇವರ ಬಣದಿಂದ ಕಣಕ್ಕಿಳಿದವರೂ ಸೋಲುಂಡಿದ್ದಾರೆ. ಅಂದ್ಹಾಗೆ ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಜೈ ಜಗದೀಶ್ ಆಯ್ಕೆಯಾಗಿದ್ದು, 673 ಮತಗಳನ್ನು ಪಡೆದುಕೊಂಡಿದ್ದಾರೆ. ವಿತರಕರ ವಲಯದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಶಿಲ್ಪ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿಯಾಗಿ ಹಿರಿಯ ನಟ ಸುಂದರ್ ರಾಜ್, ವಿತರಕರ ವಲಯದಿಂದ ಕುಮಾರ್ ಎಂ ಎನ್, ಪ್ರದರ್ಶಕರ ವಲಯದಿಂದ ಕುಶಾಲ್ ಎಲ್‌ ಸಿ ಆಯ್ಕೆಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರೀ ಸೋಲು ಕಂಡ ಬಾಲಿವುಡ್ ಬಿಗ್ ಬಜೆಟ್ ಚಿತ್ರ..!

Sun May 29 , 2022
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಾಣಾವತ್ ತಮ್ಮ ಜೀವಮಾನದಲ್ಲೇ ಇಂಥದ್ದೊಂದು ಅವಮಾನ ಎದುರಿಸಿಲ್ಲ ಎನ್ನುವಷ್ಟ ‘ಧಾಕಡ್’ ಚಿತ್ರ ಅವರನ್ನು ನಿದ್ದೆಗೆಡಿಸಿದೆ. ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚಲಿದೆ ಎಂಬ ನಿರೀಕ್ಷೆಯಿತ್ತು. ಹಾಗಾಗಿಯೇ ದೇಶದಾದ್ಯಂತ ಕಂಗನಾ ಸಂಚರಿಸಿ, ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ, ಆಗಿದ್ದು ಬೇರೆ. ಈ ಚಿತ್ರದಲ್ಲಿ ಕಂಗನಾ ಮಹಿಳಾ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದರು. ಇಡೀ […]

Advertisement

Wordpress Social Share Plugin powered by Ultimatelysocial