BSNL ಈ ಪ್ಲಾನ್ ನಲ್ಲಿ 425 ದಿನ ಸಿಗಲಿದೆ 3ಜಿಬಿ ಡೇಟಾ

BSNL ಈ ಪ್ಲಾನ್ ನಲ್ಲಿ 425 ದಿನ ಸಿಗಲಿದೆ 3ಜಿಬಿ ಡೇಟಾ

ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡುವಲ್ಲಿ ಬಿ ಎಸ್ ಎನ್ ಎಲ್ ಹಿಂದೆ ಬಿದ್ದಿಲ್ಲ. ಬಿ ಎಸ್ ಎನ್ ಎಲ್ ಗ್ರಾಹಕರಿಗೆ ಅಗ್ಗದ ಪ್ಲಾನ್ ಜೊತೆ ದೀರ್ಘಾವಧಿ ಪ್ಲಾನ್ ನಲ್ಲಿಯೂ ಭರ್ಜರಿ ಡೇಟಾ ನೀಡುತ್ತದೆ. ಕಂಪನಿ ಪ್ರಿಪೇಯ್ಡ್ ಯೋಜನೆಗಳಲ್ಲಿ 425 ದಿನಗಳ ಮಾನ್ಯತೆ ನೀಡುತ್ತಿದೆ.

ಪ್ರಸ್ತುತ ಯಾವುದೇ ಟೆಲಿಕಾಂ ಕಂಪನಿಯು ಬಳಕೆದಾರರಿಗೆ 365 ದಿನಗಳಿಗಿಂತ ಹೆಚ್ಚು ವ್ಯಾಲಿಡಿಟಿಯನ್ನು ನೀಡುತ್ತಿಲ್ಲ.

ಬಿ ಎಸ್ ಎನ್ ಎಲ್ 2399 ರೂಪಾಯಿ ಪ್ರಿಪೇಯ್ಡ್ ಯೋಜನೆಯು 365 ದಿನಗಳ ಮಾನ್ಯತೆಯನ್ನು ನೀಡುತ್ತಿತ್ತು. ಈಗ ಅದನ್ನು 60 ದಿನಗಳವರೆಗೆ ವಿಸ್ತರಿಸಲಾಗಿದೆ. ಈ ಯೋಜನೆ ಲಾಭವನ್ನು ಗ್ರಾಹಕ ಡಿಸೆಂಬರ್ 31ರೊಳಗೆ ಪಡೆಯಬೇಕು.

2399 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ 3ಜಿಬಿ ಡೇಟಾ ಲಭ್ಯವಿದೆ. ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಕಳುಹಿಸಬಹುದು. 425 ದಿನಗಳವರೆಗೆ ಬಿಎಸ್‌ಎನ್‌ಎಲ್ ಟ್ಯೂನ್‌ಗಳೊಂದಿಗೆ Eros Now ಗೆ ಪ್ರವೇಶ ಪಡೆಯಬಹುದು.

ದೀರ್ಘಾವಧಿ ಮಾನ್ಯತೆಯ ಬಿ ಎಸ್ ಎನ್ ಎಲ್ ಇನ್ನೊಂದು ಯೋಜನೆ ಬೆಲೆ 1499 ರೂಪಾಯಿ. ಇದು 24ಜಿಬಿ ಡೇಟಾ, ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಇದು 365 ದಿನಗಳ ಸಿಂಧುತ್ವ ಹೊಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾತಾಳಕ್ಕೆ ಕುಸಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ

Mon Dec 20 , 2021
ಮುಂಬಯಿ: ಯುರೋಪ್ ಸೇರಿದಂತೆ ಜಾಗತಿಕವಾಗಿ ಒಮಿಕ್ರಾನ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ಇದರಿಂದ ಆರ್ಥಿಕ ಹೊಡೆತ ಬೀಳಲಿದೆ ಎಂಬ ಆತಂಕದ ಪರಿಣಾಮ ಸೋಮವಾರ (ಡಿಸೆಂಬರ್ 20) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಪಾತಾಳಕ್ಕೆ ಕುಸಿದಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,300 ಅಂಕಗಳಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,329.70 ಅಂಕ ಕುಸಿತದೊಂದಿಗೆ 55,682.04 ಅಂಕಗಳಲ್ಲಿ ವಹಿವಾಟು ನಡೆಸಿದೆ. ಎನ್ ಎಸ್ […]

Advertisement

Wordpress Social Share Plugin powered by Ultimatelysocial